ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ
- ಮುಂದಿನ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಸಂಜು ಸ್ಯಾಮ್ಸನ್ ಬದಲಿಗೆ ವೈಭವ್ಗೆ ಅವಕಾಶ
- ವೈಭವ್ ಬದಲಿಗೆ ಸಂಜುರನ್ನೇ ಆಡಿಸಿ ಎಂದ ಮಾಜಿ ಬಿಸಿಸಿಐ ಆಯ್ಕೆಗಾರ
Vaibhav Sooryavnshi: ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್ ವಾಶ್ ಆದ ಟೀಮ್ ಇಂಡಿಯಾ, ಈಗ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯವನ್ನಾಡಿದೆ. ಇದರಲ್ಲಿ ಗೆಲುವು ಕಾಣಲು ಸಾಧ್ಯವಾಗದಿದ್ದರೂ ಐರಿಶ್ ಪಡೆ ಎದುರು ತೋರಿದ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನೇ ಆಂಗ್ಲರ ಮಣ್ಣಿನಲ್ಲಿ ಮುಂದುವರಿಸಿರುವ ಶ್ರೇಯಸ್ ಅಯ್ಯರ್ ಪಡೆಗೆ ಸದ್ಯ ಕ್ರಿಕೆಟ್ ಪ್ರೇಮಿಗಳಿಂದ ಮಹತ್ವದ ಬದಲಾವಣೆ ಮಾಡಿಕೊಳ್ಳುವಂತೆ ಒತ್ತಾಯಗಳು ಕೇಳಿಬಂದಿವೆ.
ಈಗಾಗಲೇ ಆಡಿರುವ ಮೂರು ಟಿ20 ಪಂದ್ಯಗಳಲ್ಲಿ ಒಂದಂಕಿ ರನ್ಗಳನ್ನು ಬಾರಿಸಿರುವ ಸಂಜು ಸ್ಯಾಮ್ಸನ್, ತಮ್ಮ ಸಹ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮ ಅವರಿಗೆ ಸರಿಯಾದ ಸಾಥ್ ನೀಡುತ್ತಿಲ್ಲ. ಇದು ಕ್ರಿಕೆಟ್ ಪ್ರೇಮಿಗಳನ್ನು ಕೆರಳಿಸಿದೆ. ಮೊದಲೇ ಟೀಮ್ ಇಂಡಿಯಾ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಗೆ ಅವಕಾಶ ನೀಡದ ಮ್ಯಾನೇಜ್ಮೆಂಟ್ ವಿರುದ್ಧ ಕಿಡಿಕಾರಿರುವ ಫ್ಯಾನ್ಸ್, ಸ್ಯಾಮ್ಸನ್ರ ಫ್ಲಾಪ್ ಶೋ ನಡುವೆಯೂ ವೈಭವ್ಗೆ ಚಾನ್ಸ್ ಕೊಡದೆ, ಇನ್ನೂ ಸಂಜುರನ್ನೇ ಆಡಿಸುತ್ತಿರುವುದು ತಾಳ್ಮೆಯನ್ನು ಕಳೆದುಕೊಳ್ಳುವಂತೆ ಮಾಡಿದೆ.
ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯ ಓಕೆ. ಆದರೆ, ಎರಡನೇ ಟಿ20 ಪಂದ್ಯದಿಂದ ಯಾವುದೇ ಕಾರಣಕ್ಕೂ ಸಂಜುಗೆ ಅವಕಾಶ ಕೊಡಬೇಡಿ ಎಂದು ಫ್ಯಾನ್ಸ್, ಹೆಡ್ ಕೋಚ್ ಗೌತಮ್ ಗಂಭೀರ್ ಮ್ಯಾನೇಜ್ಮೆಂಟ್ ಮೇಲೆ ಒತ್ತಾಯ ಹೇರಿದ್ದಾರೆ. ಕೆಲವರು, ವೈಭವ್ರನ್ನು ಇನ್ನೂ ಆಡಿಸಲು ಹಿಂದೇಟು ಹಾಕಿದರೆ ಖಂಡಿತ ಐರ್ಲೆಂಡ್ ಎದುರು ಕ್ಲೀನ್ ಸ್ವೀಪ್ ಆದಂತೆಯೇ ಆಂಗ್ಲರ ವಿರುದ್ಧವೂ ವೈಟ್ ವಾಶ್ ಆಗ್ತಾರೆ ಎಂದು ಟೀಕಿಸಿದ್ದಾರೆ.
ಈ ಟೀಕೆಗಳ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಬೆನ್ನಿಗೆ ನಿಂತ ಬಿಸಿಸಿಐನ ಮಾಜಿ ಆಯ್ಕೆಗಾರ ಸಬಾ ಕರೀಮ್, ಮೂರು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಕಳಪೆ ಪ್ರದರ್ಶನ ನೀಡಿದ್ದರೂ ಯಾವುದೇ ಕಾರಣಕ್ಕೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜುರನ್ನು ಮುಂದಿನ ಪಂದ್ಯದಿಂದ ಕೈಬಿಡಬಾರದು. ಈ ಹಂತದಲ್ಲಿ ಸ್ಯಾಮ್ಸನ್ ತುಂಬಾ ಮುಖ್ಯ. ಆತನೊಬ್ಬ ಅದ್ಭುತ ಕ್ರಿಕೆಟಿಗ ಮತ್ತು ಪಂದ್ಯ ವಿಜೇತ ಆಟಗಾರ. ಐಪಿಎಲ್ ಮತ್ತು ಅದಕ್ಕೂ ಮೊದಲು, 2026ರ ಟಿ20 ವಿಶ್ವಕಪ್‌ನಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಸ್ಟಾರ್ ಬ್ಯಾಟರ್. ಹೀಗಿರುವಾಗ, ಹೇಗೆ ಅವರನ್ನು ತೆಗೆಯುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ವೈಭವ್ ಕಾಯಲಿ...
ವೈಭವ್ ಸೂರ್ಯವಂಶಿ ಇನ್ನೂ ಚಿಕ್ಕವನು. ತಂಡದಲ್ಲಿ ಸೇರಿಕೊಳ್ಳುವ ಮೂಲಕ ಬಹಳಷ್ಟು ಕಲಿಯುತ್ತಿದ್ದಾರೆ. ಈ ಸಮಯದಲ್ಲಿ, ವೈಭವ್ಕಲಿಕೆಗೆ ಆದ್ಯತೆ ನೀಡಬೇಕು ಮತ್ತು ತನ್ನ ಪಾಲಿಗೆ ಅವಕಾಶಗಳು ಬರುವವರೆಗೂ ಕಾಯಬೇಕು. ಆತ ತುಂಬಾ ಪ್ರತಿಭಾನ್ವಿತ ನಿಜ. ಆದರೆ, ಟೀಮ್ ಇಂಡಿಯಾ ಸ್ಥಾನಗಳಿಗೆ ಪೈಪೋಟಿ ಇದ್ದಾಗ, ನೀವು ನಿಮ್ಮ ಸರದಿಗಾಗಿ ಕಾಯಲೇ ಬೇಕು" ಎಂದು ಹೇಳಿದ್ದಾರೆ. ಕರೀಮ್ ಅವರ ಈ ಮಾತುಗಳು ಸದ್ಯ ವಂಡರ್ ಕಿಡ್ ಅಭಿಮಾನಿಗಳ ಪಿತ್ತವನ್ನು ನೆತ್ತಿಗೇರಿಸಿದೆ ಎಂಬುದರಲ್ಲಿ ಅನುಮಾನವೇ ಬೇಡ,(ಏಜೆನ್ಸೀಸ್).