ಕೌಂಟಿಯಲ್ಲಿ ಡರ್ಹ್ಯಾಂ ಪರ ಕನ್ನಡಿಗ ಮಯಾಂಕ್ ಅಗರ್ವಾಲ್ ಕಣಕ್ಕೆ
ಡರ್ಹ್ಯಾಂ: ಭಾರತ ತಂಡದ ಪರ ಆಡಿರುವ ಕರ್ನಾಟಕದ ಆರಂಭಿಕ ಮಯಾಂಕ್ ಅಗರ್ವಾಲ್ (
) ಇಂಗ್ಲೆಂಡ್ನ ಕೌಂಟಿ ಚಾಂಪಿಯನ್ಷಿಪ್ನ ಡಿವಿಜನ್ ಎರಡರಲ್ಲಿ ಡರ್ಹ್ಯಾಂ ಪರ 4 ಪಂದ್ಯಗಳನ್ನು ಆಡಲಿದ್ದಾರೆ.
ಡರ್ಹ್ಯಾಂ ತಂಡ ಬುಧವಾರದಿಂದ ಕೌಂಟಿ ಗ್ರೌಂಡ್ನಲ್ಲಿ ನಾಟಿಂಗ್ಹ್ಯಾಂಶೈರ್ ವಿರುದ್ಧ ಆಡಲಿರುವ ಮುಂದಿನ ಪಂದ್ಯಕ್ಕೆ ಮಯಾಂಕ್ ಅಗರ್ವಾಲ್ ಲಭ್ಯರಿರುತ್ತಾರೆ ಎಂದು ಕೌಂಟಿ ತಂಡ ತಿಳಿಸಿದೆ. ಡಿವಿಜನ್ 2ರ ಅಂಕಪಟ್ಟಿಯಲ್ಲಿ ಡರ್ಹ್ಯಾಂ ತಂಡ ಸದ್ಯ ಅಗ್ರಸ್ಥಾನದಲ್ಲಿದೆ. ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿದ್ದು, 3ರಲ್ಲಿ ಡ್ರಾ ಸಾಧಿಸಿದ್ದು, ಒಟ್ಟು 191 ಅಂಕ ಕಲೆಹಾಕಿದೆ.
35 ವರ್ಷದ ಮಯಾಂಕ್ ಭಾರತ ಪರ 21 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು, 41.33ರ ಸರಾಸರಿಯಲ್ಲಿ 1,500ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ ಮತ್ತು 6 ಅರ್ಧಶತಕಗಳು ಸೇರಿವೆ. ಜತೆಗೆ ಒಟ್ಟಾರೆ 124 ಪ್ರಥಮ ದರ್ಜೆ ಪಂದ್ಯಗಳಲ್ಲಿ 8,929 ರನ್ ಗಳಿಸಿದ ಅನುಭವವನ್ನೂ ಹೊಂದಿದ್ದಾರೆ. ಮಯಾಂಕ್ ಕಳೆದ ವರ್ಷ ಕೌಂಟಿಯಲ್ಲಿ ಯಾರ್ಕ್ಶೈರ್ ಪರ ಆಡಿದ್ದರು ಮತ್ತು ಡರ್ಹ್ಯಾಂ ವಿರುದ್ಧ 175 ರನ್ ಸಿಡಿಸಿ ಮಿಂಚಿದ್ದರು.