ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ ಎಡವಿದ ಭಾರತದ ಮಹಿಳೆಯರು 
ಕ್ರಿಕೆಟ್

ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ ಎಡವಿದ ಭಾರತದ ಮಹಿಳೆಯರು

ಬ್ರಿಸ್ಟಲ್​: ಫ್ರೇಯಾ ಕೆಂಪ್​ (39* ರನ್​, 13 ಎಸೆತ, 4 ಬೌಂಡರಿ, 2 ಸಿಕ್ಸರ್​ ಹಾಗೂ 15ಕ್ಕೆ 2 ವಿಕೆಟ್​) ಆಲ್ರೌಂಡ್​ ಆಟದ ಎದುರು ಮಂಕಾದ ಭಾರತ ತಂಡ ಮಹಿಳೆಯರ ಟಿ20 ಸರಣಿಯ (Women''s T20 International) ಎರಡನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್​ ಎದುರು 26 ರನ್​ಗಳ ಸೋಲು ಕಂಡಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ.

ಶನಿವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಬ್ಯಾಟಿಂಗ್​ ನಡೆಸಿದ ಇಂಗ್ಲೆಂಡ್​, ಶ್ರೀ ಚರಣಿ (25ಕ್ಕೆ 3) ಸಹಿತ ಬೌಲರ್​ಗಳ ಬಿಗಿ ದಾಳಿಯ ನಡುವೆಯೂ ಫ್ರೇಯಾ ಕೆಂಪ್​ ಆಸರೆಯಲ್ಲಿ 5 ವಿಕೆಟ್​ಗೆ 168 ರನ್​ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ಭಾರತ ತಂಡ 9 ವಿಕೆಟ್​ಗೆ 142 ರನ್​ಗಳಿಸಲಷ್ಟೇ ಶಕ್ತಗೊಂಡಿತು.

ಇಂಗ್ಲೆಂಡ್​: 5 ವಿಕೆಟ್​ಗೆ 168 (ಸೋಫಿಯಾ 10, ಡ್ಯಾನಿ ವ್ಯಾಟ್​ 29, ಆಮಿ ಜೋನ್ಸ್​ 28, ಅಲಿಸ್​ ಕಾಪ್ಸಿ 28, ಹೀದರ್​ ನೈಟ್​ 18, ಫ್ರೇಯಾ ಕೆಂಪ್​ 39*, ಗಿಬ್ಸನ್​ 11*, ಶ್ರೀ ಚರಣಿ 25ಕ್ಕೆ 3, ಶ್ರೇಯಾಂಕಾ 29ಕ್ಕೆ 1, ನಂದಿನಿ 36ಕ್ಕೆ 1). ಭಾರತ: 9 ವಿಕೆಟ್​ಗೆ 142 (ಸ್ಮೃತಿ 32, ಶೆಫಾಲಿ 22, ಯಸ್ತಿಕಾ 33, ಹರ್ಮಾನ್​ಪ್ರೀತ್​ 28, ಜೆಮೀಮಾ 1, ರಿಚಾ ಘೋಷ್​ 8, ದೀಪ್ತಿ 2, ಫ್ರೇಯಾ ಕೆಂಪ್​ 15ಕ್ಕೆ2, ಚಾರ್ಲಿ ಡೀನ್​ 20ಕ್ಕೆ 2).