ಕೊಹ್ಲಿ ಫಾರ್ಮ್​ ಬಗ್ಗೆ ಕೈಫ್​ ಮಾಡಿದ ಟ್ವಿಟ್​ ವೈರಲ್​ 
ಕ್ರಿಕೆಟ್

ಮೊದಲ ಪಂದ್ಯದಲ್ಲೇ ಕೊಹ್ಲಿ ಅರ್ಧಶತಕ: ವಿರಾಟ್​ನ ಆಟ ಇಲ್ಲಿಗೆ ಸಮಾಪ್ತಿ; ವೈರಲ್​ ಆಯ್ತು ಮೊಹಮ್ಮದ್​ ಕೈಫ್​ ಟ್ವಿಟ್​! Mohammad Kaif on Virat

ಪ್ರಮುಖ ಮುಖ್ಯಾಂಶಗಳು

  • ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್​ಸಿಬಿ ಭರ್ಜರಿ ಗೆಲುವು
  • ಮೊದಲ ಪಂದ್ಯದಲ್ಲಿ ಅಜೇಯ 69 ರನ್​ ಬಾರಿಸಿದ ವಿರಾಟ್​
  • ಕೊಹ್ಲಿ ಫಾರ್ಮ್​ ಬಗ್ಗೆ ಕೈಫ್​ ಮಾಡಿದ ಟ್ವಿಟ್​ ವೈರಲ್​
ಐಪಿಎಲ್: ನಿನ್ನೆ (ಮಾರ್ಚ್​ 28) ರಿಂದ ಆರಂಭವಾಗಿರುವ ಭಾರತದ ಕ್ರಿಕೆಟ್​ ಉತ್ಸವದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸನ್​ರೈಸರ್ಸ ಹೈದರಾಬಾದ್​ ತಂಡವನ್ನು ಸೋಲಿಸಿ ಟೂರ್ನಿಯ ಮೊದಲ ಪಂದ್ಯದಲ್ಲಿ ಯಶಸ್ಸನ್ನು ತನ್ನದಾಗಿಸಿಕೊಂಡಿದೆ. 

ಶುಭಾರಂಭ ಮಾಡಿದ ಆರ್​ಸಿಬಿ!

ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ ಆರಂಭಿಸಿದ ಎಸ್​ಆರ್​ಹೆಚ್​ ಇಪ್ಪತ್ತು ಓವರ್​ಗಳಲ್ಲಿ 201 ರನ್​ ಗಳನ್ನುಗಳಿಸಿತು.  ನಂತರ ಚೇಸಿಂಗ್​ ಆರಂಭಿಸಿದ ಆರ್​ಸಿಬಿ ಕೇವಲ 15.4 ಓವರ್​ಗಳಲ್ಲಿ 203 ರನ್​ಗಳನ್ನು ಬಾರಿಸುವ ಮೂಲಕ ಮೊದಲ ಪಂದ್ಯದಲ್ಲೇ ಯಶಸ್ಸನ್ನು ಕಂಡಿತು.
ಆರ್​ಸಿಬಿ ಪರವಾಗಿ ದೇವದತ್ ಪಡಿಕ್ಕಲ್​ 26 ಎಸೆತಗಳಲ್ಲಿ 61 ರನ್​ ಸಿಡಿಸಿದರೆ, ವಿರಾಟ್​ ಕೊಹ್ಲಿ 38 ಬಾಲ್​ಗಳಲ್ಲಿ ಅಜೇಯ 69 ರನ್​ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು.

ವೈರಲ್​ ಆದ ಮೊಹಮ್ಮದ್ ಕೈಫ್​ ಟ್ವಿಟ್​!

ಈ ಪಂದ್ಯದ ಬಳಿಕ ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ, ಮೊಹಮ್ಮದ್​ ಕೈಫ್ (Mohammad Kaif on Virat) ​ ಮಾಡಿರುವ ಟ್ವಿಟ್​ವೊಂದು ಈಗ ಸಖತ್​ ಚರ್ಚೆಗೆ ಗ್ರಾಸವಾಗಿದೆ.
ಸಾಮಾಜಿಕ ಜಾಲತಾಣ ವೇದಿಕೆಯಾದ ಟ್ವಿಟರ್​ (ಎಕ್ಸ್) ನಲ್ಲಿ ಕೈಫ್​, ನನಗೆ ಕೊಹ್ಲಿಯ ಆಟ ನೋಡಿ ಬಹಳ ಸಂತೋಷವಾಗಿದೆ. ಆಸ್ಟ್ರೆಲೀಯಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಸೊನ್ನೆಗೆ ಔಟಾದಾಗ, ಇನ್ನೂ ಕೊಹ್ಲಿಯ ಹಳೆಯ ಫಾರ್ಮ್​ ಇಲ್ಲ, ಮತ್ತೆ ಮೈದಾನಕ್ಕಿಳಿಯುವುದು ಸುಳ್ಳೆಂದು ಕೆಲವರು ಹೇಳಿದ್ದರು. ಆದರೆ ವಿರಾಟ್​ ಇಂದು ಅವರ ಬಾಯನ್ನು ಮುಚ್ಚಿಸಿದ್ದಾನೆ ಎಂದು ಮೊಹಮ್ಮದ್ ಕೈಫ್​ ಬರೆದಿದ್ದಾರೆ.
ಆದರೆ ಕೈಫ್​ ಅವರ ಈ ಟ್ವಿಟ್​ ಬಗ್ಗೆ ಕೆಲ ಅಭಿಮಾನಿಗಳು ಬೇಸರಗೊಂಡಿದ್ದು, ಕೊಹ್ಲಿ ಔಟಾಗಿದ್ದು ಟೆಸ್ಟ್​ನಲ್ಲಿ, ಏಕದಿನ ಮತ್ತು ಟಿ-ಟ್ವೆಂಟಿಯಲ್ಲಿ ಕೊಹ್ಲಿಯ ಫಾರ್ಮ್​ ಉತ್ತಮವಾಗಿಯೇ ಇದೆ ಎಂದು ಹೇಳಿದ್ದಾರೆ.

ವಿರಾಟ್​ ವಿನೂತನ ದಾಖಲೆ!

ನಿನ್ನೆ (ಮಾರ್ಚ್​ 28) ನಡೆದ ಪಂದ್ಯವನ್ನು ಗೆಲ್ಲುವ ಮೂಲಕ ವಿರಾಟ್​, ಐಪಿಎಲ್​ ಇತಿಹಾಸದಲ್ಲಿ ಚೇಸಿಂಗ್​ನಲ್ಲಿ 4,000 ರನ್​ ಬಾರಿಸಿದ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇದರ ಜೊತೆಗೆ ಟಿ-ಟ್ವೆಂಟಿ ಇತಿಹಾಸದಲ್ಲಿ ಸಹ ಚೇಸಿಂಗ್​ನಲ್ಲಿ ಅತ್ಯಧಿಕ ರನ್​ಗಳಿಸಿದ ಖ್ಯಾರಿಯನ್ನು ವಿರಾಟ್​ ದಾಖಲಿಸಿದ್ದಾರೆ,(ಏಜನ್ಸೀಸ್​).
​