MS Dhoni (ಚಿತ್ರ X) 
ಕ್ರಿಕೆಟ್

ಎಸ್ಆರ್​ಎಚ್ ವಿರುದ್ಧ ಕಣಕ್ಕಿಳಿಯುತ್ತಾರಾ ಧೋನಿ...? ಸಿಎಸ್​ಕೆ ಎಕ್ಸ್ ಪೋಸ್ಟ್ ನಿಂದ ಸಿಕ್ತು ದೊಡ್ಡ ಸುಳಿವು! MS Dhoni

ಪ್ರಮುಖ ಮುಖ್ಯಾಂಶಗಳು

  • ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಆಟಗಾರ ಎಂಎಸ್ ಧೋನಿ
  • ಎಸ್​ಆರ್​ಎಚ್ ವಿರುದ್ಧದ ಪಂದ್ಯಕ್ಕಾಗಿ ಹೈದರಾಬಾದ್‌ಗೆ ತೆರಳಿದ ಥಲಾ
  • ಈಗಾಗಲೇ ತವರಿನಲ್ಲಿ ಎರಡು ಗೆಲುವು ಸಾಧಿಸಿರುವ ಸಿಎಸ್​ಕೆ
  • ಬೇರೆ ಮೈದಾನಗಳಲ್ಲೂ ತನ್ನ ವಿಜಯಯಾತ್ರೆಯನ್ನು ಮುಂದುವರಿಸಲು ಹವಣಿಸುತ್ತಿದೆ
MS Dhoni: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಆಟಗಾರ ಎಂಎಸ್ ಧೋನಿ ಶನಿವಾರ ನಡೆಯಲಿರುವ ಎಸ್​ಆರ್​ಎಚ್ ವಿರುದ್ಧದ ಪಂದ್ಯಕ್ಕಾಗಿ ಹೈದರಾಬಾದ್‌ಗೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಈಗಾಗಲೇ ತವರಿನಲ್ಲಿ ಎರಡು ಗೆಲುವು ಸಾಧಿಸಿರುವ ಸಿಎಸ್​ಕೆ, ಈಗ ಬೇರೆ ಮೈದಾನಗಳಲ್ಲೂ ತನ್ನ ವಿಜಯಯಾತ್ರೆಯನ್ನು ಮುಂದುವರಿಸಲು ಹವಣಿಸುತ್ತಿದೆ. ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದು ತಂಡದ ಪ್ರಮುಖ ಗುರಿಯಾಗಿದೆ.

ವೈರಲ್​ ಆಯ್ತು ಧೋನಿ ವಿಡಿಯೋ

ಎಸ್ ಆರ್ ಎಚ್ ವಿರುದ್ಧದ ಪಂದ್ಯಕ್ಕಾಗಿ ಧೋನಿ ಚೆನ್ನೈನಿಂದ ಹೈದರಾಬಾದ್​ಗೆ ತೆರಳಲು ತಂಡದ ಬಸ್​ ಹತ್ತುತ್ತಿರುವ ವಿಡಿಯೋವೊಂದನ್ನು ಸಿಎಸ್‌ಕೆ ತಂಡ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮೈದಾನದಲ್ಲಿ ಥಲಾ ಮಿಂಚಿನ ಬ್ಯಾಟಿಂಗ್​ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಆದಾಗ್ಯೂ, ಕಾಲಿನ ಸ್ನಾಯು ಸೆಳೆತದಿಂದಾಗಿ ಇಲ್ಲಿಯವರೆಗೂ ಪಂದ್ಯದಿಂದ ಹೊರಗುಳಿದ ಧೋನಿ ಎಸ್​ಆರ್​ಎಚ್​ ಪಂದ್ಯದಲ್ಲಿ ಆಡುತ್ತಾರಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಹಿಂದೆ ಧೋನಿ ಅವರ ಚೇತರಿಕೆಗೆ ಎರಡು ವಾರಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಮ್ಯಾನೇಜ್​ಮೆಂಟ್​ ತಿಳಿಸಲಾಗಿತ್ತು. ಇದೀಗ ಆ ಗಡುವು ಮುಗಿದಿದ್ದು, ಧೋನಿ ತಂಡದ ಜೊತೆ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿರುವುದು ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
ಈ ಹಿಂದೆ ಎಂಎಸ್​ ಧೋನಿ ಗಾಯದಿಂದ ಚೇತರಿಸಿಕೊಂಡು ಅಧೀಕೃತವಾಗಿ ಧೋನಿ ಮೈದಾನಕ್ಕೆ ಹೋಗುತ್ತಿರುವ ವಿಡಿಯೋವನ್ನು ಚೆನ್ನೈ ಸೂಪರ್​ಕಿಂಗ್ಸ್​ ತನ್ನ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡು ಕೋಟಿ ಜನರಲ್ಲಿ ಒಬ್ಬ ಎಂಬ ಶೀರ್ಷಿಕೆಯನ್ನು ನೀಡಿತ್ತು. ಈ ವಿಡಿಯೋದಲ್ಲಿ ಥಲಾ ಆರಾಮವಾಗಿ ನಡೆಯುವುದನ್ನು ನೋಡಿ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಾಗಿತ್ತು.

ಎಂಎಸ್ ಧೋನಿ ಗಾಯದ ಬಗ್ಗೆ

ಮಾರ್ಚ್ 28 ರಂದು, ಸಿಎಸ್​ಕೆ ಮ್ಯಾನೇಜ್​ಮೆಂಟ್​ ಧೋನಿ ಪುನರ್ವಸತಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಸುಮಾರು ಎರಡು ವಾರಗಳ ಕಾಲ ಆಟದಿಂದ ಹೊರಗುಳಿದಿದ್ದಾರೆ ಎಂದು ಹೇಳಿಕೆ ನೀಡಿತ್ತು. ಆದರೆ ಕೇವಲ ಐದಾರು ದಿನಗಳಲ್ಲೇ ಧೋನಿ ಕಿಟ್ ಬ್ಯಾಗ್ ಹಿಡಿದು ನೆಟ್ಸ್‌ನಲ್ಲಿ ಕಾಣಿಸಿಕೊಂಡಿರುವುದು ವೈದ್ಯಕೀಯ ತಂಡದ ಅಂದಾಜನ್ನು ಸುಳ್ಳು ಮಾಡಿದೆ (ಏಜೆನ್ಸೀಸ್​).