ದೇವದತ್ ಪಡಿಕ್ಕಲ್ ಸಲಹೆಯಂತೆ ಡಿಆರ್ಎಸ್ ಪಡೆದು ಜೀವದಾನ ಪಡೆದ ರಾಹುಲ್
- ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯ
- 11 ನೇ ಓವರ್ನಲ್ಲಿ ಎಲ್ಬಿಡಬ್ಲ್ಯೂಗೆ ಔಟ್ ಆಗಿದ್ದ ಕೆ.ಎಲ್. ರಾಹುಲ್
- ದೇವದತ್ ಪಡಿಕ್ಕಲ್ ಸಲಹೆಯಂತೆ ಡಿಆರ್ಎಸ್ ಪಡೆದು ಜೀವದಾನ ಪಡೆದ ರಾಹುಲ್
- ನಾಟ್ಔಟ್ ಆಗುತ್ತಿದ್ದಂತೆ ಪಡಿಕ್ಕಲ್ನನ್ನು ಬಿಗಿದಪ್ಪಿ ಮುತ್ತಿಡಲು ಮುಂದಾದ ಕನ್ನಡಿಗ
ಕೊಲಂಬೊ: ಟಿ-20 ಹಾಗೂ ಏಕದಿನ ಪಂದ್ಯಗಳ ನಂತರ ಟೀಂ ಇಂಡಿಯಾ ಈಗ ಶ್ವೇತ ವರ್ಣದ ಜೆರ್ಸಿ ಧರಿಸಿ, ಟೆಸ್ಟ್ ಕ್ರಿಕೆಟ್ಗೆ ಮರಳಿದೆ. ಸದ್ಯ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯವೊಂದರಲ್ಲಿ ಅವಿಸ್ಮರಣೀಯ ಘಟನೆಯೊಂದು ಸೆರೆಯಾಗಿದೆ.
ಪಂದ್ಯದ ನಾಲ್ಕನೇ ದಿನ ಬ್ಯಾಟಿಂಗ್ ಮಾಡುತ್ತಿದ್ದ ಭಾರತ ತಂಡದ ಕೆ.ಎಲ್. ರಾಹುಲ್ ಹಾಗೂ ದೇವದತ್ ಪಡಿಕ್ಕಲ್ (KL Rahul and Devdutt Padikkal) ನಡುವೆ ನಡೆದಿರುವ ಈ ಘಟನೆ ಈಗ ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ಡಿಆರ್ಎಸ್ ತೆಗೆದುಕೊಳ್ಳಲು ಒತ್ತಾಯ
ಪಂದ್ಯದ 11 ನೇ ಓವರ್ನಲ್ಲಿ, ಜಯಸೂರ್ಯ ಎಸೆದ ಚೆಂಡು ರಾಹುಲ್ ಅವರ ಬ್ಯಾಟಿನ ಬದಲು ಪ್ಯಾಡೆಗೆ ತಗುಲಿತು, ತಕ್ಷಣ ಲಂಕಾ ಆಟಗಾರರು ಅಪೀಲ್ ಮಾಡಿದ ಕೂಡಲೇ ಅಂಪೈಯರ್ ಔಟ್ ಎಂದು ತಿಳಿಸಿದರು.
ರಾಹುಲ್ ಕೂಡ ಈ ನಿರ್ಣಯವನ್ನು ಒಪ್ಪಿಕೊಂಡು ಪೆವಿಲಿಯನತ್ತ ಹೆಜ್ಜೆ ಹಾಕಲು ಮುಂದಾದಾಗ, ನಾನ್ ಸ್ಟ್ರೈಕರ್ ಎಂಡ್ನಲ್ಲಿದ್ದ ದೇವದತ್ ಪಡಿಕ್ಕಲ್, ರಾಹುಲ್‌ಗೆ ಡಿಆರ್ಎಸ್ ತೆಗೆದಯಕೊಳ್ಳಲು ಒತ್ತಾಯಿಸಿದ್ದಾರೆ. ಮೊದಲು ಇದಕ್ಕೆ ಸಮ್ಮತಿ ನೀಡದ ರಾಹುಲ್ ಕೊನೆಗೆ, ಡಿಆರ್ಎಸ್ ತೆಗೆದುಕೊಂಡಿದ್ದಾರೆ.
ಪಡಿಕ್ಕಲ್ಗೆ ರಾಹುಲ್ ಚುಂಬನ!
ಡಿಆರ್ಎಸ್ ತೆಗೆದುಕೊಂಡ ಬಳಿಕ ಮೂರನೇ ಅಂಪೈಯರ್ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ಚೆಂಡು ಔಟ್ ಸೈಡ್ದ ಆಫ್ ಸ್ಟಂಪ್ ಬಿದ್ದಿರುವುದು ತಿಳಿದಿದೆ. ಹೀಗಾಗಿ ಫೀಲ್ಡ್ ಅಂಪೈರ್ ಅವರ ನಿರ್ಧಾರವನ್ನು ಬದಲಿಸಿ ನಾಟ್ಔಟ್ ಎಂದು ಘೋಷಿಸಿದ್ದಾರೆ. ಇದನ್ನು ನೋಡಿ ಭಾವುಕರಾದ ಕೆ.ಎಲ್. ರಾಹುಲ್ ತಮ್ಮ ವಿಕೆಟ್ ಅನ್ನು ಉಳಿಸಿದ ದೇವದತ್ ಪಡಿಕ್ಕಲ್ರನ್ನು ಗಟ್ಟಿಯಾಗಿ ಬಿಗಿದಪ್ಪಿಮುತ್ತು ನೀಡಲು ಮುಂದಾಗಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚನಲಕ್ಕೆ ಸಾಕ್ಷಿಯಾಗಿದೆ, (ಏಜನ್ಸೀಸ್).