ಮಹಿಳಾ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಫೈನಲ್ಗೇರಿದ ಕರ್ನಾಟಕದ ಕಿರಿಯರ ತಂಡ
ಬೆಂಗಳೂರು: ವಿಕೆಟ್ ಕೀಪರ್-ಬ್ಯಾಟರ್ ಶ್ರೇಯಾ ಎಸ್. ಚವಣ್ (58 ರನ್, 48 ಎಸೆತ, 10 ಬೌಂಡರಿ) ಅರ್ಧಶತಕದಾಟ ಮತ್ತು ಸಂಟಿತ ಬೌಲಿಂಗ್, ಬಿಗಿ ಫೀಲ್ಡಿಂಗ್ ನಿರ್ವಹಣೆಯ ಬಲದಿಂದ ಕರ್ನಾಟಕ ತಂಡ 19 ವಯೋಮಿತಿಯ ರಾಷ್ಟ್ರೀಯ ಮಹಿಳಾ ಟಿ20 (womens t20 cricket) ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿದೆ.
ಕೋಲ್ಕತದ ಆದಿತ್ಯ ಅಕಾಡೆಮಿ ಗ್ರೌಂಡ್ನಲ್ಲಿ ಸೋಮವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಬರೋಡ ವಿರುದ್ಧ 48 ರನ್ಗಳಿಂದ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಕರ್ನಾಟಕ 6 ವಿಕೆಟ್ಗೆ 117 ರನ್ ಗಳಿಸಿತು. ಪ್ರತಿಯಾಗಿ ದೀಕ್ಷಾ ಜೆ (9ಕ್ಕೆ 2) ಮತ್ತು ನಾಯಕಿ ವಂದಿತಾ ಕೆ. ರಾವ್ (21ಕ್ಕೆ 2) ಬಿಗಿ ದಾಳಿ ಮತ್ತು 3 ರನೌಟ್ನಿಂದ ಲಯ ತಪ್ಪಿದ ಬರೋಡ 19.2 ಓವರ್ಗಳಲ್ಲಿ 69 ರನ್ಗಳಿಗೆ ಸರ್ವಪತನ ಕಂಡಿತು. ಕೋಲ್ಕತದಲ್ಲಿ ಬುಧವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಆಂಧ್ರ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ. ಆಂಧ್ರ 2ನೇ ಸೆಮಿಫೈನಲ್ನಲ್ಲಿ ಬಂಗಾಳ ವಿರುದ್ಧ 5 ವಿಕೆಟ್ಗಳಿಂದ ಜಯ ಸಾಧಿಸಿತು.
ಕರ್ನಾಟಕ: 6 ವಿಕೆಟ್ಗೆ 117 (ರಚಿತಾ 5, ಶ್ರೇಯಾ 58, ಕಾಶ್ವಿ 10, ಕಾರ್ಣಿಕಾ 27*, ವಂದಿತಾ 6*, ರಿಧಿ 29ಕ್ಕೆ 2), ಬರೋಡ: 19.2 ಓವರ್ಗಳಲ್ಲಿ 69 (ವಾಣಿ 10, ವಿಧಿ 18, ರಿಧಿ 10*, ದೀಕ್ಷಾ 9ಕ್ಕೆ 2, ವಂದಿತಾ 21ಕ್ಕೆ 2, ಕಾಶ್ವಿ 9ಕ್ಕೆ 1, ಶ್ರೀನಿಧಿ 8ಕ್ಕೆ 1).