ಶ್ರೀಲಂಕಾದ ಮಾಜಿ ವಿದೇಶಾಂಗ ಸಚಿವ ಅಲಿ ಸಬ್ರಿ
- ಇಂದು ಭಾರತ - ಪಾಕಿಸ್ತಾನ ಹೈವೋಲ್ಟೆಜ್ ಪಂದ್ಯ
- ಕೊಲೊಂಬೊನಲ್ಲಿ ನಡೆಯಲಿರುವ ಈ ಪಂದ್ಯ
- ಕೆಟ್ ಜಗತ್ತಿನಲ್ಲಿ ಭಾರತ-ಪಾಕಿಸ್ತಾನ ಪಂದ್ಯಕ್ಕಿಂತ ದೊಡ್ಡದೇನೂ ಇಲ್ಲ: ಅಲಿ ಸಬ್ರಿ
ಶ್ರೀಲಂಕಾ: ಕ್ರಿಕೆಟ್ ಜಗತ್ತಿನಲ್ಲಿ ಭಾರತ-ಪಾಕಿಸ್ತಾನ (IND v/s PAK) ಪಂದ್ಯಕ್ಕಿಂತ ದೊಡ್ಡದೇನೂ ಇಲ್ಲ, ಆದ್ದರಿಂದ ಕ್ರಿಕೆಟ್‌ನಿಂದ ರಾಜಕೀಯವನ್ನು ದೂರವಿಡಬೇಕು ಎಂದು ಶ್ರೀಲಂಕಾದ ಮಾಜಿ ವಿದೇಶಾಂಗ ಸಚಿವ ಅಲಿ ಸಬ್ರಿ ಭಾನುವಾರ ಹೇಳಿದ್ದಾರೆ.
ಖಾಸಗಿ ವಾಹಿಸಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನನಾಡಿದ ಸಬ್ರಿ, ಶ್ರೀಲಂಕಾ ಯಾವುದೇ ಸಮಯದಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ಆಯೋಜಿಸಲು ಸಿದ್ಧವಾಗಿದ್ದು, ಇದು ಲಂಕಾದ ಪ್ರವಾಸೋದ್ಯಮವನ್ನು ಹೆಚ್ಚಿಸಲು ದೊರೆತ ಉತ್ತಮ ಅವಕಾಶವಾಗಿದೆ ಎಂದು ಅವರು ಹೇಳಿದರು.
ಪಂದ್ಯವನ್ನು ಬಹಿಷ್ಕರಿಸುವ ಸುದ್ದಿಬಂದಾಗ ನಮಗೆ ವ್ಯಾಪಕ ನಿರಾಶೆ ಉಂಟಾಗಿತ್ತು, ಆದರೆ ಪಂದ್ಯ ನಡೆಯುವಂತೆ ಮಾಡಿದ್ದಕ್ಕಾಗಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ಅವರು ಹೇಳಿದರು.
ಪಂದ್ಯ ರದ್ದತಿ ಶ್ರೀಲಂಕಾದ ಆರ್ಥಿಕತೆಗೆ, ವಿಶೇಷವಾಗಿ ಪ್ರವಾಸೋದ್ಯಮ, ಹೋಟೆಲ್ ಮತ್ತು ವಿಮಾನಯಾನ ವಲಯಗಳಿಗೆ ಗಂಭೀರ ಹೊಡೆತ ನೀಡುತ್ತಿತ್ತು ಎಂದು ಅವರು ಹೇಳಿದರು. ಈ ಪಂದ್ಯವೇನಾದರೂ ನಡೆಯದೇ ಹೋಗಿದ್ದರೆ ನಮಗೆ ಸುಮಾರು, 10 ರಿಂದ 20 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟವಾಗುತ್ತಿತ್ತು. ಅನೇಕ ಹೋಟೆಲ್‌ಗಳು ಮತ್ತು ವ್ಯವಹಾರಗಳು ನಷ್ಟ ಅನುಭವಿಸುತ್ತಿದ್ದವು ಎಂದು ಸಬ್ರಿ ಹೇಳಿದರು.
ಕ್ರಿಕೆಟ್ ಮತ್ತು ಕ್ರೀಡೆಗಳಿಂದ ರಾಜಕೀಯವನ್ನು ದೂರವಿಡಬೇಕೆಂದು ನಾನು ಬಯಸುತ್ತೇನೆ, ಭಾಗಿಯಾಗಿರುವ ಪ್ರತಿಯೊಬ್ಬರೂ ಪ್ರಬುದ್ಧತೆಯನ್ನು ತೋರಿಸಬೇಕು. ಕ್ರಿಕೆಟ್ ರಾಷ್ಟ್ರಗಳನ್ನು ಒಟ್ಟುಗೂಡಿಸಲು ಸೇತುವೆಯಾಗಿರಬೇಕು ಎಂದು ಅವರು ಹೇಳಿದ್ದಾರೆ,(ಏಜನ್ಸೀಸ್).