ಐಸಿಸಿ ವಿಶ್ವಕಪ್ ತಂಡದಲ್ಲಿ ಸ್ಮೃತಿ, ದೀಪ್ತಿ, ಜೆಮೀಮಾ
ದುಬೈ: ಮಹಿಳಾ ಏಕದಿನ ವಿಶ್ವಕಪ್ ಮುಕ್ತಾಯದ ಬಳಿಕ ಐಸಿಸಿ (ICC) ಪ್ರಕಟಿಸಿರುವ ಟೂರ್ನಿಯ ತಂಡದಲ್ಲಿ ಚಾಂಪಿಯನ್ ಭಾರತ ತಂಡದ ಮೂವರು ಆಟಗಾತಿಯರು ಸ್ಥಾನ ಪಡೆದಿದ್ದಾರೆ. ಅವರೆಂದರೆ ಸ್ಮೃತಿ ಮಂದನಾ, ದೀಪ್ತಿ ಶರ್ಮ ಮತ್ತು ಜೆಮೀಮಾ ರೋಡ್ರಿಗಸ್. ದಣ ಆಫ್ರಿಕಾದ ಲಾರಾ ವೊಲ್ವಾರ್ಡ್ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮಾರಿಜಾನ್ನೆ ಕಾಪ್ ಮತ್ತು ನಾಡಿನ್ ಡಿ ಕ್ಲರ್ಕ್ ತಂಡದಲ್ಲಿರುವ ರನ್ನರ್ಅಪ್ ದಣ ಆಫ್ರಿಕಾದ ಇನ್ನಿಬ್ಬರು ಆಟಗಾರ್ತಿಯರು.
ಐಸಿಸಿ ಮಹಿಳಾ ವಿಶ್ವಕಪ್ ತಂಡ: ಸ್ಮೃತಿ ಮಂದನಾ, ಲಾರಾ ವೊಲ್ವಾರ್ಡ್, ಜೆಮೀಮಾ, ಕಾಪ್, ಆಶ್ ಗಾರ್ಡ್ನರ್ (ಆಸ್ಟ್ರೆಲಿಯಾ), ದೀಪ್ತಿ ಶರ್ಮ, ಆನ್ನಾಬೆಲ್ ಸುದರ್ಲ್ಯಾಂಡ್ (ಆಸ್ಟ್ರೆಲಿಯಾ), ನಾಡಿನ್ ಡಿ ಕ್ಲರ್ಕ್, ಸಿದ್ರಾ ನವಾಜ್ (ಪಾಕಿಸ್ತಾನ), ಅಲನಾ ಕಿಂಗ್ (ಆಸ್ಟ್ರೆಲಿಯಾ), ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್), 12ನೇ ಆಟಗಾರ್ತಿ: ನಾಟ್ ಸೀವರ್ ಬ್ರಂಟ್ (ಇಂಗ್ಲೆಂಡ್).