- ಸ್ಪಿನ್ನರ್ ಕುಲದೀಪ್ ಯಾದವ್ ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಅವರನ್ನು ಶನಿವಾರ ವಿವಾಹವಾದರು
- ಇದೀಗ ಅವರು ಹಂಚಿಕೊಂಡ ಹೃದಯೀಸ್ಪರ್ಶಿ ಪೋಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
- 14.03.2026 ರಿಂದ ನಮ್ಮ ಶಾಶ್ವತತೆ ಪ್ರಾರಂಭವಾಗುತ್ತದೆ ಎಂಬ ಶೀರ್ಷಿಕೆ ಬರೆದು ಪೋಸ್ಟ್ ಮಾಡಿದ ಸ್ಪಿನ್ನರ್
Kuldeep Yadav: ಭಾರತೀಯ ಕ್ರಿಕೆಟ್ ತಂಡದ ಯಶಸ್ವಿ ಸ್ಪಿನ್ನರ್ ಕುಲದೀಪ್ ಯಾದವ್ ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಅವರನ್ನು ಶನಿವಾರ ಉತ್ತರಾಖಂಡದ ಮಸ್ಸೂರಿಯಲ್ಲಿ ವಿವಾಹವಾದರು. ಇದೀಗ ಅವರು ಹಂಚಿಕೊಂಡ ಹೃದಯೀಸ್ಪರ್ಶಿ ಪೋಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೋಸ್ಟ್ನಲ್ಲೇನಿದೆ?
ಕುಲದೀಪ್ ಇನ್‌ಸ್ಟಾಗ್ರಾಮ್‌ನಲ್ಲಿ ಸಮಾರಂಭದ ಕೆಲವೊಂದು ಚಿತ್ರಗಳನ್ನು ಹಂಚಿಕೊಂಡಿದ್ದು, 14.03.2026 ರಿಂದ ನಮ್ಮ ಶಾಶ್ವತತೆ ಪ್ರಾರಂಭವಾಗುತ್ತದೆ ಎಂಬ ಶೀರ್ಷಿಕೆಯನ್ನು ಬರೆದು ಪೋಸ್ಟ್ ಮಾಡಿದ್ದಾರೆ.
ಈ ಖಾಸಗಿ ಸಮಾರಂಭದಲ್ಲಿ ತಿಲಕ್ ವರ್ಮಾ , ರಿಂಕು ಸಿಂಗ್ , ಯುಜ್ವೇಂದ್ರ ಚಾಹಲ್ ಮತ್ತು ಸುರೇಶ್ ರೈನಾ ಸೇರಿದಂತೆ ಹಲವಾರು ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಈ ಭಾಗವಹಿಸಿದ್ದರು.
ಕುಲದೀಪ್ ಮತ್ತು ವಂಶಿಕಾ ಅವರ ವಿವಾಹವನ್ನು ವೆಲ್ಕಮ್‌ಹೋಟೆಲ್ ದಿ ಸವೊಯ್‌ನಲ್ಲಿ ಆಯೋಜಿಸಲಾಗಿತ್ತು, ಆದಾಗ್ಯೂ, ಈ ಉತ್ಸವಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ ಹಲವು ದಿನಗಳವರೆಗೆ ಕಾಯ್ದಿರಿಸಲಾಗಿತ್ತು ಎಂದು ತಿಳಿದುಬಂದಿದೆ.
ಕಳೆದ ವರ್ಷ ದಂಪತಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅವರ ಸಂಭ್ರಮದ ಕೆಲವೊಂದು ವಿಡಿಯೋ ಮತ್ತು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಒಂದು ಕ್ಲಿಪ್ನಲ್ಲಿ ಕುಲದೀಪ್ ಮತ್ತು ವಂಶಿಕಾ ಕೈಕೈ ಹಿಡಿದುಕೊಂಡು ನಡೆಯುತ್ತಿರುವುದು ಕಂಡುಬರುತ್ತದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಶುಕ್ರವಾರ ನಡೆದ ಸಮಾರಂಭದ ಒಳ ನೋಟವನ್ನು ಒದಗಿಸಿವೆ. ಆದಾಗ್ಯೂ, ಕ್ರಿಕೆಟ್ ದಿಗ್ಗಜರಾದ ರೈನಾ ಮತ್ತು ಚಾಹಲ್ ಕೆಲವೊಂದು ಚಿತ್ರಗಳಲ್ಲಿ ವಧು-ವರರು ಸಾಂಪ್ರದಾಯಕ ಉಡುಪಿನಲ್ಲಿ ಕಂಗೊಳಿಸುತ್ತಿರುವುದನ್ನು ಸೆರೆ ಹಿಡಿದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಶನಿವಾರ ಮಸ್ಸೂರಿಗೆ ಆಗಮಿಸಿದ ತಿಲಕ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಮುಂದಿನ ಐಪಿಎಲ್ 2026 ಸೀಸನ್‌ಗಾಗಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ತರಬೇತಿ ಆರಂಭಿಸುವ ಮೊದಲು, ನನ್ನ ಗೆಳೆಯ ಕುಲದೀಪ್ ಮದುವೆಯನ್ನು ಪೂರ್ಣ ಪ್ರಮಾಣದಲ್ಲಿ ಎಂಜಾಯ್ ಮಾಡಲು ಬಂದಿದ್ದೇನೆ ಎಂದು ತಿಳಿಸಿದರು.
2026 ರ ಟಿ 20 ವಿಶ್ವಕಪ್ ಗೆಲ್ಲುವಲ್ಲಿ ಭಾರತಕ್ಕೆ ಸಹಾಯ ಮಾಡುವತ್ತ ಗಮನಹರಿಸುವ ಸಲುವಾಗಿ ಕುಲದೀಪ್ ನವೆಂಬರ್ ರಲ್ಲಿ ನಿಗದಿಯಾಗಿದ್ದ ವಿವಾಹವನ್ನು ಮುಂದೂಡಿದರು ಎಂದು ವರದಿಗಳು ತಿಳಿಸಿವೆ (ಏಜೆನ್ಸೀಸ್).