ಕರ್ನಾಟಕದ ಕ್ರಿಕೆಟಿಗರಾದ ಕೆಎಲ್ ರಾಹುಲ್ (
KL Rahul
) ಮತ್ತು ದೇವದತ್ ಪಡಿಕ್ಕಲ್ (
Devdutt Padikkal
) ಅನುಬಂಧಕ್ಕೆ ಗಾಲೆ ಮೈದಾನ ಮಂಗಳವಾರ ಸಾಕ್ಷಿಯಾಯಿತು. 2ನೇ ಇನಿಂಗ್ಸ್ನ 11ನೇ ಓವರ್ನಲ್ಲಿ ರಾಹುಲ್ ವಿರುದ್ಧ ಬೌಲರ್ ಪ್ರಭಾತ್ ಜಯಸೂರ್ಯ ಎಲ್ಬಿ ಮನವಿ ಸಲ್ಲಿಸಿದಾಗ ಅಂಪೈರ್ ಅದನ್ನು ಪುರಸ್ಕರಿಸಿದರು. ಆಗ ಪೆವಿಲಿಯನ್ನತ್ತ ಹೆಜ್ಜೆ ಹಾಕುತ್ತಿದ್ದ ರಾಹುಲ್ರನ್ನು ತಡೆದು ಪಡಿಕ್ಕಲ್, ಡಿಆರ್ಎಸ್ಗೆ ಮೊರೆ ಹೋಗುವಂತೆ ಸೂಚಿಸಿದರು. ಇದರಂತೆ ರಾಹುಲ್ ಡಿಆರ್ಎಸ್ ಮನವಿ ಸಲ್ಲಿಸಿದಾಗ, ಬಾಲ್ ಟ್ರ್ಯಾಕರ್ನಲ್ಲಿ ಚೆಂಡು ವಿಕೆಟ್ನಿಂದ ಹೊರಹೋಗುತ್ತಿದ್ದುದು ಸ್ಪಷ್ಟವಾಗಿದ್ದರಿಂದ ತೃತೀಯ ಅಂಪೈರ್ "ನಾಟೌಟ್' ನೀಡಿದರು.
ಆಗ ರಾಹುಲ್, ಪಡಿಕ್ಕಲ್ರನ್ನು ಅಪ್ಪಿಕೊಂಡು ಧನ್ಯವಾದ ಹೇಳುವ ಮೂಲಕ ಸಂಭ್ರಮಿಸಿದರು. ಆದರೆ ಆಗ 25 ರನ್ ಗಳಿಸಿದ್ದ ರಾಹುಲ್ ಬಳಿಕ ಹೆಚ್ಚಿನ ಲಾಭ ಪಡೆಯದೆ, 3 ಓವರ್ಗಳ ಬಳಿಕ 35 ರನ್ಗಳಿಗೆ ಔಟಾದರು.