ಹರ್ಮನ್​ಪ್ರೀತ್​ ಕೌರ್​ (ಎಡ), ಮಿಥಾಲಿ ರಾಜ್​ (ಬಲ) 
ಕ್ರಿಕೆಟ್

ಸೆಮೀಸ್​ಗೆ ಹೋಗಬೇಕಿದ್ರೆ ಈ ಬದಲಾವಣೆ ಮಾಡಲೇಬೇಕು! ಸೋತ ಮಹಿಳಾ ತಂಡಕ್ಕೆ ಮಿಥಾಲಿ ರಾಜ್​ ಸಲಹೆ

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಆಫ್ರಿಕಾ ಎದುರು ಸೋತ ಭಾರತ ಮಹಿಳಾ ತಂಡ
  • ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಸೆಮೀಸ್​ಗೆ ಎಂಟ್ರಿಕೊಡಲು ಹರ್ಮನ್​ ಪಡೆ ಪಟ್ಟು
  • ಬ್ಯಾಟಿಂಗ್​ ಯೂನಿಟ್​ನಲ್ಲಿ ಈ ಬದಲಾವಣೆ ಬೇಕು ಎಂದ ಮಿಥಾಲಿ ರಾಜ್​
ನವದೆಹಲಿ: ಪ್ರಸಕ್ತ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಹರ್ಮನ್​ ಪ್ರೀತ್ ಕೌರ್​ ಪಡೆ ಎರಡು ಪಂದ್ಯಗಳನ್ನು ಗೆದ್ದಿದ್ದೇ ಆದರೂ ಬಹುಮುಖ್ಯ ಪಂದ್ಯವಾಗಿದ್ದ ಸೌತ್ ಆಫ್ರಿಕಾ ಎದುರು ಸೋಲಿಗೆ ಶರಣಾಯಿತು. ಆರು ವಿಕೆಟ್‌ಗಳ ಸೋಲಿನ ಬೆನ್ನಲ್ಲೇ ಮಾಜಿ ಕ್ಯಾಪ್ಟನ್​ ಮಿಥಾಲಿ ರಾಜ್ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಮಹತ್ವದ ಬದಲಾವಣೆಗಳು ಬೇಕೇ ಬೇಕು ಎಂದು ಸಲಹೆ ನೀಡಿದ್ದಾರೆ.
ದಕ್ಷಿಣ ಆಫ್ರಿಕಾ ಎದುರು ಭಾರತದ ಸೋಲು ನಿರಾಶಾದಾಯಕ. ಈ ಪಂದ್ಯದಲ್ಲಿ ಹರ್ಮನ್ ಪಡೆ ಗೆಲುವು ಸಾಧಿಸಿದ್ದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾಕ್ಕೇರುತ್ತಿತ್ತು. ನನಗೆ ತಿಳಿದಿರುವಂತೆ, ಹರ್ಮನ್‌ಪ್ರೀತ್ ಸಾಮಾನ್ಯವಾಗಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಿಲ್ಲ. ಹೀಗಾಗಿ, ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಮತ್ತು ಜೆಮಿಮಾ ರೋಡ್ರಿಗಸ್​ರನ್ನು ಐದನೇ ಆರ್ಡರ್​ನಲ್ಲಿ ಆಡಿಸುವುದು ಉತ್ತಮ ಎಂದಿದ್ದಾರೆ.
ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದಿರುವ ಜೆಮಿಮಾ, ಸಾಕಷ್ಟು ರನ್ ಗಳಿಸಿದ್ದಾರೆ. ಆಕೆಯ ಬಲ ಇರುವುದೇ ಸ್ಪಿನ್ನರ್‌ಗಳ ಎದುರು. ಸ್ವೀಪ್ ಮತ್ತು ಸ್ಕೂಪ್ ಶಾಟ್‌ಗಳನ್ನು ಜೆಮಿಮಾ ಉತ್ತಮವಾಗಿ ಆಡುತ್ತಾರೆ, ಇದು ಅವರು ಮತ್ತೆ ಫಾರ್ಮ್‌ಗೆ ಬರಲು ಇನ್ನಷ್ಟು ಸಹಾಯ ಮಾಡುತ್ತದೆ. ತಂಡದ ಬ್ಯಾಟಿಂಗ್ ಯೂನಿಟ್​ನಲ್ಲಿ ಈ ಬದಲಾವಣೆಗಳು ಅನಿವಾರ್ಯ ಹಾಗೂ ಅಗತ್ಯ ಎಂದು ಮಿಥಾಲಿ ಹೇಳಿದರು.

ಸೆಮೀಸ್​ ತಲುಪಲು ಆಸೀಸ್​ ಸೋಲಬೇಕು!

ದಕ್ಷಿಣ ಆಫ್ರಿಕಾ ಎದುರು ಸೋತಿರುವ ಭಾರತ, ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿದರೆ ಮಾತ್ರ ಸೆಮಿಫೈನಲ್​ ತಲುಪಲು ಸಾಧ್ಯ. ಸದ್ಯದ ಲೆಕ್ಕಾಚಾರಗಳ ಪ್ರಕಾರ, ಮಹಿಳಾ ತಂಡಕ್ಕೆ ಸೆಮೀಸ್​ ಅವಕಾಶಗಳು ಸ್ವಲ್ಪ ಜಟಿಲವಾಗಿವೆ. ಗ್ರೂಪ್-ಎ ನಲ್ಲಿ ಭಾರತ ತನ್ನ ಮುಂದಿನ ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲೇಬೇಕಿದೆ. ಅದರಲ್ಲೂ, ಬಲಿಷ್ಠ ಆಸೀಸ್​ ಸೋತರೆ, ಭಾರತ ಸೆಮಿಫೈನಲ್ ರೇಸ್​ಗೆ ಸುಲಭವಾಗಿ ಲಗ್ಗೆಯಿಡಲಿದೆ,(ಏಜೆನ್ಸೀಸ್).