ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್ನಲ್ಲಿ ಹಲವು ದಾಖಲೆಗಳನ್ನು ಬರೆದ ಮಾನವ್ ಸುಥಾರ್!
ರಾಜಸ್ಥಾನದ 25 ವರ್ಷದ ಎಡಗೈ ಸ್ಪಿನ್ನರ್ ಮಾನವ್ ಸುಥಾರ್ (
) ಭಾರತ ತಂಡದ ಪರ ಆಡಿದ ಮೊದಲ 2 ಟೆಸ್ಟ್ ಪಂದ್ಯಗಳಲ್ಲೂ ಗೆಲುವಿನ ರೂವಾರಿ ಎನಿಸಿ ಗಮನಸೆಳೆದಿದ್ದಾರೆ. ಈ ಮೂಲಕ ಭಾರತೀಯ ಸ್ಪಿನ್ ಬೌಲಿಂಗ್ ವಿಭಾಗದ ಹೊಸ ತಾರೆ ಎನಿಸಿದ್ದಾರೆ. ಗಾಲೆ ಟೆಸ್ಟ್ ಪಂದ್ಯದಲ್ಲಿ ಭಾರತದ 165 ರನ್ ಗೆಲುವಿಗೆ ನೆರವಾದ ಅವರು, ಇದರೊಂದಿಗೆ ಹಲವಾರ ದಾಖಲೆಗಳನ್ನೂ ಬರೆದರು.
ಮಾನವ್ ಸುಥಾರ್ (131ಕ್ಕೆ 10) ವಿದೇಶಿ ನೆಲದ ಟೆಸ್ಟ್ ಪಂದ್ಯವೊಂದರಲ್ಲಿ ಅತ್ಯುತ್ತಮ ಬೌಲಿಂಗ್ ನಿರ್ವಹಣೆ ತೋರಿದ ಭಾರತದ ಎಡಗೈ ಸ್ಪಿನ್ನರ್ ಎನಿಸಿದರು. ಅವರು ಎಡಗೈ ಸ್ಪಿನ್ ದಿಗ್ಗಜ ಬಿಷನ್ ಸಿಂಗ್ ಬೇಡಿ 1977ರಲ್ಲಿ ಆಸ್ಟ್ರೆಲಿಯಾದಲ್ಲಿ 194 ರನ್ಗಳಿಗೆ 10 ವಿಕೆಟ್ ಕಬಳಿಸಿದ್ದ ದಾಖಲೆ ಮುರಿದರು. ಆದರೆ ಬಾಪು ನಾಡಕರ್ಣಿ (43ಕ್ಕೆ 6) 1968ರಲ್ಲಿ ತೋರಿದ್ದ ಇನಿಂಗ್ಸ್ ಒಂದರಲ್ಲಿ ಭಾರತದ ಎಡಗೈ ಸ್ಪಿನ್ನರ್ನ ಶ್ರೇಷ್ಠ ನಿರ್ವಹಣೆಯ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ.
ಮಾನವ್ ಸುಥಾರ್ ಶ್ರೀಲಂಕಾದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗೊಂಚಲು ಪಡೆದ 3ನೇ ಭಾರತೀಯರೆನಿಸಿದರು. ಹರ್ಭಜನ್ ಸಿಂಗ್ (2008ರಲ್ಲಿ 153ಕ್ಕೆ 10), ಆರ್. ಅಶ್ವಿನ್ (2015ರಲ್ಲಿ 160ಕ್ಕೆ 10) ಮೊದಲಿಬ್ಬರು ಸಾಧಕರು. ಸುಥಾರ್ ಲಂಕಾದಲ್ಲಿ ಭಾರತೀಯ ಬೌಲರ್ನ ಅತ್ಯುತ್ತಮ ಸಾಧನೆಯನ್ನೂ ದಾಖಲಿಸಿದರು.
ಮಾನವ್ ಸುಥಾರ್ ಭಾರತ ಪರ ಆಡಿದ ಮೊದಲ 2 ಟೆಸ್ಟ್ಗಳಲ್ಲೂ 5 ವಿಕೆಟ್ ಗೊಂಚಲು ಪಡೆದ 3ನೇ ಬೌಲರ್. ನರೇಂದ್ರ ಹಿರ್ವಾನಿ ಮತ್ತು ಅಕ್ಷರ್ ಪಟೇಲ್ ಮೊದಲಿಬ್ಬರು.
ಮಾನವ್ ಸುಥಾರ್ ಭಾರತ ಪರ ಆಡಿದ ಮೊದಲ 2 ಟೆಸ್ಟ್ಗಳಲ್ಲಿ 3ನೇ ಗರಿಷ್ಠ 17 ವಿಕೆಟ್ ಕಬಳಿಸಿದ್ದಾರೆ. ಹಿರ್ವಾನಿ (24) ಮತ್ತು ಅಕ್ಷರ್ (18) ಇದಕ್ಕಿಂತ ಅಧಿಕ ವಿಕೆಟ್ ಗಳಿಸಿರುವ ಭಾರತೀಯರು. ಮಾನವ್ ಸುಥಾರ್ ಹಾಲಿ ವರ್ಷ ಅಫ್ಘಾನಿಸ್ತಾನ ವಿರುದ್ಧ ಮೊಹಾಲಿಯಲ್ಲಿ ನಡೆದ ಏಕೈಕ ಟೆಸ್ಟ್ನಲ್ಲಿ ಪದಾರ್ಪಣೆ ಮಾಡಿದ್ದರು ಮತ್ತು 7 ವಿಕೆಟ್ ಕಬಳಿಸಿ ಮಿಂಚಿದ್ದರು.