ಕನ್ನಡಿಗ ಕೆಎಲ್ ರಾಹುಲ್ ಭಾರತ ಟಿ20 ತಂಡಕ್ಕೆ ಮರಳಲಿ; ಮಾಜಿ ಕ್ರಿಕೆಟಿಗ ಆಗ್ರಹ!
ನವದೆಹಲಿ: ಭಾರತ ತಂಡ ಯುಕೆ ಪ್ರವಾಸದಲ್ಲಿ ಗೆಲುವು ಕಾಣದೆ ತತ್ತರಿಸಿರುವುದರಿಂದ ಕನ್ನಡಿಗ ಕೆಎಲ್ ರಾಹುಲ್ (kl rahul) ಟಿ20 ತಂಡಕ್ಕೆ ಮರಳಲು ಇದು ಸರಿಯಾದ ಸಮಯವಾಗಿದೆ ಎಂದು ಮಾಜಿ ಆರಂಭಿಕ ಎಸ್. ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
ಕೆಎಲ್ ರಾಹುಲ್ 2022ರ ನಂತರ ಭಾರತ ಪರ ಟಿ20 ಪಂದ್ಯ ಆಡಿಲ್ಲ. ಆದರೆ ಮುಂದಿನ ಟಿ20 ವಿಶ್ವಕಪ್ ಟೂರ್ನಿ ಆಸ್ಟ್ರೆಲಿಯಾ&ನ್ಯೂಜಿಲೆಂಡ್ನ ಸವಾಲಿನ ಪಿಚ್ನಲ್ಲಿ ನಡೆಯಲಿದೆ. ಹೀಗಾಗಿ ಭಾರತ ತಂಡ ವಿಶ್ವದರ್ಜೆಯ ವೇಗಿಗಳ ಎದುರು ಸಮರ್ಥವಾಗಿ ಆಡಬಲ್ಲ ಬ್ಯಾಟರ್ಗಳನ್ನು ಹೊಂದಬೇಕಾಗಿದೆ. ಕೆಎಲ್ ರಾಹುಲ್ ಈ ರೀತಿಯ ಬ್ಯಾಟರ್ ಆಗಿದ್ದಾರೆ. ಕಳೆದ ಐಪಿಎಲ್ನಲ್ಲಿ ಅವರು ಸ್ಟ್ರೆಕ್ರೇಟ್ ಟೀಕೆಗಳಿಗೆ ಉತ್ತರ ನೀಡಿದ್ದಾರೆ ಮತ್ತು 150 ಪ್ಲಸ್ ರನ್ ಬಾರಿಸಿದ ಮೊದಲ ಭಾರತೀಯರೆನಿಸಿದ್ದಾರೆ. ಆಸೀಸ್ ಪಿಚ್ನಲ್ಲಿ ಆರ್ಚರ್ರಂಥ ವೇಗಿಯನ್ನು ಎದುರಿಸಬಲ್ಲ ರಾಹುಲ್ರಂಥ ಬ್ಯಾಟರ್ ಭಾರತ ತಂಡಕ್ಕೆ ಬೇಕಾಗಿದ್ದಾರೆ ಎಂದು ರಮೇಶ್ ತಿಳಿಸಿದ್ದಾರೆ.
ರಾಹುಲ್ ಭಾರತ ಪರ 72 ಟಿ20 ಪಂದ್ಯ ಆಡಿದ್ದು, 2 ಶತಕ, 22 ಅರ್ಧಶತಕಗಳ ಸಹಿತ 2,265 ರನ್ ಬಾರಿಸಿದ್ದಾರೆ. 2022ರ ಟಿ20 ವಿಶ್ವಕಪ್ಗೆ ಉಪನಾಯಕರಾಗಿದ್ದ ಅವರು, ಸೆಮೀಸ್ನಲ್ಲಿ ಹೊರಬಿದ್ದ ಬಳಿಕ ಭಾರತ ಚುಟುಕು ಕ್ರಿಕೆಟ್ ತಂಡಕ್ಕೆ ಮರಳಿಲ್ಲ.