ಐಪಿಎಲ್​ ಜನಕ ಲಲಿತ್​ ಮೋದಿ  
ಕ್ರಿಕೆಟ್

16 ವರ್ಷಗಳ ಬಳಿಕ ಭಾರತಕ್ಕೆ ಬರಲಿದ್ದಾರೆ ಐಪಿಎಲ್​ ಜನಕ ಲಲಿತ್​ ಮೋದಿ! ಹೀಗಿದೆ ಕಾರಣ | Lalit Modi

ಪ್ರಮುಖ ಮುಖ್ಯಾಂಶಗಳು

  • 16 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಕಡೆಗೂ ಮುಕ್ತಿ
  • ಭಾರತಕ್ಕೆ ಮರಳಲು ಲಲಿತ್ ಮೋದಿ ರೆಡಿ
  • ವಿದೇಶಿ ನಿಧಿ ವರ್ಗಾವಣೆ ಪ್ರಕರಣದ ಹಿನ್ನೆಲೆ ಭಾರತದಿಂದ ಹೊರಗಿದ್ದ ಲಲಿತ್​
Lalit Modi: ಐಪಿಎಲ್ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಲಲಿತ್ ಮೋದಿ ಇದೀಗ 16 ವರ್ಷಗಳ ಬಳಿಕ ಭಾರತಕ್ಕೆ ಮರಳಿ ಬರುವುದಾಗಿ ತಿಳಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
2009ರ ಐಪಿಎಲ್ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಪ್ರಕರಣದಲ್ಲಿ ಮೇಲ್ಮನವಿ ನ್ಯಾಯಮಂಡಳಿ ಲಲಿತ್ ಮೋದಿಗೆ ಬಿಗ್ ರಿಲೀಫ್ ನೀಡಿದೆ. ಈ ತೀರ್ಪಿನ ಬೆನ್ನಲ್ಲೇ ಅವರು ಈ ವರ್ಷದ ಅಂತ್ಯದೊಳಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ತವರಿಗೆ ಮರಳುವುದಾಗಿ ಹೇಳಿರುವ ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿದೆ. ನ್ಯಾಯಾಲಯದ ಈ ತೀರ್ಪು 16 ವರ್ಷಗಳಿಂದ ನಡೆದ ದೀರ್ಘ ಕಾನೂನು ಹೋರಾಟಕ್ಕೆ ಕಡೆಗೂ ತೆರೆ ಎಳೆದಿದೆ ಎಂದಿದ್ದಾರೆ.
ಫೆಮಾ ಪ್ರಕರಣ ದಾಖಲಾದ ಬಳಿಕ 2010ರಿಂದ ಲಲಿತ್ ಮೋದಿ ವಿದೇಶದಲ್ಲೇ ನೆಲೆಸಿದ್ದಾರೆ. ಇತ್ತೀಚೆಗೆ, ಮೇಲ್ಮನವಿ ನ್ಯಾಯಮಂಡಳಿ ಈ ಪ್ರಕರಣದಲ್ಲಿ ಅವರಿಗೆ ರಿಲೀಫ್ ನೀಡಿತು. ಇತ್ತೀಚಿನ ತೀರ್ಪಿನಿಂದ ತನಗೆ ಬಹಳ ಸಂತೋಷವಾಗಿದೆ ಎಂದು ಲಲಿತ್ ಮೋದಿ ಹೇಳಿದ್ದಾರೆ. ಇದು ನಿಜಕ್ಕೂ ಶ್ರೇಷ್ಠ ದಿನ. ಕಳೆದ ಹದಿನಾರು ವರ್ಷಗಳಿಂದ ನಾನು ಮಾಧ್ಯಮಗಳಿಗೆ ಹಾಗೂ ಎಲ್ಲರಿಗೂ ಹೇಳುತ್ತಿದ್ದ ಮಾತುಗಳು ಕೊನೆಗೂ ದಿಟವಾಗಿದೆ. ನಾನು ಐಪಿಎಲ್ ಟೂರ್ನಿಯನ್ನು ತುಂಬಾ ಇಷ್ಟಪಡುತ್ತೇನೆ. ಐಪಿಎಲ್ ಯಶಸ್ಸಿನ ಬಗ್ಗೆ ಮಾತ್ರ ಯೋಚಿಸುತ್ತಿದೆ ಎಂದು ಹೇಳಿದ್ದಾರೆ. 
ಆ ಅಧ್ಯಾಯ ಈಗ ಮುಗಿದಿದೆ. ನಾನು ನನ್ನ ಜೀವನದೊಂದಿಗೆ ಮುಂದುವರಿಯುವ ಸಮಯ ಹತ್ತಿರವಾಗಿದೆ. ಭಾರತಕ್ಕೆ ಮರಳಲು ಉತ್ಸುಕನಾಗಿದ್ದೇನೆ. ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ನಾನು ಭಾರತಕ್ಕೆ ವಾಪಾಸ್​ ಆಗುವೆ. ನನ್ನ ಮಗಳು ಅಕ್ಟೋಬರ್‌ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾಳೆ. ಎಲ್ಲವೂ ಸರಿ ಹೋಗುತ್ತದೆ ಎಂದು ಭಾವಿಸಿದ್ದೇನೆ ಎಂದು ಲಲಿತ್ ಮೋದಿ ಹೇಳಿದ್ದಾರೆ.
2009ರಲ್ಲಿ ಸಾರ್ವತ್ರಿಕ ಚುನಾವಣೆಗಳ ಕಾರಣ ಐಪಿಎಲ್ ಅನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಿದಾಗ ವಿದೇಶಿ ನಿಧಿ ವರ್ಗಾವಣೆಯಲ್ಲಿ ಫೆಮಾ ನಿಯಮಗಳ ಉಲ್ಲಂಘನೆಯ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇಡಿ ಲಲಿತ್ ಮೋದಿ ಮತ್ತು ಇತರ ಕೆಲವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿತು. ಜಾರಿ ನಿರ್ದೇನಾಲಯ ಲಲಿತ್ ಮೋದಿಗೆ 10.65 ಕೋಟಿ ದಂಡ ವಿಧಿಸಿದೆ. ನ್ಯಾಯಾಧಿಕರಣದ ಇತ್ತೀಚಿನ ತೀರ್ಪು ಸುದೀರ್ಘ ಕಾನೂನು ಹೋರಾಟಕ್ಕೆ ನಿರ್ಣಾಯಕ ತಿರುವನ್ನೇ ನೀಡಿದೆ,(ಏಜೆನ್ಸೀಸ್),