ಟೂರ್ನಿಗು ಮುನ್ನ ಅಯೋಧ್ಯೆಯ ರಾಮನ ದರ್ಶನ ಪಡೆದ ಎಲ್ಎಸ್ಜಿ ತಂಡ
- ಮಾರ್ಚ್ 28 ರಿಂದ ಆರಂಬವಾಗಲಿರುವ ಐಪಿಎಲ್
- ಟೂರ್ನಿಗು ಮುನ್ನ ಅಯೋಧ್ಯೆಯ ರಾಮನ ದರ್ಶನ ಪಡೆದ ಎಲ್ಎಸ್ಜಿ ತಂಡ
- ಸಾಮಾಜಿಕ ಜಾಲತಾಣದಲ್ಲಿ ಜೈ ಶ್ರೀ ರಾಮ್ ಎಂದು ಟ್ವಿಟ್ ಮಾಡಿದ ತಂಡ
ಉತ್ತರ ಪ್ರದೇಶ: ಇನ್ನೇನು ಕೆಲವೇ ದಿನಗಳಲ್ಲಿ ಭಾರತದ ಕ್ರಿಕೆಟ್ ಹಬ್ಬವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಲಿದೆ. ಮಾರ್ಚ್ 28 ರಂದು ಶುರುವಾಗಲಿರುವ ಈ ರಸ ದೌತಣವನ್ನು ಸವಿಯಲು ಕ್ರೀಡಾಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಭಾರತೀಯ ಪರಂಪರೆಯಲ್ಲಿ ಯಾವುದೇ ಒಂದು ಒಳ್ಳೆಯ ಕಾರ್ಯ ಮಾಡುವ ಮೊದಲು ದೇವಸ್ಥಾನಗಳಿಗೆ ಹೋಗುವುದು ಸಾಮಾನ್ಯವಾಗಿದೆ. ಅಂತೆಯೇ ಇಂದು (ಮಾರ್ಚ್ 21) ರಂದು ಲಖನೌ ಸೂಪರ್ ಜೈಂಟ್ಸ್ ತಂಡದ ಮಾಲೀಕ ಡಾ. ಸಂಜೀವ್ ಗೋಯಂಕಾ ಹಾಗೂ ತಂಡದ ನಾಯಕ ರಿಷಭ್ ಪಂತ ಸೇರಿಂದಂತೆ ಇತರೆ ಆಟಗಾರರು ಅಯೋಧ್ಯೆ (LSG Team Visit Ayodhya) ಯ ಶ್ರೀರಾಮನ ಜನ್ಮ ಭೂಮಿಯ ದರ್ಶನ ಪಡೆದಿದ್ದಾರೆ.
ಜೈ ಶ್ರೀ ರಾಮ್ ಎಂದು ಟ್ವಿಟ್!
ಈ ಕುರಿತು ಟ್ವಿಟರ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ನ ಅಧಿಕೃತ ಖಾತೆಯಿಂದ ಫೋಸ್ಟ್ವೊಂದನ್ನು ಹಂಚಿಕೊಳ್ಳಲಾಗಿದ್ದು, ತಂಡದ ಮಾಲೀಕರಾದ ಡಾ. ಸಂಜೀವ್ ಗೋಯಂಕಾ, ನಾಯಕ ರಿಷಭ್ ಪಂತ್ ಹಾಗೂ ತಂಡದ ಇತರೆ ಆಟಗಾರರೊಂದಿಗೆ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯ ದರ್ಶನ ಪಡೆದಿದ್ದಾರೆ. ಜೈ ಶ್ರೀ ರಾಮ್ ಎಂದು ಫೋಸ್ಟ್ನಲ್ಲಿ ಬರೆಯಲಾಗಿದೆ.
ಡೆಲ್ಲಿ ವಿರುದ್ಧ ಮೊದಲ ಪಂದ್ಯ
ಮಾರ್ಚ್ 28 ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಬುಧವಾರ (ಏಪ್ರಿಲ್ 1) ದಂದು ಲಖನೌ ಸೂಪರ್ ಜೈಂಟ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಆಡಲಿದೆ. 2025 ರ ಐಪಿಎಲ್ನಲ್ಲಿ ಲಖನೌ ತಂಡ ಆಡಿದ 14 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಗೆದ್ದು 8 ಪಂದ್ಯಗಳಲ್ಲಿ ಸೋಲುವ ಮೂಲಕ 12 ಪಾಯಿಂಟ್ಗಳನ್ನು ಪಡೆದು, ಪಾಯಿಂಟ್ಸ್ ಪಟ್ಟಿಯಲ್ಲಿ 7 ಸ್ಥಾನ ಪಡೆದುಕೊಂಡಿತ್ತು,(ಏಜನ್ಸೀಸ್).