ನವದೆಹಲಿ: ಮುಂಬರುವ ಏಷ್ಯನ್ ಗೇಮ್ಸ್ ಹಾಗೂ ಏಷ್ಯಾಕಪ್ ಟಿ20 ಟೂರ್ನಿಯ ಭಾರತ ತಂಡದಿಂದ ಜೆಮೀಮಾ ರೋಡ್ರಿಗಸ್ ಹೊರಬಿದ್ದಿದ್ದು, ಅವರ ಬದಲಿಗೆ ಪ್ರತೀಕಾ ರಾವಲ್ ಸ್ಥಾನ ಪಡೆದಿದ್ದಾರೆ.ಇಂಗ್ಲೆಂಡ್‌ನ ದಿ ಹಂಡ್ರೆಡ್ ಲೀಗ್‌ನಲ್ಲಿ ಸ್ನಾಯು ಸೆಳೆತ ಸಮಸ್ಯೆಗೆ ತುತ್ತಾದ 25 ವರ್ಷದ ಜೆಮೀಮಾ, ಪ್ರಸ್ತುತ ಬಿಸಿಸಿಐ ಶ್ರೇಷ್ಠತಾ ಕೇಂದ್ರದ (ಸಿಒಇ) ಪುನಶ್ಚೇತನ ಶಿಬಿರದಲ್ಲಿದ್ದಾರೆ.
ಯುಎಇ ಆತಿಥ್ಯದಲ್ಲಿ ಆಗಸ್ಟ್ 28 ರಿಂದ ಸೆಪ್ಟೆಂಬರ್ 13ರವರೆಗೆಗೆ ಏಷ್ಯಾಕಪ್ ಟೂರ್ನಿ ನಿಗದಿಯಾಗಿದ್ದು, ಸೆ.19ರಿಂದ ಅ.4ರವರೆಗೆ ಜಪಾನ್‌ನಲ್ಲಿ ಏಷ್ಯನ್ ಗೇಮ್ಸ್ ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ತಂಡ: ಹರ್ಮಾನ್‌ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂದನಾ (ಉಪನಾಯಕಿ), ಶೆಫಾಲಿ ವರ್ಮ, ಭಾರತಿ ದೀಪ್ತಿ ಶರ್ಮ, ರಿಚಾ (ವಿ.ಕೀ), ಜಿ.ಕಮಲಿನಿ, ಆರುಂಧತಿ ರೆಡ್ಡಿ, ಪ್ರೇಮಾ ರಾವತ್, ರಾಧಾ ಯಾದವ್, ಶ್ರೀಚರಣಿ, ರೇಣುಕಾ ಠಾಕೂರ್, ನಂದಿನಿ ಶರ್ಮ, ಕ್ರಾಂತಿ ಗೌಡ್, ಪ್ರತೀಕಾ ರಾವಲ್.