ವಿಜಯ ಕ್ರಿಕೆಟ್ ಕ್ಲಬ್ಗೆ ಕೆಎಸ್ಸಿಎ 19 ವಯೋಮಿತಿ ಅಂತರ ಕ್ಲಬ್ ಪ್ರಶಸ್ತಿ
ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ನಾಯಕ-ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಒಳಗೊಂಡ ವಿಜಯ ಕ್ರಿಕೆಟ್ ಕ್ಲಬ್ ತಂಡ ಕೆಎಸ್ಸಿಎ 19 ವಯೋಮಿತಿ ಅಂತರ ಕ್ಲಬ್ ಕ್ರಿಕೆಟ್ ಟೂರ್ನಿಯಲ್ಲಿ (KSCA UNDER 19 YEARS INTER CLUB TOURNAMENT) ಪ್ರಶಸ್ತಿ ಗೆದ್ದುಕೊಂಡಿದೆ. ವಿಜಯ ಕ್ರಿಕೆಟ್ ಕ್ಲಬ್ ತಂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವಲ್ಚರ್ಸ್ ಕ್ರಿಕೆಟ್ ಕ್ಲಬ್ ತಂಡವನ್ನು 3 ವಿಕೆಟ್ಗಳಿಂದ ಮಣಿಸಿತು.
ಪ್ರಶಸ್ತಿ ಕಾದಾಟದಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದ ವಲ್ಚರ್ಸ್ ತಂಡ 29.5 ಓವರ್ಗಳಲ್ಲಿ 2 ವಿಕೆಟ್ಗೆ 217 ರನ್ ಬಾರಿಸಿತು. ಪ್ರತಿಯಾಗಿ ವಿಜಯ ಕ್ರಿಕೆಟ್ ಕ್ಲಬ್ ತಂಡ 44.4 ಓವರ್ಗಳಲ್ಲಿ 7 ವಿಕೆಟ್ಗೆ 237 ರನ್ ಗಳಿಸಿ ಜಯಿಸಿತು. ಅನ್ವಯ್ ದ್ರಾವಿಡ್ 100 ಎಸೆತಗಳಲ್ಲಿ 93 ರನ್ ಬಾರಿಸಿ ಗೆಲುವಿಗೆ ನೆರವಾದರು.