ಬೆಂಗಳೂರು: ಹೈಪರ್ ಸ್ಪೋರ್ಟ್ಸ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಮುಂದಿನ ತಿಂಗಳು ಆಯೋಜಿಸಲಾಗುತ್ತಿರುವ ಕರ್ನಾಟಕ ಮೀಡಿಯಾ ಚಾಂಪಿಯನ್ಸ್ ಲೀಗ್ ಪಂದ್ಯಾವಳಿಯ ಟ್ರೋಫಿ ಹಾಗೂ ಲೋಗೋ ಅನಾವರಣ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಗರ್ಭಕೋಶ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಅದನ್ನು ತಡೆಗಟ್ಟುವುದರ ಬಗ್ಗೆ ಸಮಾಜಮುಖಿ ಸಂದೇಶ ಸಾರುವ ನಿಟ್ಟಿನಲ್ಲಿ ಕರ್ನಾಟಕ ಮೀಡಿಯಾ ಚಾಂಪಿಯನ್ಸ್ ಲೀಗ್ ಆಯೋಜನೆ ಮಾಡಲಾಗುತ್ತಿದೆ. ಈ ಪಂದ್ಯಾವಳಿ 15 ದಿನಗಳ ಕಾಲ ನಡೆಯಲಿದ್ದು, ಕೃತಕ ಟರ್‌ನಲ್ಲಿ ಹಗಲು-ರಾತ್ರಿ ಪಂದ್ಯಗಳೂ ಇರಲಿವೆ ಹಾಗೂ ವಿಶ್ವದರ್ಜೆಯ ಕ್ರಿಕೆಟ್ ನೋಡಲು ಸಿಗಲಿದೆ.
ಟೂರ್ನಿ ಮಧ್ಯೆದಲ್ಲಿ ಪ್ರಶಸ್ತಿ ಮೊತ್ತ ಏರಿಕೆಯಾಗುವ ಸಾಧ್ಯತೆಯಿದ್ದು, ಅದೊಂದೇ ಟೂರ್ನಿಯಲ್ಲಾಗುವ ಪ್ರಮುಖ ಬದಲಾವಣೆ ಆಗಿರುತ್ತದೆ. ವಿಲ್ಸನ್ ಹಾಗೂ ವಿಕ್ಕಿ ಚೆಂಡಿನ 85 ಗ್ರಾಂನ ತಮ್ಮದೇ ಬ್ರ್ಯಾಂಡ್‌ನ ಚೆಂಡಿನಲ್ಲಿ ಆಡಲಾಗುತ್ತದೆ ಎಂದು ಹೈಪರ್ ಸ್ಪೋರ್ಟ್ಸ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ಮುಖ್ಯಸ್ಥ ಹಾಗೂ ಟೂರ್ನಿ ಆಯೋಜಕರಾದ ಕಿರಣ್ ಶೆಟ್ಟಿ ಘೋಷಿಸಿದ್ದಾರೆ.
ಪಂದ್ಯಾವಳಿಯಲ್ಲಿ 24 ತಂಡಗಳು ಇರಲಿದ್ದು, ಪ್ರತಿ ಗುಂಪಿನಲ್ಲಿ 6 ತಂಡಗಳಂತೆ ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ವರ್ಣರಂಜಿತ ಕಾರ್ಯಕ್ರಮದಲ್ಲಿ ಕರ್ನಾಟಕ ಮೀಡಿಯಾ ಚಾಂಪಿಯನ್ಸ್ ಲೀಗ್ ಪಂದ್ಯಾವಳಿಯ ಟ್ರೋಫಿ, ಲೋಗೋ ಅನಾವರಣ ಮಾಡಲಾಗಿದೆ. ಇದಲ್ಲದೆ ಉಗ್ರ ತಾಂಡವ ಸಿನಿಮಾ ಟ್ರೈಲರ್ ಬಿಡುಗಡೆಗೊಳಿಸಲಾಯಿತು.