ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಲ್ದೀಪ್​ ಯಾದವ್​ ವಂಶಿಕಾ ಜೋಡಿ 
ಕ್ರಿಕೆಟ್

ಜಡೇಜಾ ದಂಪತಿ ಕಾಲಿಗೆ ಬಿದ್ದ ಕುಲ್ದೀಪ್ ಯಾದವ್: ಆರತಕ್ಷತೆ ವಿಡಿಯೋ ವೈರಲ್​! Kuldeep Yadav

ಪ್ರಮುಖ ಮುಖ್ಯಾಂಶಗಳು

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಲ್ದೀಪ್​ ಯಾದವ್​ ವಂಶಿಕಾ ಜೋಡಿ
  • ಲಖನೌನಲ್ಲಿ ಜರಿಗಿದ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ
  • ರವೀಂದ್ರ ಜಡೇಜಾ ಹಾಗೂ ರಿವಾಬಾ ಜಡೇಜಾ ಕಾಲಿಗೆ ಬಿದ್ದ ಕುಲ್ದೀಪ್ ಯಾದವ್​
ಲಖನೌ: ಭಾರತ ಕ್ರಿಕೆಟ್​ ತಂಡದ ಸ್ಪಿನ್​ ಬೌಲರ್​ ಕುಲ್ದೀಪ್​ ಯಾದವ್ (Kuldeep Yadav)​ ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಅವರನ್ನು ಮಾರ್ಚ್​ 14 ರಂದು ಡೆಹ್ರರಾಡೂನಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದು, ಮಂಗಳವಾರ (ಮಾರ್ಚ್​ 17) ರಂದು ಈ ಜೋಡಿಯ ಆರತಕ್ಷತೆ ಕಾರ್ಯಕ್ರಮವು ಹುಟ್ಟುರಾದ ಲಖನೌನಲ್ಲಿ ಜುರುಗಿತು. ಈ ಕಾರ್ಯಕ್ರಮಕ್ಕೆ ಕ್ರಿಕೆಟ್​ ಹಾಗೂ ರಾಜಕೀಯ ವಲಯದಿಂದ ಹಲವಾರು ಅತಿಥಿಗಳು ಆಗಮಿಸಿದ್ದು, ಆರತಕ್ಷತೆಯ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಜಡೇಜಾ ದಂಪತಿಗಳ ಕಾಲಿಗೆ ಬಿದ್ದ ಕುಲ್ದೀಪ್​!

ಕುಲ್ದೀಪ್​ ಯಾದವ್​ ಅವರ ಆರತಕ್ಷತೆಗೆ ಭಾರತೀಯ ಕ್ರಿಕೆಟ್ ತಂಡದ ಹಲವಾರು ಮಾಜಿ ಹಾಗೂ ಹಾಲಿ ಆಟಗಾರರು ಆಗಮಿಸಿದ್ದರು.
ಆದರೆ, ಭಾರತ ಕ್ರಿಕೆಟ್​ ತಂಡದ ಆಲ್​ ರೌಂಡರ್​, ರವೀಂದ್ರ ಜಡೇಜಾ ಹಾಗೂ ಅವರ ಪತ್ನಿ ಸಚಿವೆ ರಿವಾಬಾ ಜಡೇಜಾ ವೇದಿಕೆ ಮೇಲೆ ಬರುತ್ತಿದ್ದಂತೆ ಕುಲ್ದೀಪ್​ ಯಾದವ್​ ಅವರ ಕಾಲಿಗೆ ಬಿದ್ದು ಆರ್ಶೀವಾದ ತೆಗೆದುಕೊಳ್ಳುತ್ತಿರುವ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಮುಖರು

ಕುಲ್ದೀಪ್​ ಯಾದವ್​ ಮತ್ತು ವಂಶಿಕಾ ಚಡ್ಡಾ ಅವರ ಆರತಕ್ಷತೆ ಕಾರ್ಯಕ್ರಮಕ್ಕೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ಗೌತಮ್​ ಗಂಭೀರ್​, ಯಶಸ್ವಿ ಜೈಸ್ವಾಲ್, ರಿಷಬ್ ಪಂತ್ ಮತ್ತು ಶಿಖರ್ ಧವನ್ ಆಗಮಿಸಿದ್ದರು.

ಕುಲ್ದೀಪ್​ ಯಾದವ್​ ವೃತ್ತಿ ಜೀವನ

ಭಾರತೀಯ ಕ್ರಿಕೆಟ್ ತಂಡದ ವಿಶಿಷ್ಟ ಬೌಲರ್ ಆಗಿರುವ ಕುಲದೀಪ್ ಯಾದವ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ 'ಚೈನಾಮನ್' (ಎಡಗೈ ರಿಸ್ಟ್ ಸ್ಪಿನ್) ಶೈಲಿಯ ಮೂಲಕವೇ ವಿಶ್ವದ ಗಮನ ಸೆಳೆದವರು. ಉತ್ತರ ಪ್ರದೇಶದ ಕಾನ್ಪುರದವರಾದ ಇವರು 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.
ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಮತ್ತು ಏಕೈಕ ಬೌಲರ್ ಎಂಬ ಅಪರೂಪದ ದಾಖಲೆ ಇವರ ಹೆಸರಿನಲ್ಲಿದೆ. ಭಾರತದ ಪರ 17 ಟೆಸ್ಟ್ , 120 ಏಕದಿನ ಮತ್ತು 54 ಟಿ-20 ಪಂದ್ಯಗಳನ್ನು ಆಡಿರುವ ಕುಲ್ದೀಪ್​, ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ,(ಏಜನ್ಸೀಸ್​).