ಬ್ಯಾಲದ ಗೆಳತಿ ವಂಶಿಕಾ ಚಡ್ಡಾ ಕೈ ಹಿಡಿದ ಕುಲ್ದೀಪ್​ ಯಾದವ್​ 
ಕ್ರಿಕೆಟ್

ಬದುಕಿನ ನೂತನ ಇನಿಂಗ್ಸ್ ಆರಂಭಿಸಿದ ಕುಲ್ದೀಪ್ ಯಾದವ್: ಬಾಲ್ಯದ ಗೆಳತಿ ವಂಶಿಕಾ ಕೈ ಹಿಡಿದ ಸ್ಪಿನ್ ಬೌಲರ್! Kuldeep Yadav Marriage

ಪ್ರಮುಖ ಮುಖ್ಯಾಂಶಗಳು

  • ಬದುಕಿನ ಹೊಸ ಇನ್ನಿಂಗ್ಸ್ ಆರಂಭಿಸಿದ ಕುಲ್ದೀಪ್​ ಯಾದವ್​
  • ಬ್ಯಾಲದ ಗೆಳತಿ ವಂಶಿಕಾ ಚಡ್ಡಾ ಕೈ ಹಿಡಿದ ಸ್ಪಿನ್ನರ್​
  • ಡೆರ್ರಾಡೂನಿನಲ್ಲಿ ನಡೆದ ಅದ್ಧೂರಿ ಮದುವೆ ಸಮಾರಂಭ
ಮಸ್ಸೂರಿ: ಟೀಮ್​ ಇಂಡಿಯಾ ಟಿ-ಟ್ವೆಂಟಿ ವಿಶ್ವಕಪ್​ನ್ನು ಗೆದ್ದ ಬೆನ್ನಲ್ಲೇ ಭಾರತ ತಂಡದ ಸ್ಪಿನ್​ ಬೌಲರ್​, ಕುಲ್ದೀಪ್​ ಯಾದವ್​ (Kuldeep Yadav Marriage) ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಅವರನ್ನು ಮದುವೆಯಾಗುವ ಬಳಿಕ, ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಡೆಹರ್ರಾಡೂನಿನ ಖಾಸಗಿ ರೆಸಾರ್ಟ್​ನಲ್ಲಿ ಶನಿವಾರ (ಮಾ.14) ಕುಲ್ದೀಪ್​ ಯಾದವ್​ ವಂಶಿಕಾ ಚಡ್ಡಾ ಅವರನ್ನು ವರಿಸಿ, ಅಧಿಕೃತವಾಗಿ ಮದುವೆಯಾಗಿದ್ದಾರೆ. ಈ ಮದುವೆಯಲ್ಲಿ ಟೀಂ ಇಂಡಿಯಾದ ಯಜುವೇಂದ್ರ ಜಹಲ್, ತಿಲಕ್​ ವರ್ಮಾ, ರಿಂಕು ಸಿಂಗ್​ ಮಾಜಿ ಆಟಗಾರರಾದ ಸುರೇಶ್​ ರೈನಾ, ಆರ್​.ಪಿ. ಸಿಂಗ್​, ಸುನೀಲ್​ ಗವಾಸ್ಕರ್​ ಮೊದಲಾದವರು ಹಾಜರಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿಯ ಮದುವೆ ಫೋಟೊ ಸಖತ್​ ವೈರಲ್​ ಆಗುತ್ತಿದ್ದು, ಬೆಳ್ಳಿ ಬಣ್ಣದ ಶೆರ್ವಾನಿಯಲ್ಲಿ ಕುಲ್ದೀಪ್​ ಮಿಂಚಿದರೆ ಅದಕ್ಕೆ ತಕ್ಕಂತೆ ವಂಶಿಕಾ ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದರು. ಇವರಿಬ್ಬರ ಮದುವೆಯು ಮೊದಲು ನವೆಂಬರ 2025 ರಲ್ಲಿಯೇ ನಡೆಯಬೇಕಿದ್ದು, ಟಿ-20 ವಿಶ್ವಕಪ್​ನಲ್ಲಿ ಪಾಲ್ಗೊಳ್ಳುವ ಹಿನ್ನಲೆಯಲ್ಲಿ ಕುಲ್ದೀಪ್​ ಮದುವೆಯನ್ನು ಮುಂದೂಡಿದ್ದರು ಎಂದು ವರದಿಗಳು ಹೇಳಿವೆ.

ಐಷಾರಾಮಿ ವ್ಯವಸ್ಥೆ

ವಿವಿಐಪಿ ಅತಿಥಿಗಳಿಗಾಗಿ ಸುಮಾರು 80 ಕೊಠಡಿಗಳನ್ನು ಸವೊಯ್ ಹೋಟೆಲ್‌ನಲ್ಲಿ ಕಾಯ್ದಿರಿಸಲಾಗಿದೆ. ಅಷ್ಟೇ ಅಲ್ಲದೆ, ಜೆಡಬ್ಲ್ಯೂ ಮ್ಯಾರಿಯಟ್ ಮತ್ತು ಫಾರ್ಚೂನ್ ಹೋಟೆಲ್‌ನಲ್ಲಿಯೂ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಡೆಹ್ರಾಡೂನ್ ವಿಮಾನ ನಿಲ್ದಾಣದಿಂದ ಅತಿಥಿಗಳನ್ನು ಕರೆತರಲು ಐಷಾರಾಮಿ ಶಟಲ್‌ಗಳನ್ನು ನಿಯೋಜಿಸಲಾಗಿದೆ.
ಒಟ್ಟಾರೆಯಾಗಿ, ಈ ಮದುವೆ ಕೇವಲ ಕ್ರಿಕೆಟಿಗನ ಮದುವೆಯಲ್ಲ, ಅದೊಂದು ರಾಜವೈಭವದ ಸಮ್ಮೇಳನ ಎಂದರೆ ತಪ್ಪಾಗದು. ಮದುವೆಯ ಬಳಿಕ ಆಚರಣೆಗಳು ಕುಲ್ದೀಪ್ ಅವರ ತವರೂರು ಲಕ್ನೋಗೆ ಸ್ಥಳಾಂತರಗೊಳ್ಳಲಿದ್ದು, ಮಾರ್ಚ್ 17 ರಂದು ಹೋಟೆಲ್ ಸೆಂಟ್ರಮ್‌ನಲ್ಲಿ ಭವ್ಯ ಸ್ವಾಗತ ಸಮಾರಂಭ ನಡೆಯಲಿದೆ,(ಏಜನ್ಸೀಸ್​).