ಎಲ್ಲ ಮಾದರಿ ಕ್ರಿಕೆಟ್​ಗೆ ವಿದಾಯ ಹೇಳಿದ ಆರ್​ಸಿಬಿ ಮಾಜಿ ಆಟಗಾರ, ಹ್ಯಾಟ್ರಿಕ್ ಐಪಿಎಲ್​ ಟ್ರೋಫಿ ವಿಜೇತ! 
ಕ್ರಿಕೆಟ್

ಎಲ್ಲ ಮಾದರಿ ಕ್ರಿಕೆಟ್​ಗೆ ವಿದಾಯ ಹೇಳಿದ ಆರ್​ಸಿಬಿ ಮಾಜಿ ಆಟಗಾರ, ಹ್ಯಾಟ್ರಿಕ್ ಐಪಿಎಲ್​ ಟ್ರೋಫಿ ವಿಜೇತ!

ನವದೆಹಲಿ: ಭಾರತ ಪರ ಆಡಿರುವ ಲೆಗ್​ ಸ್ಪಿನ್ನರ್​ ಕರ್ಣ್​ ಶರ್ಮ (

Karn Sharma

) ಭಾನುವಾರ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ರೈಲ್ವೇಸ್​, ವಿದರ್ಭ, ಆಂಧ್ರ ಪರ ಆಡಿರುವ ಉತ್ತರ ಪ್ರದೇಶ ಮೂಲದ ಅವರು, ಯುಪಿ ಟಿ20 ಲೀಗ್​ನಲ್ಲಿ ಮಂಗಳವಾರ ಕಾನ್ಪುರ ಸೂಪರ್​ಸ್ಟಾರ್ಸ್​ ಪರ ಕೊನೆಯದಾಗಿ ಆಡಲಿದ್ದಾರೆ.

ಭಾರತ ಪರ 2014ರಲ್ಲಿ ತಲಾ 1 ಟೆಸ್ಟ್​, ಟಿ20 ಮತ್ತು 2 ಏಕದಿನ ಪಂದ್ಯಗಳನ್ನು ಆಡಿ, ಒಟ್ಟು 5 ವಿಕೆಟ್​ ಕಬಳಿಸಿದ್ದಾರೆ.


"ನಾನೀಗ ನಿವೃತ್ತಿ ಹೇಳಲು ಬಯಸಿದ್ದೇನೆ. ನನ್ನ ವೃತ್ತೀಜಿವನದುದ್ದಕ್ಕೂ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ಮುಂದೆ ನಾನು ಕೋಚಿಂಗ್​ ಮತ್ತು ಕ್ರಿಕೆಟ್​ಗೆ ಸಂಬಂಧಿಸಿದ ಇತರ ಜವಾಬ್ದಾರಿಗಳಿಗೆ ಲಭ್ಯನಿರುತ್ತೇನೆ' ಎಂದು 38 ವರ್ಷದ ಕರ್ಣ್​ ಶರ್ಮ ತಿಳಿಸಿದ್ದಾರೆ. 2007-08ರಲ್ಲಿ ರಣಜಿ ಟ್ರೋಫಿ ಪದಾರ್ಪಣೆಯ ಪಂದ್ಯದಲ್ಲೇ ಶತಕ ಸಿಡಿಸಿದ್ದ ಕರ್ಣ್​, 97 ಪ್ರಥಮ ದರ್ಜೆ ಪಂದ್ಯಗಳಲ್ಲಿ 270 ವಿಕೆಟ್​ ಮತ್ತು 2 ಶತಕಗಳ ಸಹಿತ 2,866 ರನ್​ ಗಳಿಸಿದ್ದಾರೆ.

2016 (ಸನ್​ರೈಸರ್ಸ್​), 2017 (ಮುಂಬೈ), 2018ರಲ್ಲಿ (ಸಿಎಸ್​ಕೆ) ಸತತ 3 ವರ್ಷ ಐಪಿಎಲ್​ ಟ್ರೋಫಿ ಗೆದ್ದ ತಂಡದ ಭಾಗವಾಗಿದ್ದ ಕರ್ಣ್​, 2021ರಲ್ಲಿ (ಸಿಎಸ್​ಕೆ) 4ನೇ ಬಾರಿ ಐಪಿಎಲ್​ ಕಿರೀಟ ಜಯಿಸಿದ್ದರು. 2009 ಮತ್ತು 2023-24ರಲ್ಲಿ ಆರ್​ಸಿಬಿ ಪರವಾಗಿಯೂ ಆಡಿದ್ದರು. ಐಪಿಎಲ್​ನಲ್ಲಿ 2025ರಲ್ಲಿ ಕೊನೆಯದಾಗಿ ಮುಂಬೈ ಪರ ಆಡಿದ್ದರು. ಕರ್ಣ್​ ಭಾರತ ಪರ ಆಡಿದ ಏಕೈಕ ಏಕದಿನ ಪಂದ್ಯದಲ್ಲಿ ರೋಹಿತ್​ ಶರ್ಮ ವಿಶ್ವದಾಖಲೆಯ 264 ರನ್​ ಸಿಡಿಸಿದ್ದರು.