ಇಂಗ್ಲೆಂಡ್​ ಆಲ್ರೌಂಡರ್ ಕೂಡ ಐಪಿಎಲ್​ನಿಂದ ಹೊರಗುಳಿಯಲು ನಿರ್ಧಾರ! 
ಕ್ರಿಕೆಟ್

IPL: ಪ್ಲೆಸಿಸ್​ ಬೆನ್ನಲ್ಲೇ ಇಂಗ್ಲೆಂಡ್​ ಆಲ್ರೌಂಡರ್ ಕೂಡ ಐಪಿಎಲ್​ನಿಂದ ಹೊರಗುಳಿಯಲು ನಿರ್ಧಾರ!

ನವದೆಹಲಿ: ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್​ ಬಳಿಕ ಇಂಗ್ಲೆಂಡ್​ ಆಲ್ರೌಂಡರ್​ ಮೊಯಿನ್​ ಅಲಿ (Moeen ali) ಕೂಡ ಮುಂದಿನ ವರ್ಷದ ಐಪಿಎಲ್​ (IPL) 19ನೇ ಆವೃತ್ತಿಯಿಂದ ಹೊರಗುಳಿದು, ಪಾಕಿಸ್ತಾನ ಸೂಪರ್​ ಲೀಗ್​ನಲ್ಲಿ (PSL​) ಆಡಲು ನಿರ್ಧರಿಸಿದ್ದಾರೆ. ಇದರಿಂದಾಗಿ ಮೊಯಿನ್​ ಅಲಿ ಕೂಡ ಮುಂಬರುವ ಐಪಿಎಲ್​ ಹರಾಜು ಪ್ರಕ್ರಿಯೆಯಿಂದಲೂ ಹೊರಗುಳಿಯಲಿದ್ದಾರೆ.

38 ವರ್ಷದ ಮೊಯಿನ್​ ಅಲಿ ಸಾಮಾಜಿಕ ಜಾಲತಾಣದಲ್ಲಿ ತನ್ನ ನಿರ್ಧಾರವನ್ನು ತಿಳಿಸಿದ್ದು, ಪಿಎಸ್​ಎಲ್​ನ ಹೊಸ ಸವಾಲು ಹೆಚ್ಚಿನ ಕಾತರ ಮೂಡಿಸಿದೆ ಎಂದಿದ್ದಾರೆ. 2018ರಿಂದ ಐಪಿಎಲ್​ನಲ್ಲಿ ಆಡುತ್ತ ಬಂದಿರುವ ಮೊಯಿನ್​ ಅಲಿ, ಆರ್​ಸಿಬಿ, ಸಿಎಸ್​ಕೆ ಮತ್ತು ಕೆಕೆಆರ್​ ತಂಡಗಳನ್ನು ಪ್ರತಿನಿಧಿಸಿದ್ದಾರೆ.

ಐಪಿಎಲ್​ನಲ್ಲಿ ಒಟ್ಟು 73 ಪಂದ್ಯ ಆಡಿದ್ದು, 1,167 ರನ್​ ಮತ್ತು 41 ವಿಕೆಟ್​ ಗಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್​ ಪರ 6 ಪಂದ್ಯಗಳನ್ನಷ್ಟೇ ಆಡಿದ್ದ ಮೊಯಿನ್​ ಅಲಿ, ಈ ಬಾರಿ ತಂಡದಲ್ಲಿ ರಿಟೇನ್​ ಆಗಿರಲಿಲ್ಲ.