ಧುರಂಧರ್​ ಮೀರಿಸಿದ MI vs RCB ಪಂದ್ಯ 
ಕ್ರಿಕೆಟ್

'ಧುರಂಧರ್'​ ಮೀರಿಸಿದ ಆರ್​ಸಿಬಿ-ಎಂಐ ಮ್ಯಾಚ್​! ಪಂದ್ಯದ ಒಟ್ಟು ಸಮಯ ಕೇಳಿದ್ರೆ ರಣವೀರ್​ ಚಿತ್ರ ಯಾವ ಲೆಕ್ಕ ಅಂತೀರಾ

ಪ್ರಮುಖ ಮುಖ್ಯಾಂಶಗಳು

  • ಧುರಂಧರ್​ 2 ಚಿತ್ರವನ್ನೇ ಮೀರಿಸಿದ ಆರ್​ಸಿಬಿ-ಎಂಐ ಪಂದ್ಯ
  • ಸಂಜೆ 7:30 ಗಂಟೆಗೆ ಆರಂಭಗೊಂಡ ಪಂದ್ಯ ನಡೆದಿದ್ದು ಎಷ್ಟು ಸಮಯ ಗೊತ್ತಾ?
MI vs RCB: ನಿನ್ನೆ (ಏ.12) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಪಂದ್ಯದಲ್ಲಿ ಆರ್​ಸಿಬಿ 18 ರನ್​ಗಳ ಗೆಲುವು ನೋಡಿತು. ಫಿಲ್​ ಸಾಲ್ಟ್​, ವಿರಾಟ್​ ಕೊಹ್ಲಿ ಮತ್ತು ರಜತ್ ಪಾಟಿದಾರ್​ ಅವರ ಅಮೋಘ ಬ್ಯಾಟಿಂಗ್​ ಪ್ರದರ್ಶನ ಬೆಂಗಳೂರು ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. ಆರಂಭದಿಂದ ಬಹಳ ಕುತೂಹಲದಿಂದ ಪಂದ್ಯ ವೀಕ್ಷಿಸಿದ ಅಭಿಮಾನಿಗಳಿಗೆ ಈ ಒಂದು ವಿಷಯ ತಿಳಿದು ಸದ್ಯ ಶಾಕ್ ಆಗಿದೆ.
ಭಾರತೀಯ ಕಾಲಾಮಾನಕ್ಕೆ ತಕ್ಕಂತೆ ಸಂಜೆ 7:30ಕ್ಕೆ ಶುರುವಾದ ಆರ್​ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದ ಫಸ್ಟ್​ ಇನ್ನಿಂಗ್ಸ್​ ಮೈದಾನದಲ್ಲಿದ್ದ ಕ್ರಿಕೆಟ್​ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡಿತು. ಫಿಲ್ ಸಾಲ್ಟ್​, ವಿರಾಟ್​ ಕೊಹ್ಲಿ ಮತ್ತು ರಜತ್ ಪಾಟಿದಾರ್​ ಅವರ ಸಿಕ್ಸರ್​, ಬೌಂಡರಿಗಳ ಸುರಿಮಳೆ ಆರ್​ಸಿಬಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಆದರೆ, ದ್ವಿತೀಯ ಇನ್ನಿಂಗ್ಸ್​ ಚೇಸಿಂಗ್​ಗಿಳಿದ ಎಂಐ, ಪೈಪೋಟಿ ನೀಡಿದ್ದೇ ಆದರೂ ರೋಮಾಂಚಕ ಹಂತಕ್ಕೆ ಕೊಂಡೊಯ್ಯಲಿಲ್ಲ. ಒಟ್ಟಾರೆ, ಈ ಪಂದ್ಯ ನೋಡಲು ಬಂದಿದ್ದ ಅಭಿಮಾನಿಗಳು ತಾವೆಷ್ಟು ಸಮಯ ಕುಳಿತಿದ್ದೆವು ಎಂಬ ಸಮಯ ತಿಳಿದು ಇದೀಗ ಅಚ್ಚರಿಗೆ ಒಳಗಾಗಿದ್ದಾರೆ.  
ಆದಿತ್ಯ ಧರ್​ ನಿರ್ದೇಶನದ ಮತ್ತು ರಣವೀರ್ ಸಿಂಗ್ ಅಭಿನಯದ 'ಧುರಂಧರ್: ದಿ ರಿವೆಂಜ್' ಚಿತ್ರ 3 ಗಂಟೆ 49 ನಿಮಿಷವಿದೆ. ಇದೇ ದೊಡ್ಡದು. ಇಷ್ಟು ಸಮಯಗಳ ರನ್​ಟೈಮ್​ ಇರುವ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಕುಳಿತು ನೋಡುವುದು ಕಷ್ಟಸಾಧ್ಯ ಎನ್ನುತ್ತಿದ್ದವರು ಇದೀಗ ಆರ್​ಸಿಬಿ-ಎಂಐ ಪಂದ್ಯದ ಸಮಯ ಕಂಡು ಹುಬ್ಬೇರಿಸಿದ್ದಾರೆ. ಕಾರಣ,  ಪಂದ್ಯದ ಒಟ್ಟು ಸಮಯ. ಐಪಿಎಲ್​ ಇತಿಹಾಸದಲ್ಲಿ ದಾಖಲೆಯ 4 ಗಂಟೆ 22 ನಿಮಿಷಗಳವರೆಗೆ ನಡೆದ ಪಂದ್ಯ ಇದಾಗಿದೆ. 
19 ವರ್ಷಗಳ ಐಪಿಎಲ್​ ಇತಿಹಾಸದಲ್ಲಿ ಇದೇ ಮೊದಲನೆಯದು. ಬರೋಬ್ಬರಿ 4 ಗಂಟೆ 22 ನಿಮಿಷಗಳವರೆಗೆ ಒಂದು ಪಂದ್ಯ ವಿಸ್ತರಿಸಿದ್ದು ಇದೇ ಮೊದಲು. ಯಾವುದೇ ಅಡೆತಡೆಗಳಿಲ್ಲದೆ, ಓವರ್‌ಗಳಲ್ಲಿ ಕಡಿತ ಅಥವಾ ಸೂಪರ್ ಓವರ್‌ಗಳಿಲ್ಲದೆ ಸಮಯಕ್ಕೆ ಸರಿಯಾಗಿ ಪ್ರಾರಂಭವಾದ ಅತಿ ಉದ್ದದ ಐಪಿಎಲ್ ಪಂದ್ಯವಿದು ಎನ್ನಲಾಗಿದೆ. ಈ ವಿಚಾರದಲ್ಲಿ, ಆದಿತ್ಯ ಧರ್ ಅವರ ಬ್ಲಾಕ್‌ಬಸ್ಟರ್ ಚಿತ್ರದ 3 ಗಂಟೆ 49 ನಿಮಿಷಗಳ ರನ್​ಟೈಮ್​ ಅನ್ನು ಆರ್​ಸಿಬಿ-ಎಂಐ ಪಂದ್ಯ ಮುರಿದಿದೆ,(ಏಜೆನ್ಸೀಸ್).