MS Dhoni (ಚಿತ್ರ Instagram)
- ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹಣಾಹಣಿಗೆ ಒಂದೇ ದಿನ ಬಾಕಿ
- ಧೋನಿ ತಮ್ಮ ಪುಟ್ಟ ಅಭಿಮಾನಿಯೊಬ್ಬನ ಜೊತೆ ನಡೆಸಿದ ಹೃದಯಸ್ಪರ್ಶಿ ಸಂಭಾಷಣೆ ವಿಡಿಯೋ ವೈರಲ್
- ಮಗುವೊಂದು ಕೈಯಲ್ಲಿ ಸಣ್ಣ ಬ್ಯಾಟ್ ಹಿಡಿದು ಧೋನಿ ಬಳಿ ಬಂದು ಆಟೋಗ್ರಾಫ್ ಕೇಳುವುದನ್ನು ಕಾಣಬಹುದು
MS Dhoni: ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹಣಾಹಣಿಗೂ ಮುನ್ನ ಸಿಎಸ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ವಾಂಖೆಡೆ ಕ್ರೀಡಾಂಗಣದಲ್ಲಿ ಅಭ್ಯಾಸದ ಬಳಿಕ ಧೋನಿ ತಮ್ಮ ಪುಟ್ಟ ಅಭಿಮಾನಿಯೊಬ್ಬನ ಜೊತೆ ನಡೆಸಿದ ಹೃದಯಸ್ಪರ್ಶಿ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.
ವಿಡಿಯೋದಲ್ಲೇನಿದೆ?
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಗುವೊಂದು ಕೈಯಲ್ಲಿ ಸಣ್ಣ ಬ್ಯಾಟ್ ಹಿಡಿದು ಧೋನಿ ಬಳಿ ಬಂದು ಆಟೋಗ್ರಾಫ್ ಕೇಳುವುದನ್ನು ಕಾಣಬಹುದು. ಈ ವೇಳೆ ಆಟಗಾರ ಮಗುವಿನೊಂದಿಗೆ ಪ್ರೀತಿಯಿಂದ ಸಂವಹನ ನಡೆಸಿ ಬ್ಯಾಟ್ ಮೇಲೆ ಸಹಿಹಾಕಿ ಮಗುವಿಗೆ ನೀಡಿದರು. ನಂತರ ಬಾಲಕನ ತಂದೆ ಫೋಟೋ ಫ್ರೇಮ್ನ್ನು ಧೋನಿಗೆ ನೀಡಲು ಮಗುವಿಗೆ ಕೊಟ್ಟರು.
ನಂತರ ಧೋನಿ ಆ ಫೋಟೋ ಫ್ರೇಮ್ಗೂ ತಮ್ಮ ಸಹಿ ಹಾಕಿ ಮಗುವಿಗೆ ನೀಡಿ ಅದನ್ನು ನಿಮ್ಮ ತಂದೆಗೆ ನೀಡಿ ಎಂದು ಹೇಳಿದರು. ಆಗ ಬಾಲಕ ಮಾತನಾಡಿ ಬ್ಯಾಟ್ ನನಗೆ ಫೋಟೋ ಫ್ರೇಮ್ ನನ್ನ ತಂದೆಗೆ ಎಂದು ಹೇಳಿದನು.
ಆ ಮಗು ಎಂಎಸ್ ಧೋನಿ ನೀಡಿದ ಉಡುಗೊರೆಯನ್ನು ಸಂತೋಷದಿಂದ ಸ್ವೀಕರಿಸಿ ತನ್ನ ತಂದೆ ಬಳಿ ಹೋದನು. ಮಗುವಿನ ಈ ಮುಗ್ಧ ಸಂಭ್ರಮ ಮತ್ತು ಅದಕ್ಕೆ ಕಾರಣರಾದ ಧೋನಿಯವರ ದೊಡ್ಡ ಗುಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಲ್ಚಲ್ ಎಬ್ಬಿಸಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ವಿಡಿಯೋಕ್ಕೆ ಪ್ರತಿಕ್ರಿಯಿಸಿದ್ದು, ಎಷ್ಟೇ ಬ್ಯುಸಿಯಾಗಿದ್ದರೂ ಮಕ್ಕಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವುದನ್ನು ಧೋನಿ ಅವರಿಂದ ಕಲಿಯಬೇಕು" ಎಂದು ಕಾಮೆಂಟ್ ಮಾಡಿದ್ದಾರೆ. ಆದಾಗ್ಯೂ, ಎಂತಹ ಬ್ಯುಸಿ ಸಮಯದಲ್ಲೂ ಧೋನಿ ಮಕ್ಕಳೊಂದಿಗೆ ಪ್ರೀತಿಯಿಂದ ನಡೆದುಕೊಂಡ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರ ಸರಳತೆಗೆ ಶ್ಲಾಘಿಸಿದ್ದಾರೆ.
ಮುಂಬೈ ಇಂಡಿಯನ್ಸ್ VS ಚೆನ್ನೈ ಸೂಪರ್ ಕಿಂಗ್ಸ್
ಈ ಸೀಸನ್ನ ಐಪಿಎಲ್ 2026 ರಲ್ಲಿ ಮಹೇಂದ್ರ ಸಿಂಗ್ ಧೋನಿ ಯಾವುದೇ ಪಂದ್ಯವನ್ನೂ ಆಡಿಲ್ಲ. ಮಂಡಿರಜ್ಜು ಗಾಯದಿಂದ ಅವರನ್ನು ಮೊದಲ ಆರು ಪಂದ್ಯಗಳಿಂದ ಹೊರಗಿಡಲಾಗಿತ್ತು. ಆದಾಗ್ಯೂ, ಗುರುವಾರ (ಏಪ್ರಿಲ್ 23) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ತೀವ್ರ ಪೈಪೋಟಿಯ ಪಂದ್ಯದಲ್ಲಿ ಅವರು ತಂಡಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ (ಏಜೆನ್ಸೀಸ್).