ಕರ್ನಾಟಕ ಒಲಿಂಪಿಕ್ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಗೋವಿಂದರಾಜು, ವಾರ್ತಾ ಇಲಾಖೆ ಹಾಗೂ ಯುವ ಸಬಲೀಕರಣ-ಕ್ರೀಡಾ ಇಲಾಖೆ ಆಯುಕ್ತ ಎಂ.ಎನ್. ಅನುಚೇತ್, ಕೆಒಎ ಕಾರ್ಯದರ್ಶಿ ಅನಂತರಾಜು, ಮಾಜಿ ಹಾಕಿ ಆಟಗಾರರಾದ ಸುನೀಲ್, ಅರ್ಜುನ್ ಹಾಲಪ್ಪ, ನಿಕ್ಕಿನ್ ಉತ್ತಪ್ಪ ಇತರರಿದ್ದರು.
- ರಾಷ್ಟ್ರೀಯ ಕ್ರೀಡಾ ದಿನಾಚರಣೆ
- ಧ್ಯಾನ್‌ಚಂದ್ ಪ್ರತಿಮೆಗೆ ಪುಷ್ಪಾರ್ಚನೆ
ಬೆಂಗಳೂರು:
ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಕರ್ನಾಟಕ ಕ್ರೀಡಾಪಟುಗಳು ಕನಿಷ್ಠ 10 ಪದಕಗಳನ್ನು ಗೆಲ್ಲುವಂತಾಗಬೇಕು. ಇದಕ್ಕೆ ಸರ್ಕಾರದಿಂದ ಅಗತ್ಯ ಪ್ರೋತ್ಸಾಹ ಕೊಡಿಸಲು ಸಿದ್ಧ ಎಂದು ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಕೆ.ಗೋವಿಂದರಾಜು ಹೇಳಿದರು.
ಕರ್ನಾಟಕ ಒಲಿಂಪಿಕ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕರ್ನಾಟಕದಿಂದ 15ರಿಂದ 20 ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವಂತಾಗಬೇಕು. ಈ ಪೈಕಿ 10 ರಿಂದ 15 ಪದಕಗಳನ್ನು ಕನ್ನಡಿಗರು ಗೆಲ್ಲಬೇಕು ಎಂಬುದೇ ನನ್ನ ಕನಸು ಎಂದರು. ಜನರಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಇಂಥ ಆಚರಣೆಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ಗೋವಿಂದರಾಜು ಅಭಿಪ್ರಾಯಪಟ್ಟರು.
ಧ್ಯಾನ್‌ಚಂದ್ ಪ್ರತಿಮೆಗೆ ಪುಷ್ಪಾರ್ಚನೆ
ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಆವರಣದಲ್ಲಿರುವ ಧ್ಯಾನ್‌ಚಂದ್ ಅವರ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಗೋವಿಂದರಾಜು, ವಾರ್ತಾ ಇಲಾಖೆ ಹಾಗೂ ಯುವ ಸಬಲೀಕರಣ-ಕ್ರೀಡಾ ಇಲಾಖೆ ಆಯುಕ್ತ ಎಂ.ಎನ್. ಅನುಚೇತ್, ಕೆಒಎ ಕಾರ್ಯದರ್ಶಿ ಅನಂತರಾಜು, ಮಾಜಿ ಹಾಕಿ ಆಟಗಾರರಾದ ಸುನೀಲ್, ಅರ್ಜುನ್ ಹಾಲಪ್ಪ, ನಿಕ್ಕಿನ್ ಉತ್ತಪ್ಪ, ಮಾಜಿ ಕ್ರೀಡಾಪಟುಗಳಾದ ಉದಯ್ ಪ್ರಭು, ಜಿ.ದಿಲೀಪ್ ಇತರರಿದ್ದರು.