ಬೆಂಗಳೂರು: ಮೈಸೂರು ವಾರಿಯರ್ಸ್ ತಂಡ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ 4ನೇ ಹಾಗೂ ಅಂತಿಮ ತಂಡವಾಗಿ ಪ್ಲೇಆಫ್ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ನಾಯಕ ವೈಶಾಖ್ ವಿಜಯಕುಮಾರ್ (1ಕ್ಕೆ 3) ಸಹಿತ ಬೌಲರ್‌ಗಳ ಮಾರಕ ದಾಳಿಯ ನೆರವಿನಿಂದ ಶಿವಮೊಗ್ಗ ಯೋಧಾಸ್ ಎದುರು 6 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಶಿವಮೊಗ್ಗ ಯೋಧಾಸ್ ಹಾಲಿ ಅವೃತ್ತಿಯಲ್ಲಿ ಕನಿಷ್ಠ ಮೊತ್ತ ದಾಖಲಿಸಿತು. ವೈಶಾಕ್, ಮಾಧವ್ ಬಜಾಜ್ (9ಕ್ಕೆ 3) ಹಾಗೂ ಅರಬಿಂದ್ ರೈ (28ಕ್ಕೆ 3) ದಾಳಿಗೆ ನಲುಗಿದ ಶಿವಮೊಗ್ಗ 10.5 ಓವರ್‌ಗಳಲ್ಲಿ 66 ರನ್‌ಗಳಿಗೆ ಆಲೌಟ್ ಆಯಿತು. ತನ್ನ ಅಂತಿಮ ಲೀಗ್ ಪಂದ್ಯಕ್ಕೆ ಮುನ್ನ ಪ್ಲೇಆಫ್ ಸ್ಥಾನ ಖಾತ್ರಿಪಡಿಸಿಕೊಂಡಿದ್ದ ಶಿವಮೊಗ್ಗ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿತು. ಪ್ರತಿಯಾಗಿ 10 ಓವರ್‌ಗಳಲ್ಲಿ 4 ವಿಕೆಟ್‌ಗೆ 67 ರನ್‌ಗಳಿಸಿದ ಮೈಸೂರು ಟೂರ್ನಿಯಲ್ಲಿ 4ನೇ ಜಯ ಸಾಧಿಸಿತು.
ಶಿವಮೊಗ್ಗ ಯೋಧಾಸ್: 10.5 ಓವರ್‌ಗಳಲ್ಲಿ 66 (ಲವನೀತ್ 12, ಜ್ಞಾನೇಶ್ವರ್ 12, ತುಷಾರ್ 13, ಹರ್ಷಿಲ್ 8, ಅನೀಶ್ 11, ವೈಶಾಖ್ 1ಕ್ಕೆ 3, ಅರಬಿಂದ್ 28ಕ್ಕೆ 3, ಮಾಧವ್ 9ಕ್ಕೆ 3).
ಮೈಸೂರು ವಾರಿಯರ್ಸ್: 10 ಓವರ್‌ಗಳಲ್ಲಿ 4 ವಿಕೆಟ್‌ಗೆ 67 (ಕಾರ್ತಿಕ್ ಎಸ್‌ಯು 6, ಚೇತನ್ ಎಲ್‌ಆರ್ 26, ರಿತೇಶ್ 4, ಕಾರ್ತಿಕೇಯ 10, ರೋಹನ್ 12*, ಯುವರಾಜ್ 3*, ಅಭಿಲಾಷ್ 15ಕ್ಕೆ 3).
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್.