ಮಧ್ಯಮ ಕ್ರಮಾಂಕ ಕುಸಿತ ಸೋಲಿಗೆ ಕಾರಣ: ಗಂಭೀರ್-ಕೊಹ್ಲಿ ನಡುವೆ ಭಿನ್ನಾಭಿಪ್ರಾಯವಿಲ್ಲ!
ಕಾರ್ಡಿಫ್: ಇಂಗ್ಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯದ ಸೋಲಿಗೆ ಮಧ್ಯಮ ಕ್ರಮಾಂಕದ ಕುಸಿತ ಕಾರಣ ಎಂದು ಭಾರತ ತಂಡದ ನಾಯಕ ಶುಭಮಾನ್ ಗಿಲ್ ಬ್ಯಾಟರ್‌ಗಳನ್ನು ದೂರಿದ್ದಾರೆ. ಮೂರು ಪಂದ್ಯಗಳ ಸರಣಿ 1-1 ಸಮಬಲಗೊಂಡಿದ್ದು, ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯ ಭಾನುವಾರ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ.
ಸೋಲಿಗೆ ರನ್ ಕೊರತೆಯೂ ಕಾರಣ ಎಂಬುದನ್ನು ಒಪ್ಪಿಕೊಂಡಿರುವ ಗಿಲ್, 25 ಓವರ್‌ಗಳ ಬ್ಯಾಟಿಂಗ್ ನಂತರ 300ರಿಂದ 310 ರನ್ ಉತ್ತಮ ಮೊತ್ತ ಎಂದು ಅಂದಾಜಿಸಲಾಯಿತು. ಜತೆಗೆ ನಾವು ಆಗ ಸುಸ್ಥಿತಿಯಲ್ಲಿತ್ತು. ಆದರೆ, ಇನಿಂಗ್ಸ್‌ನ ಮಧ್ಯಮ ಓವರ್‌ಗಳಲ್ಲಿ ಹೆಚ್ಚು ವಿಕೆಟ್ ಕಳೆದುಕೊಂಡಿದ್ದು ಹಿನ್ನಡೆ ತಂದಿತು. ಅಗ್ರ ಕ್ರಮಾಂಕ ಉತ್ತಮ ಅಡಿಪಾಯ ಹಾಕಿದರೂ, ಕೆಳ-ಮಧ್ಯಮ ಕ್ರಮಾಂಕ ಹೆಚ್ಚಿನ ಕೊಡುಗೆ ನೀಡಲು ವಿಲವಾಗಿದ್ದಕ್ಕೆ ಅವರು ಬೇಸರಿಸಿದರು.
ಭಾರತ ನೀಡಿದ 233 ರನ್‌ಗಳ ಸವಾಲಿಗೆ ಪ್ರತಿಯಾಗಿ ಜೋ ರೂಟ್ (99* ರನ್, 133 ಎಸೆತ, 9 ಬೌಂಡರಿ) ಏಕಾಂಗಿ ಹೋರಾಟದಿಂದ ಇಂಗ್ಲೆಂಡ್ 44.1 ಓವರ್‌ಗಳಲ್ಲಿ 6 ವಿಕೆಟ್‌ಗೆ 235 ರನ್‌ಗಳಿಸಿ ಗೆದ್ದಿತು. ನಮ್ಮ ಕೆಳ ಕ್ರಮಾಂಕ ಬೆಸ್ಟ್ ಬ್ಯಾಟರ್‌ಗಳನ್ನು ಹೊಂದಿಲ್ಲ. ಆದರೆ, ಕೆಳ-ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಂದ ಹೆಚ್ಚಿನ ರನ್ ನಿರೀಕ್ಷಿಸಲಾಗಿತ್ತು. ತಂಡಕ್ಕೆ ದೊರೆತ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ಅವರು ವಿಲರಾದರು ಎಂದು ಗಿಲ್ ಸೋಲಿಗೆ ಕಾರಣ ವಿವರಿಸಿದರು. ಗಾಯದ ಸಮಸ್ಯೆಯಿಂದ ವಾಷಿಂಗ್ಟನ್ ಸುಂದರ್ ಹೊರಗುಳಿದಿದ್ದು, ನಿರ್ಣಾಯಕ ಹಂತದಲ್ಲಿ ನಮ್ಮ ಬೌಲಿಂಗ್ ಆಯ್ಕೆಯನ್ನು ಕಡಿಮೆಗೊಳಿಸಿತು ಎಂದರು.
ಗಂಭೀರ್-ಕೊಹ್ಲಿ ಭಿನ್ನಾಭಿಪ್ರಾಯವಿಲ್ಲ
ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅವರಿಬ್ಬರೂ ತಂಡದ ಅಭ್ಯಾಸದ ಅವಧಿಯಲ್ಲಿ ದೂರವಿದ್ದರೂ, ದಿನಕ್ಕೆ 10 ಬಾರಿಯಾದರೂ ಪರಸ್ಪರ ಮಾತನಾಡುತ್ತಾರೆ ಎಂದು ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಸ್ಪಷ್ಟನೆ ನೀಡಿದ್ದಾರೆ. ಇದರೊಂದಿಗೆ ಗಂಭಿರ್-ಕೊಹ್ಲಿ ಬಹಳ ಸಮಯದಿಂದ ಪರಸ್ಪರ ಮಾತನಾಡುತ್ತಿಲ್ಲ. ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಬಿಸಿಸಿಐ, ಅಧಿಕಾರಿಯೊಬ್ಬರನ್ನು ನೇಮಕ ಮಾಡಬಹುದು ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಕಾರ್ಡಿಫ್ ಹಾಗೂ ಬರ್ಮಿಂಗ್‌ಹ್ಯಾಂನಲ್ಲಿ ಭಾರತ ತಂಡದ ತರಬೇತಿ ಅವಧಿಯಲ್ಲಿ ಒಮ್ಮೆಯೂ ಗಂಭೀರ್-ಕೊಹ್ಲಿ ಮಾತನಾಡಿಲ್ಲ. ಅವರಿಬ್ಬರ ನಡುವಿನ ಸೇತುವೆ ನೀವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಕೋಟಕ್, ಮುಖ್ಯ ಕೋಚ್ ಜತೆ ಸಂವಹನ ನಡೆಸಲು ಕೊಹ್ಲಿಗೆ ಸೇತುವೆಯ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ಈ ವಿಷಯಗಳು ಕೇವಲ ವದಂತಿ ಎಂದು ಪ್ರತಿಪಾದಿಸಿದರು.
3ನೇ ಏಕದಿನದಿಂದ ವಾಷಿಂಗ್ಟನ್ ಔಟ್
ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಮೂರನೇ ಏಕದಿನ ಪಂದ್ಯದಿಂದ ಹೊರಬಿದ್ದಿದ್ದು, ಅವರ ಬದಲಿಗೆ ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಯಾದವ್ ಅವಕಾಶ ಪಡೆಯುವ ಸಾಧ್ಯತೆಗಳಿವೆ. ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಕಾಲಿನ ಗಾಯದ ಸಮಸ್ಯೆಗೆ ತುತ್ತಾಗಿದ್ದ ವಾಷಿಂಗ್ಟನ್ ಫೀಲ್ಡಿಂಗ್‌ಗೆ ಇಳಿದಿರಲಿಲ್ಲ. ಕನ್ನಡಿಗ ಕೆಎಲ್ ರಾಹುಲ್ ಕೊನೇ ಪಂದ್ಯಕ್ಕೆ ಫಿಟ್ ಆದರೆ, ರಾಹುಲ್-ಇಶಾನ್ ಕಿಶನ್ ಇಬ್ಬರೂ 11ರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.