ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಟ್ನರ್
- 96 ರನ್ಗಳಿಂದ ಭಾರತ ಎದುರು ಟಿ20 ವಿಶ್ವಕಪ್ ಫೈನಲ್ನಲ್ಲಿ ಸೋಲು
- ಸೋಲಿನ ಬೆನ್ನಲ್ಲೇ ಹಲವು ವಿಚಾರಗಳಿಗೆ ಪ್ರತಿಕ್ರಿಯಿಸಿದ ನ್ಯೂಜಿಲೆಂಡ್ ತಂಡದ ನಾಯಕ
- ಪಾಕ್ ಪತ್ರಕರ್ತನ ಪ್ರಶ್ನೆಗೆ ಮಿಚೆಲ್ ಸ್ಯಾಟ್ನರ್ ಕೊಟ್ಟ ಉತ್ತರ ವೈರಲ್
Mitchell Santner: ಮಾ.08ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ 96 ರನ್ಗಳಿಂದ ಭಾರತ ಎದುರು ಹೀನಾಯ ಸೋಲುಂಡ ನ್ಯೂಜಿಲೆಂಡ್, ತಮ್ಮ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಡುವ ಅವಕಾಶವನ್ನು ಎರಡನೇ ಬಾರಿಗೆ ಅಂತಿಮ ಹಣಾಹಣಿಯಲ್ಲಿ ಕಳೆದುಕೊಂಡಿತು. ಇದು ಕಿವೀಸ್ ಪಡೆಯ ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳ ನಿರಾಶೆಗೆ ಕಾರಣವಾಯಿತು. ಇನ್ನು ಪಂದ್ಯ ಸೋತ ಬಳಿಕ ಹಲವು ವಿಷಯಗಳಿಗೆ ಪ್ರತಿಕ್ರಿಯಿಸಿದ ಕ್ಯಾಪ್ಟನ್ ಮಿಚೆಲ್ ಸ್ಯಾಂಟ್ನರ್, ಪಾಕ್ ಪತ್ರಕರ್ತನ ಪ್ರಶ್ನೆಗೆ ಕೊಟ್ಟ ಉತ್ತರ ಸದ್ಯ ನೆಟ್ಟಿಗರ ಹುಬ್ಬೇರಿಸಿದೆ.
ಪಂದ್ಯ ಸೋತ ಬೆನ್ನಲ್ಲೇ ಮಾತನಾಡಿದ ಮಿಚೆಲ್ ಸ್ಯಾಂಟ್ನರ್, ಈ ಪಂದ್ಯವನ್ನು ನಾವು ಸೋತರು ಕೂಡ ನಮಗೆ ತುಂಬಾ ಹೆಮ್ಮೆ ಎನಿಸುತ್ತಿದೆ. ನಾವು ಫೈನಲ್ ತಲುಪಿದ್ದಕ್ಕೆ ಮತ್ತು ನಮ್ಮ ತಂಡದ ಆಟಗಾರರನ್ನು ನೋಡಲು ನನಗೆ ತುಂಬಾ ಹೆಮ್ಮೆಯಾಗುತ್ತಿದೆ ಎಂದರು. ಈ ಮೆಗಾ ಟೂರ್ನಮೆಂಟ್‌ನ ಅಂತ್ಯದಲ್ಲಿ ನಾವು ಕೆಲವು ಸವಾಲುಗಳನ್ನು ಎದುರಿಸಿದೆವು. ಆದಾಗ್ಯೂ, ನಾವು ಪ್ರತಿ ಹಂತದಲ್ಲೂ ಅವುಗಳನ್ನು ಜಯಿಸಿ ಉತ್ತಮ ಪ್ರದರ್ಶನದೊಂದಿಗೆ ಮುನ್ನಡೆದಿದ್ದೇವೆ. ಈ ರಾತ್ರಿ ಲಕ್ಷಾಂತರ ಪ್ರೇಕ್ಷಕರ ಮುಂದೆ, ನಾವು ಉತ್ತಮ ತಂಡದ ಎದುರು ಸೋತಿದ್ದೇವೆ ಎಂದು ಸ್ಯಾಂಟ್ನರ್ ಹೇಳಿದರು.
ಇನ್ನು ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಬ್ಯಾಕ್ ಟು ಬ್ಯಾಕ್ ಅದ್ಭುತ ಇನ್ನಿಂಗ್ಸ್ ಗಮನಿಸಿದ ಐಸಿಸಿ, ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಸಂಜು ಮುಡಿಗೆ ಅರ್ಪಿಸಿತು. ಈ ಅವಾರ್ಡ್ಗೆ ಸಂಜು ಅರ್ಹ ಆಟಗಾರ ಎಂದೇ ಕ್ರಿಕೆಟ್ ಪ್ರೇಮಿಗಳು ಸಂತಸ ವ್ಯಕ್ತಪಡಿಸಿದರು. ಆದರೆ, ಇದನ್ನೇ ತನ್ನ ಪ್ರಶ್ನೆಯಾಗಿ ಮುಂದಿಟ್ಟ ಪಾಕ್ ಪತ್ರಕರ್ತರೊಬ್ಬರು, ಪಾಕಿಸ್ತಾನ ತಂಡದ ಸಾಹಿಬ್‌ಜಾದಾ ಫರ್ಹಾನ್ ಈ ಟೂರ್ನಿಯಲ್ಲಿ 383 ರನ್ ಗಳಿಸಿದ್ದಾರೆ. ಆದರೆ, ಪ್ಲಾಟ್ (POTT) ಪ್ರಶಸ್ತಿಯನ್ನು ಸಂಜು ಸ್ಯಾಮ್ಸನ್‌ಗೆ ನೀಡಿದ್ದರ ಬಗ್ಗೆ ನೀವೇನು ಹೇಳುತ್ತೀರಿ? ಎಂದು ಸ್ಯಾಟ್ನರ್ಗೆ ಪ್ರಶ್ನಿಸಿದರು.
ಈ ಪ್ರಶ್ನೆಗೆ ಮುಖಕ್ಕೆ ಹೊಡೆದಂತೆ ಉತ್ತರಿಸಿದ ಸ್ಯಾಂಟ್ನರ್, ಆಯಾ ಪ್ರಶಸ್ತಿಗಳನ್ನು ಅವರ ಪ್ರದರ್ಶನ ಮತ್ತು ಬೀರಿದ ಪ್ರಭಾವದ ಆಧಾರದ ಮೇಲೆ ನೀಡಲಾಗುತ್ತದೆ. ಇಲ್ಲಿ ಸಂಜು ಸ್ಯಾಮ್ಸನ್ ಅವರು ಮೂರು ಇನ್ನಿಂಗ್ಸ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಆ ಮೂರು ಕೂಡ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ಗಳೇ ಆಗಿವೆ. ಅದೇ ಫರ್ಹಾನ್ ಬಾರಿಸಿರುವುದು ಯುಎಸ್ಎ, ನೆದರ್ಲ್ಯಾಂಡ್ಸ್, ನಮೀಬಿಯಾ ಮತ್ತು ಶ್ರೀಲಂಕಾ ತಂಡಗಳ ಎದುರು ಮಾತ್ರ ಎಂದು ಹೇಳಿದ್ದು, ಪಾಕ್ ಆಟಗಾರನ ಮಾನ-ಮರ್ಯಾದೆಯನ್ನು ಬಹಿರಂಗವಾಗಿ ತೆಗೆದಂತಾಗಿದೆ ಎಂಬುದರಲ್ಲಿ ಅನುಮಾನವೇ ಬೇಡ,(ಏಜೆನ್ಸೀಸ್).