LSG vs DC: ಇಲ್ಲಿನ ಏಕಾನಾ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 19ನೇ ಆವೃತ್ತಿಯ ಐದನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದು ಬೀಗಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಎಲ್ಎಸ್ಜಿ, 18.4 ಓವರ್ಗೆ ಕೇವಲ 141 ರನ್ ಕಲೆಹಾಕಿತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಅಕ್ಷರ್ ಪಡೆಗೆ ಆರಂಭಿಕ ಆಘಾತ ಎದುರಾಯಿತು. ಓಪನರ್ಗಳಾದ ಕೆ.ಎಲ್. ರಾಹುಲ್ ಡಕ್ ಔಟ್ ಆದರೆ, ಪತ್ತಮ್ ನಿಸ್ಸಂಕಾ ಒಂದು ರನ್ಗೆ ಪೆವಿಲಿಯನ್ ಹಾದಿ ಹಿಡಿದರು.
ಆರಂಭಿಕರ ಬಳಿಕ ಬಂದ ನಿತೀಶ್ ರಾಣಾ 15 ರನ್ ಬಾರಿಸಿದರೆ,ಅಕ್ಷರ್ ಪಟೇಲ್ ಶೂನ್ಯಕ್ಕೆ ಔಟ್ ಆದರು. ಪವರ್ಪ್ಲೇ ಹಂತದಲ್ಲಿ ಕೇವಲ 33 ರನ್ಗೆ 4 ಬಹುಮುಖ್ಯ ವಿಕೆಟ್ಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ಗೆ ಆಸರೆಯಾಗಿದ್ದ ಸಮೀರ್ ರಿಜ್ವಿ ಮತ್ತು ಟ್ರಿಸ್ಟನ್ ಸ್ಟಬ್ಸ್ ಅವರ ಭರ್ಜರಿ ಇನ್ನಿಂಗ್ಸ್.