ಎಂಸಿಸಿಗೆ ಜೂಲಿಯನ್​ ಮೆಥೆರೆಲ್​ ಹೊಸ ಅಧ್ಯಕ್ಷ 
ಕ್ರಿಕೆಟ್

ಎಂಸಿಸಿಗೆ ಜೂಲಿಯನ್​ ಮೆಥೆರೆಲ್​ ಹೊಸ ಅಧ್ಯಕ್ಷ

ಲಂಡನ್​: ದಿ ಹಂಡ್ರೆಡ್​ ಟೂರ್ನಿಯ ಲಂಡನ್​ ಸ್ಪಿರಿಟ್​ ಫ್ರಾಂಚೈಸಿಯ ಚೇರ್ಮನ್​ ಜೂಲಿಯನ್​ ಮೆಥೆರೆಲ್​ (Julian Metherell) ಪ್ರತಿಷ್ಠಿತ ಮೆರಿಲ್​ಬೋನ್​ ಕ್ರಿಕೆಟ್​ ಕ್ಲಬ್​ನ (MCC) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಮುಂದಿನ ಅಕ್ಟೋಬರ್​ನಿಂದ ಮೂರು ವರ್ಷದ ಅವಧಿ ಹೊಂದಿರುತ್ತಾರೆ.

ಹಾಲಿ ಅಧ್ಯಕ್ಷರಾಗಿರುವ ಇಂಗ್ಲೆಂಡ್​ ಮಾಜಿ ಬ್ಯಾಟರ್​ ಎಡ್​ ಸ್ಮಿತ್​ ಉತ್ತರಾಧಿಕಾರಿ ಆಗಲಿರುವ ಮೆಥೆರೆಲ್​ ಕಳೆದ 40 ವರ್ಷಗಳಿಂದ ಎಂಸಿಸಿ ಸದಸ್ಯರಾಗಿದ್ದು, 2025ರ ಎಜಿಎಂ ನಂತರ ಎಂಸಿಸಿ ಸಮಿತಿಯ ಸದಸ್ಯರೂ ಆಗಿದ್ದರು. ಅವರು ನಿರ್ಗಮನ ಅಧ್ಯಕ್ಷ ಸ್ಮಿತ್​ ಅವರಿಂದಲೇ ನಾಮನಿರ್ದೇಶನಗೊಂಡಿದ್ದಾರೆ.

1787ರಲ್ಲಿ ಸ್ಥಾಪನೆಯಾದ ಎಂಸಿಸಿ, ಕ್ರಿಕೆಟ್​ ಕಾಶಿ ಎನಿಸಿರುವ ಲಾರ್ಡ್ಸ್​ ಕ್ರಿಕೆಟ್​ ಮೈದಾನದ ಒಡೆತನ ಹೊಂದಿದೆ. ಜತೆಗೆ ಕ್ರಿಕೆಟ್​ ನಿಯಮಾವಳಿಗಳ ಮಹಾರಕ್ಷಕನೂ ಆಗಿದೆ.