LSG vs DC  
ಕ್ರಿಕೆಟ್

141 ರನ್​ಗೆ ಆಲ್​ಔಟ್​ ಆದ ಲಖನೌ ಪಡೆ! ಮೊದಲ ಇನ್ನಿಂಗ್ಸ್​ನಲ್ಲಿ ಮಿಂಚಿದ ಡೆಲ್ಲಿ ಕ್ಯಾಪಿಟಲ್ಸ್​ ಬೌಲರ್​ಗಳು | LSG vs DC

ಮೊದಲು ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್​ ನಾಯಕ ಅಕ್ಷರ್ ಪಟೇಲ್​, ಎಲ್​ಎಸ್​ಜಿಗೆ ಬ್ಯಾಟ್​ ಮಾಡಲು ಆಹ್ವಾನಿಸಿದರು. ಅಬ್ಬರದ ಪ್ರದರ್ಶನ ಬರಲಿದೆ ಎಂದೇ ನಿರೀಕ್ಷಿಸಿದ್ದ ಫ್ಯಾನ್ಸ್​ಗೆ ಲಖನೌ ಪಡೆಯ ಬ್ಯಾಟರ್​ಗಳು ಭಾರೀ ನಿರಾಶೆಗೊಳಿಸಿದರು.
ಲಖನೌ ಬ್ಯಾಟರ್​ಗಳನ್ನು ಕಾಡಿದ ಲುಂಗಿ ಎನ್​ಗಿಡಿ ಮತ್ತು ನಟರಾಜನ್​ ತಲಾ ಮೂರು ವಿಕೆಟ್​ ಕಬಳಿಸಿದರು. ಇನ್ನು ಸ್ಪಿನ್​ ಮೋಡಿ ಮಾಡಿದ ಕುಲದೀಪ್ ಯಾದವ್,​ ಎರಡು ವಿಕೆಟ್​ ಪಡೆದು ತಂಡದ ಮಿಂಚಿದರು.