ಮತ್ತೊಮ್ಮೆ ಟ್ರೋಫಿ ಗೆಲ್ಲುವ ಅವಕಾಶ ಕೆಕೆಆರ್ ತಂಡಕ್ಕೆ ಈಗಲೂ ಇದೆ ಆದರೆ ಇದು ನಡೆದರೆ ಮಾತ್ರ! Kolkata Knight Riders  
ಕ್ರಿಕೆಟ್

ಮತ್ತೊಮ್ಮೆ ಟ್ರೋಫಿ ಗೆಲ್ಲುವ ಅವಕಾಶ ಕೆಕೆಆರ್ ತಂಡಕ್ಕೆ ಈಗಲೂ ಇದೆ ಆದರೆ ಇದು ನಡೆದರೆ ಮಾತ್ರ! Kolkata Knight Riders

ಪ್ರಮುಖ ಮುಖ್ಯಾಂಶಗಳು

  • 19 ನೇ ಆವೃತ್ತಿಯ ಐಪಿಎಲ್ ಟೂರ್ನಿ​ ಕೆಕೆಆರ್​ ತಂಡದ ಪಾಲಿಗೆ ನಿರಾಶದಾಯಕವಾಗಿದೆ
  • ಇಲ್ಲಿಯವರೆಗೂ ಆಡಿರುವ ಪಂದ್ಯಗಳಲ್ಲಿ ನಾಲ್ಕು ಸೋಲಾದರೆ ಒಂದು ಪಂದ್ಯ ಮಳೆಯಿಂದ ರದ್ದು
  • ಕೇವಲ ಒಂದು ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಕೋಲ್ಕತ್ತ ನೈಟ್​ ರೈಡರ್ಸ್​
  • ನಾಲ್ಕು ಪಂದ್ಯಗಳನ್ನು ಸೋತರು ಕೂಡ ಪ್ಲೇ ಆಫ್​​ ತಲುಪುವ ಹಾದಿ ಕೆಕೆಆರ್​ಗೆ ಇನ್ನೂ ತೆರೆದೇ ಇದೆ
Kolkata Knight Riders : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಿ​ ಕೋಲ್ಕತ್ತ ನೈಟ್ ರೈಡರ್ಸ್ (KKR) ತಂಡದ ಪಾಲಿಗೆ ನಿರಾಶದಾಯಕವಾಗಿದೆ. ಇಲ್ಲಿಯವರೆಗೂ ಐದು ಪಂದ್ಯಗಳನ್ನು ಆಡಿರುವ ಕೆಕೆಆರ್​, ನಾಲ್ಕು ಪಂದ್ಯಗಳಲ್ಲಿ ಸೋಲುಂಡಿದ್ದು, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೀಗಾಗಿ, ಕೇವಲ ಒಂದು ಅಂಕ ಗಳಿಸಿ, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ತಂಡದ ನೆಟ್​ ರನ್ ರೇಟ್​ (-1.383) ಕೂಡ ಮೈನಸ್​ ಇದೆ.
ತೀವ್ರ ಕಳಪೆ ಪ್ರದರ್ಶನ ನೀಡುತ್ತಿರುವ ಕೆಕೆಆರ್​, ಈ ಬಾರಿ ಪ್ಲೇ ಆಫ್​ ಹಂತಕ್ಕೆ ತಲುಪುವುದು ತುಂಬಾನೇ ಕಷ್ಟ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಬೆರಳೆಣಿಕೆ ಆಟಗಾರರನ್ನು ಬಿಟ್ಟರೆ, ತಂಡದ ಯಾವೊಬ್ಬ ಆಟಗಾರನು ಕೂಡ ನಿರೀಕ್ಷಿಯ ಪ್ರದರ್ಶನ ನೀಡುತ್ತಿಲ್ಲ. ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಕೆಕೆಆರ್​ ತಂಡ ಭಾರಿ ವೈಫಲ್ಯ ಅನುಭವಿಸುತ್ತಿದೆ. ಹೀಗಾಗಿ, ಕೆಕೆಆರ್​ ಮೇಲೆ ಈ ಬಾರಿಗ ಯಾರಿಗೂ ಭರವಸೆ ಇಲ್ಲ.
ಆದರೆ, ಅಚ್ಚರಿಯ ಸಂಗತಿ ಏನೆಂದರೆ, ಕೆಕೆಆರ್​ ತಂಡಕ್ಕೆ ಈಗಲೂ ಅವಕಾಶಗಳಿವೆ. ಸತತ ನಾಲ್ಕು ಪಂದ್ಯಗಳನ್ನು ಸೋತರು ಕೂಡ ಪ್ಲೇ ಆಫ್​​ ತಲುಪುವ ಹಾದಿ ಇನ್ನೂ ತೆರೆದೇ ಇದೆ. ಆದರೆ, ಹಾದಿಯಲ್ಲಿ ಸಾಗಬೇಕಾದರೆ, ಕೆಕೆಆರ್​ ತಂಡವು ಉಳಿದ ಪಂದ್ಯಗಳಲ್ಲಿ ತನ್ನ ಪ್ರದರ್ಶನವನ್ನು ಸುಧಾರಿಸಿಕೊಳ್ಳಬೇಕು ಮತ್ತು ಅಸಾಧಾರಣ ಪ್ರದರ್ಶನವನ್ನು ನೀಡಬೇಕು. ಒಂದು ವೇಳೆ ಕೆಕೆಆರ್​ ತಂಡ ಉಳಿದ ಪಂದ್ಯಗಳಲ್ಲಿ ಅಬ್ಬರಿಸಿದರೆ ಪ್ಲೇ ಆಫ್​ ತಲುಪುವುದು ಖಚಿತವಾಗಲಿದೆ.

ಪ್ಲೇಆಫ್ ತಲುಪುವುದು ಹೇಗೆ?

ಕಳೆದ ಋತುಗಳನ್ನು ಗಮನಿಸಿದರೆ, 16 ಅಂಕಗಳನ್ನು ಗಳಿಸಿದ ತಂಡಗಳು ಪ್ಲೇಆಫ್ ಪ್ರವೇಶಿಸಿವೆ. ಇದರರ್ಥ ಕೋಲ್ಕತ್ತ ಇನ್ನೂ 15 ಅಂಕಗಳನ್ನು ಗಳಿಸಬೇಕಾಗಿದೆ. ಆದಾಗ್ಯೂ, ಇದಕ್ಕಾಗಿ ಕೋಲ್ಕತ್ತ 8 ಪಂದ್ಯಗಳನ್ನು ಗೆಲ್ಲಬೇಕು. ಈ ಋತುವಿನಲ್ಲಿ ಕೋಲ್ಕತ್ತ ತಂಡವು ಇನ್ನೂ 9 ಪಂದ್ಯಗಳನ್ನು ಆಡಬೇಕಾಗಿದೆ. ಅವರು 8 ಪಂದ್ಯಗಳನ್ನು ಗೆದ್ದರೆ, ತಂಡವು 17 ಅಂಕಗಳನ್ನು ಹೊಂದಿರುತ್ತದೆ. ಇದು ನಡೆದರೆ, ಯಾವುದೇ ಅಡೆತಡೆ ಇಲ್ಲದೇ ಕೆಕೆಆರ್ ಪ್ಲೇಆಫ್‌ಗೆ ಪ್ರವೇಶಿಸುತ್ತದೆ.
ಆದರೆ, ಉಳಿದಿರುವ 9 ಪಂದ್ಯಗಳಲ್ಲಿ ಎರಡು ಪಂದಗಳಲ್ಲಿ ಸೋತರೂ ಕೆಕೆಆರ್​ ತಂಡ ಪ್ರಸಕ್ತ ಐಪಿಎಲ್​ ಟೂರ್ನಿಯಿಂದ ಹೊರಬೀಳಲಿದೆ. ಈ ರೀತಿ ಆಗಬಾರದು ಅಂದರೆ, ಮುಂದಿನ ಪ್ರತಿಯೊಂದು ಪಂದ್ಯಗಳನ್ನು ಮಾಡು ಇಲ್ಲವೇ ಮಡಿ ಎಂಬಂತೆ ಪರಿಗಣಿಸಿ, ಅದ್ಭುತ ಪ್ರದರ್ಶನ ನೀಡಬೇಕಾಗುತ್ತದೆ. ಹೀಗಾಗಿ, ಮುಂದಿನ ಪಂದ್ಯಗಳಲ್ಲಿ ಕೆಕೆಆರ್​ ಯಾವ ರೀತಿ ಪ್ರದರ್ಶನ ನೀಡುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್​).