ವಾರೆಗಣ್ಣ ನೋಟ ಬೀರಿದ ವಿಂಡೀಸ್ ದೈತ್ಯ: ಮಹಿಕಾ ಮೇಲೆ ಕಣ್ಣಾಕಿದ ಪೊಲಾರ್ಡ್, ಹಾರ್ದಿಕ್ ಏನ್ ಮಾಡಿದ್ರು ನೋಡಿ! Hardik Pandya
- ಭಾನುವಾರ (ಮಾರ್ಚ್ 22) ಮುಂಬೈ ಇಂಡಿಯನ್ಸ್ ತಂಡ ತಮ್ಮ ಅಭಿಮಾನಿಗಳಿಗಾಗಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿತ್ತು
- ಮುಂಬೈ ತಂಡದ ಎಲ್ಲ ಆಟಗಾರರು ತಮ್ಮ ಹೆಂಡತಿಯರು ಮತ್ತು ಗೆಳತಿಯರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
- ಈ ವೇಳೆ ವಿಂಡೀಸ್ ದಿಗ್ಗಜ ಕೀರನ್ ಪೊಲಾರ್ಡ್ ಹಾರ್ದಿಕ್ ಪಾಂಡ್ಯ ಅವರ ಗೆಳತಿ ಮಹಿಕಾ ಶರ್ಮಾರನ್ನು ವಾರೆಗಣ್ಣಿಂದ ನೋಡಿದರು
Hardik Pandya : ಕ್ರೀಡಾಭಿಮಾನಿಗಳು ಎದುರು ನೋಡುತ್ತಿರುವ ಮಹಾ ಕ್ರಿಕೆಟ್ ಉತ್ಸವ ಇಂಡಿಯನ್ ಪ್ರೀಮಿಯರ್ ಲೀಗ್ ( IPL ) ಇನ್ನೂ ಐದೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಮಾರ್ಚ್ 28 ರಿಂದ ಶುರುವಾಗಲಿರುವ 19ನೇ ಆವೃತ್ತಿಯ ಈ ಮೆಗಾ ಟೂರ್ನಮೆಂಟ್ ಮೇ 31ಕ್ಕೆ ಮುಗಿಯಲಿದೆ. ಈಗಾಗಲೇ ಎಲ್ಲ 10 ತಂಡಗಳು ಐಪಿಎಲ್ ಅಖಾಡಕ್ಕೆ ಇಳಿಯಲು ಭರ್ಜರಿ ತಯಾರಿ ನಡೆಸುತ್ತಿವೆ. ಇದರ ನಡುವೆ ಆಯಾ ಫ್ರಾಂಚೈಸಿಗಳು ಅಭಿಮಾನಿಗಳಿಗಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.
ಭಾನುವಾರ (ಮಾರ್ಚ್ 22) ಮುಂಬೈ ಇಂಡಿಯನ್ಸ್ ತಂಡ ತಮ್ಮ ಅಭಿಮಾನಿಗಳಿಗಾಗಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಸಂದರ್ಭದಲ್ಲಿ, ಮುಂಬೈ ತಂಡದ ಎಲ್ಲ ಆಟಗಾರರು ತಮ್ಮ ಹೆಂಡತಿಯರು ಮತ್ತು ಗೆಳತಿಯರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಆಟಗಾರ ಕೀರನ್ ಪೊಲಾರ್ಡ್, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ಗೆಳತಿ ಮಹಿಕಾ ಶರ್ಮಾ ಅವರನ್ನು ನೋಡಿದ ರೀತಿ ಚರ್ಚೆಗೆ ಗ್ರಾಸವಾಗಿದೆ. ಪೊಲಾರ್ಡ್ ಅವರು ಮಹಿಕಾ ಅವರನ್ನು ವಾರೆಗಣ್ಣಿನಲ್ಲಿ ಆಸೆಯಿಂದ ನೋಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದ್ದು, ಕ್ರೀಡಾಭಿಮಾನಿಗಳು ಬಗೆಬಗೆಯ ಕಾಮೆಂಟ್ಗಳನ್ನು ಹರಿಬಿಡುತ್ತಿದ್ದಾರೆ.
ಐಪಿಎಲ್-2026ರ ಟೂರ್ನಮೆಂಟ್ ಆರಂಭವಾಗುವ ಮೊದಲು, ಮುಂಬೈ ಇಂಡಿಯನ್ಸ್ ತಂಡ ತಮ್ಮ ಅಭಿಮಾನಿಗಳಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಈ ಸಂದರ್ಭದಲ್ಲಿ, ಮುಂಬೈ ಇಂಡಿಯನ್ಸ್ನ ಎಲ್ಲಾ ಆಟಗಾರರು ತಮ್ಮ ಕುಟುಂಬ ಸದಸ್ಯರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಂಬೈ ಇಂಡಿಯನ್ಸ್ ಆಟಗಾರರು ಓಪನ್ ಟಾಪ್ ಬಸ್ನಲ್ಲಿ ನೃತ್ಯ ಮಾಡಿ ಸಂಭ್ರಮಿಸಿದರು. ಅಭಿಮಾನಿಗಳೊಂದಿಗೆ ಸೆಲ್ಫಿ ಕೂಡ ತೆಗೆದುಕೊಂಡರು. ಈ ಕಾರ್ಯಕ್ರಮದಲ್ಲಿ ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆ ಹೆಜ್ಜೆ ಹಾಕವ ಮೂಲಕ ಹಾರ್ದಿಕ್ ಪಾಂಡ್ಯ ಗಮನ ಸೆಳೆದರು. ಇದೇ ಸಮಯದಲ್ಲಿ ಮಹಿಕಾ ಶರ್ಮಾರನ್ನು ಅವರ ಪಕ್ಕದಲ್ಲೇ ಇದ್ದ ಕೀರನ್ ಪೊಲಾರ್ಡ್ ವಾರೆಗಣ್ಣಿನಿಂದ ನೋಡಿದ್ದಾರೆ.
ಮಹಿಕಾ ಶರ್ಮಾ ನೃತ್ಯ ಮಾಡುತ್ತಿದ್ದಾಗ, ಕೀರನ್ ಪೊಲಾರ್ಡ್ ನಾಲ್ಕೈದು ಬಾರಿ ಮಹಿಕಾರನ್ನೇ ದಿಟ್ಟಿಸಿ ನೋಡಿದ್ದಾರೆ. ಇದನ್ನು ನೋಡಿದ ಕ್ರೀಡಾಭಿಮಾನಿಗಳು ಪೊಲಾರ್ಡ್ ತುಂಬಾ ರಸಿಕ ಎಂದು ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಅಲ್ಲದೆ, ಮಹಿಕಾರನ್ನು ತಮ್ಮ ಕಾಮದ ಕಣ್ಣುಗಳಿಂದ ಪೊಲಾರ್ಡ್ ನೋಡಿದ್ದಾರೆ ಎಂದು ಕೆಲವರು ಹೇಳಿದರೆ, ಮಹಿಕಾ ಶರ್ಮಾರನ್ನು ಕಚ್ಚುವಂತೆ ನೋಡುತ್ತಿದ್ದಾರೆ ಎಂದು ಇನ್ನು ಕೆಲವರು ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಐಪಿಎಲ್ ಪ್ರಾರಂಭವಾಗುವ ಮೊದಲೇ ಈ ಘಟನೆ ಚರ್ಚೆಗೆ ಗ್ರಾಸವಾಗಿದೆ.
ಅಂದಹಾಗೆ, 19ನೇ ಆವೃತ್ತಿಯು ಐಪಿಎಲ್, ಮಾರ್ಚ್ 28ರಂದು ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರು ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಸಂಜೆ 7.30ಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ, (ಏಜೆನ್ಸೀಸ್).