ಕಾವ್ಯ ಯಾವುದೇ ಕಾರಣಕ್ಕೂ ನೀವು... ವಿವಾದದ ಬೆನ್ನಲ್ಲೇ ಸ್ಫೋಟಕ ಹೇಳಿಕೆ ನೀಡಿದ ಅಫ್ರಿದಿ! Shahid Afridi
- ಲಂಡನ್‌ನಲ್ಲಿ ನಡೆದ ಹಂಡ್ರೆಡ್ ಲೀಗ್ ಹರಾಜಿನಲ್ಲಿ ಸನ್‌ರೈಸರ್ಸ್ ಲೀಡ್ಸ್ ತಂಡದ ಪಾಲಾದ ಪಾಕ್ ಆಟಗಾರ
- ಪಾಕಿಸ್ತಾನಿ ಆಟಗಾರ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿ ವಿವಾದಕ್ಕೆ ಸಿಲುಕಿದ ಕಾವ್ಯಾ ಮಾರನ್
- ಪಾಕ್ ಆಟಗಾರನನ್ನು ಖರೀದಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಾವ್ಯ ವಿರುದ್ಧ ಭಾರತೀಯರಿಂದ ವಾಗ್ದಾಳಿ
Shahid Afridi : ಲಂಡನ್‌ನಲ್ಲಿ ನಡೆದ ಹಂಡ್ರೆಡ್ ಲೀಗ್ ಹರಾಜಿನಲ್ಲಿ ಸನ್‌ರೈಸರ್ಸ್ ಲೀಡ್ಸ್ ತಂಡದ ಒಡತಿ ಕಾವ್ಯ ಮಾರನ್ ಪಾಕಿಸ್ತಾನಿ ಆಟಗಾರ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿ ವಿವಾದಕ್ಕೆ ಸಿಲುಕಿದ್ದಾರೆ. ಪಾಕ್ ಆಟಗಾರನನ್ನು ಖರೀದಿ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಾವ್ಯ ವಿರುದ್ಧ ಭಾರತೀಯರು ವಾಗ್ದಾಳಿ ನಡೆಸಲಾಗುತ್ತಿದೆ. ಅವರನ್ನು ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ, ಕಾವ್ಯ ಅವರಿಗೆ ಪಾಕಿಸ್ತಾನದಿಂದ ಉತ್ತಮ ಬೆಂಬಲ ಸಿಗುತ್ತಿದೆ. ಶೋಯೆಬ್ ಅಖ್ತರ್ ಈಗಾಗಲೇ ಅವರನ್ನು ಬೆಂಬಲಿಸಿದ್ದಾರೆ. ಇದೀಗ, ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೂಡ ಬೆಂಬಲಕ್ಕೆ ನಿಂತಿದ್ದಾರೆ.
ಕಾವ್ಯ ಮೇಡಂ, ನೀವು ಎದೆಗುಂದಬಾರದು. 26 ಕೋಟಿ ಪಾಕಿಸ್ತಾನಿಗಳು ನಿಮ್ಮ ಹಿಂದೆ ಇದ್ದಾರೆ ಎಂದು ಅಫ್ರಿದಿ ನೀಡಿದ್ದಾರೆ ಎನ್ನಲಾದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಏನಿದು ವಿವಾದ?
ಪಾಕಿಸ್ತಾನಿ ಆಟಗಾರ ಅಬ್ರಾರ್ ಅಹ್ಮದ್ ಅವರನ್ನು ಸನ್‌ರೈಸರ್ಸ್ ಲೀಡ್ಸ್ ತಂಡದ ಒಡತಿ ಕಾವ್ಯಾ ಮಾರನ್ 2.34 ಕೋಟಿಗೆ ಖರೀದಿಸಿದ್ದಾರೆ. ಹೀಗಾಗಿ, ಕಾವ್ಯ ವಿರುದ್ಧ ಸಿಕ್ಕಾಪಟ್ಟೆ ಟ್ರೋಲಿಂಗ್ ನಡೆಯುತ್ತಿದೆ. ಐಪಿಎಲ್ನಲ್ಲಿರುವ ಅವರ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಐದು ವರ್ಷಗಳ ಕಾಲ ಬ್ಯಾನ್ ಮಾಡುವಂತೆ ಕೆಲವರು ಆಗ್ರಹಿಸುತ್ತಿದ್ದಾರೆ. ಕಾವ್ಯ ಮಾಡಿದ್ದು ದೇಶದ್ರೋಹದ ಕೆಲಸ ಎಂದು ಜರಿಯುತ್ತಿದ್ದಾರೆ. ಹೀಗಿರುವಾಗ ಪಾಕಿಸ್ತಾನದ ಮಂದಿ ಕಾವ್ಯರನ್ನು ಬೆಂಬಲಿಸುತ್ತಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಕಾವ್ಯ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ. ಪಾಕಿಸ್ತಾನಿ ಆಟಗಾರರನ್ನು ಖರೀದಿಸಿದ್ದಕ್ಕಾಗಿ ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಅಫ್ರಿದಿ ಹೇಳಿದ್ದೇನು?
ಕ್ರಿಕೆಟ್ ಯಾವಾಗಲೂ ರಾಜಕೀಯದಿಂದ ಮುಕ್ತವಾಗಿರಬೇಕು. ಈ ನಿಟ್ಟಿನಲ್ಲಿ ಕಾವ್ಯ ಅವರು ಎಲ್ಲರಿಗಿಂತ ಮೊದಲು ಯೋಚಿಸಿ ಪಾಕಿಸ್ತಾನಿ ಆಟಗಾರನನ್ನು ಖರೀದಿಸಿದರು. ಈ ಸಂಪ್ರದಾಯ ಇದೇ ರೀತಿ ಮುಂದುವರಿಯಬೇಕೆಂದು ನಾನು ಬಯಸುತ್ತೇನೆ. ಈ ವಿಷಯದಲ್ಲಿ ಕಾವ್ಯ ಮಾರನ್ ಅವರನ್ನು ಹಿಂದೆ ಬಿಡಬಾರದು. ಅವರ ಹಿಂದೆ 26 ಕೋಟಿ ಪಾಕಿಸ್ತಾನಿ ನಾಗರಿಕರಿದ್ದಾರೆ. ಯಾವುದೇ ಭಯವಿಲ್ಲದೆ ಅವರು ತಮ್ಮ ನಿರ್ಧಾರದಿಂದ ಮುಂದುವರಿಯಬೇಕೆಂದು ಶಾಹಿದ್ ಅಫ್ರಿದಿ ವಿನಂತಿಸಿದರು.
ಅಂದಹಾಗೆ, ಇದಕ್ಕೂ ಮೊದಲು, ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡ ಇದೇ ಮಾತನ್ನು ಹೇಳಿದರು. ಕಾವ್ಯ ಅವರು ತುಂಬಾ ಧೈರ್ಯಶಾಲಿ. ಭಾರತದಲ್ಲಿ ಯಾರೂ ಮಾಡದ ಕೆಲಸವನ್ನು ಅವರು ಮಾಡಿದ್ದಾರೆ ಎಂದು ಶೋಯೆಬ್ ಅಖ್ತರ್ ಹೊಗಳಿದರು. ಪಾಕಿಸ್ತಾನಿ ಆಟಗಾರರನ್ನು ಐಪಿಎಲ್‌ನಲ್ಲಿ ಆಡಿಸಬೇಕು ಎಂದು ತನ್ವೀರ್ ಅಹ್ಮದ್ ಕೂಡ ಒತ್ತಾಯಿಸಿದರು, (ಏಜೆನ್ಸೀಸ್).