ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಧೋನಿ ಮತ್ತು ಪಂತ್ ಒಟ್ಟಿಗಿರುವ ಪಾರ್ಟಿ ವಿಡಿಯೋ
ನವದೆಹಲಿ: ಕ್ರಿಕೆಟ್ ಆಟಗಾರರ ಮೋಜು-ಮಸ್ತಿಯ ಕತೆಗಳು ಇಂದು, ನಿನ್ನೆಯದಲ್ಲ. ಇದು ಕ್ರಿಕೆಟ್ ಆವಿಷ್ಕಾರದೊಂದಿಗೆ ಹುಟ್ಟಿಕೊಂಡಿರುವ ಸಂಸ್ಕೃತಿ ಎಂದರೂ ತಪ್ಪಾಗದು. ಮ್ಯಾಚ್ ಮುಗಿದ ಮೇಲೆ ತಂಡದ ಸದಸ್ಯರೆಲ್ಲರೂ ಸೇರಿ ಗುಂಡು ಹಾಕುವುದು ಸಾಮಾನ್ಯ ಎಂದ ಸ್ಥಿತಿ ಭಾರತ ಸೇರಿದಂತೆ ಬಹುತೇಕ ಎಲ್ಲಾ ದೇಶದ ಕ್ರಿಕೆಟ್ ತಂಡದಲ್ಲಿದೆ.
ಆದರೆ, ಇತ್ತೀಚೆಗೆ ಭಾರತದ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಹಾಗೂ ರಿಷಭ್ ಪಂತ್ ಪಾರ್ಟಿ (Pant-Dhoni Party Video) ಯೊಂದರಲ್ಲಿ ಹೇಳಿರುವ ಮಾತೊಂದು ಸೋಷಿಯಲ್ ಮೀಡಿಯಾನಲ್ಲಿ ಭಾರಿ ವೈರಲ್ ಆಗುತ್ತಿದೆ.
ನಾನು ಹುಕ್ಕಾ ಸೇದಿ ಬರುತ್ತೇನೆ!
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ಎಂ.ಎಸ್. ಧೋನಿ, ರಿಷಬ್ ಜೊತೆಗೆ ಅವರ ಕೆಲ ಗೆಳೆಯರು ಲಂಡನ್ನಲ್ಲಿ ಪಾರ್ಟಿ ಮಾಡುತ್ತಿರುವ ದೃಶ್ಯವೆಂದು ಈ ವಿಡಿಯೋನಲ್ಲಿ ಹೇಳಲಾಗುತ್ತಿದೆ. ವೈರಲ್ ಆಗುತ್ತಿರುವ ವಿಡಿಯೋನಲ್ಲಿ, ಇರುವ ಎಲ್ಲರೂ ಬಹುತೇಕ ಪಾನಮತ್ತರಾಗಿ ಇರುವಂತೆ ಕಾಣಿಸುತ್ತಿದ್ದು, ರಿಷಬ್ ಪಂತ್, ಮಾಹೀ ಬೈ ಇಲ್ಲಿ ಬನ್ನಿ ಎಂದು ಕರೆದಾಗ, ಧೋನಿ, ನಾನು ಹುಕ್ಕಾ ಸೇದಿ ಬರುತ್ತೇನೆಂದು ಹೇಳಿದ್ದಾರೆ.
(ಆದರೆ, ಈ ಧ್ವನಿ ಧೋನಿಯವರದ್ದೇ? ಅಥವಾ ಧೋನಿ ಹುಕ್ಕಾ ಸೇದುತ್ತಾರೆ? ಎಂದು ವಿಜಯವಾಣಿ ದೃಡಪಡಿಸುತ್ತಿಲ್ಲ) ಆದರೆ, ವಿಡಿಯೋನಲ್ಲಿ ನಾನು ಹುಕ್ಕಾ ಸೇದಿ ಬರುತ್ತೇನೆ ಎಂಬ ಧ್ವನಿ ಕೇಳಿ ಬಂದಿದ್ದು, ಕಮೆಂಟ್ ಮಾಡುತ್ತಿರುವ ಬಹಳಷ್ಟು ಜನ ಈ ಧ್ವನಿ ಧೋನಿ ಅವರದ್ದೇ ಎಂದು ಹೇಳುತ್ತಿದ್ದಾರೆ.
ಈ ಮೊದಲು ವೈರಲ್ ಆಗಿತ್ತು ವಿಡಿಯೋ!
ಈ ವಿಡಿಯೋ ಕ್ಕಿಂತ ಮೊದಲು ಬೇರೊಂದು ಪಾರ್ಟಿಯಲ್ಲಿ ಎಂ.ಎಸ್.ಧೋನಿ ನಿಷೇಧಿತ ವೇಪ್ (ಇ-ಸಿಗರೇಟ್) ಸೇದುತ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಆದರೆ ಇದನ್ನು ಕೃತಕ ಬುದ್ದಿಮತ್ತೆ ಸಹಾಯದಿಂದ ಸೃಷ್ಟಿಸಲಾಗಿತ್ತೆಂಬ ವಾದಕೇಳಿಬಂದಿತ್ತು. ಆದರೆ ಈ ಕುರಿತು ಧೋನಿ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ, (ಏಜನ್ಸೀಸ್).