ಜಸ್ಪ್ರಿತ್ ಬುಮ್ರಾ 
ಕ್ರಿಕೆಟ್

ಈ ಟೆಕ್ನಿಕ್ ಬುಮ್ರಾ ಕಲಿತಿದ್ದೇ ನನ್ನಿಂದ! ವಿಶ್ವದ ಬೆಸ್ಟ್​ ಬೌಲರ್​ ಬಗ್ಗೆ ಜಹೂರ್​​ ಖಾನ್​ ಶಾಕಿಂಗ್ ಹೇಳಿಕೆ | Jasprit Bumrah

ಪ್ರಮುಖ ಮುಖ್ಯಾಂಶಗಳು

  • ಸ್ಲೋ ಡೆಲಿವರಿ ಕಲಿತಿದ್ದೇ ನನ್ನಿಂದ ಎಂದ ಯುಎಇ ಬೌಲರ್​
  • ವಿಶ್ವ ದರ್ಜೆಯ ವೇಗಿಗೆ ಹೇಳಿಕೊಟ್ಟಿದ್ದೇ ನಾನು ಎಂದು ಹೇಳಿಕೆ
ಮುಂಬೈ: ನ್ಯೂಜಿಲೆಂಡ್​ ವಿರುದ್ಧ 96 ರನ್​ಗಳಿಂದ ಟಿ20 ವಿಶ್ವಕಪ್ ಗೆದ್ದ​ ಭಾರತ ತಂಡ ಸದ್ಯ ವಿಶ್ರಾಂತಿ ಮೂಡ್​ನಲ್ಲಿದೆ. ಇಡೀ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರಿಗೆ ಕ್ರಿಕೆಟ್​ ಪ್ರೇಮಿಗಳಿಂದ ಅಭಿನಂದನೆ, ಮೆಚ್ಚುಗೆಗಳು ಹರಿಬಂದಿವೆ. ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುವಲ್ಲಿ ಅದರಲ್ಲೂ ಬೌಲಿಂಗ್ ವಿಭಾಗದಲ್ಲಿ ಮಹತ್ವದ ಕೊಡುಗೆ ನೀಡಿದ ವಿಶ್ವದ ಹಾಗೂ ಟೀಮ್ ಇಂಡಿಯಾದ ಬೆಸ್ಟ್ ಬೌಲರ್​ ಬಗ್ಗೆ ಮತ್ತೊಬ್ಬ ವೇಗಿ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.
ಪಾಕಿಸ್ತಾನ ಮೂಲದ ಯುಎಇ ಬೌಲರ್ ಜಹೂರ್ ಖಾನ್ ಮಾತನಾಡಿ, ಬುಮ್ರಾ ಅವರ ಮಂದಗತಿಯ ಎಸೆತಗಳು ಇಂದು ಈ ಮಟ್ಟಿಗೆ ಬ್ಯಾಟರ್​ಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದರೆ, ಅದಕ್ಕೆ ನಾನು ಕಾರಣ ಎಂದಿದ್ದಾರೆ. ಕೋವಿಡ್​-19 ಸಮಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಬುಧಾಬಿಯಲ್ಲಿ ನಡೆಯುತ್ತಿತ್ತು. ಆ ಸಮಯದಲ್ಲಿ, ಬುಮ್ರಾ ಅವರ ಬೌಲಿಂಗ್ ಶೈಲಿಯಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ನಿಧಾನಗತಿಯ ಎಸೆತಗಳನ್ನು ಹೇಗೆ ಎಸೆಯಬೇಕೆಂದು ನಾನು ಕಲಿಸಿಕೊಟ್ಟೆ ಎಂದು ಜಹೂರ್​ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ಜೊತೆ ನೆಟ್ ಬೌಲರ್ ಆಗಿದ್ದಾಗಿ ಜಹೂರ್ ಹೇಳಿದ್ದಾರೆ. "ಮುಂಬೈ ಇಂಡಿಯನ್ಸ್ ತಂಡದವರು ನನಗೆ ಫೋನ್​ ಮಾಡಿದರು. ಆಗ, ನಾನು 6 ದಿನಗಳ ಕಾಲ ಕ್ವಾರಂಟೈನ್ ಮಾಡಿದ್ದೆ. 7ನೇ ದಿನ ಅಭ್ಯಾಸಕ್ಕೆ ಹೋದೆ. ಆ ರಾತ್ರಿ ನಾನು ತಂಡದೊಂದಿಗೆ ಉಳಿದಿದ್ದೆ. ಜಹೀರ್ ಖಾನ್ ಮತ್ತು ರಾಬಿನ್ ಸಿಂಗ್ ನನಗೆ ಪರಿಚಯವಾಗಿದ್ದರು. ಏಕೆಂದರೆ, ಟಿ10 ಲೀಗ್‌ನಲ್ಲಿ ನಾನು ಮೇಡನ್ ಓವರ್ ಮಾಡಿದ್ದೆ. ಇದೇ ಸಂದರ್ಭದಲ್ಲಿ, ನಮ್ಮೊಂದಿಗೆ ರೋಹಿತ್ ಶರ್ಮ ಮತ್ತು ಬುಮ್ರಾ ಕೂಡ ಇದ್ದರು. ಆಗ, ಸ್ಲೋ ಡೆಲಿವರಿ ಬಗ್ಗೆ ಒಂದಷ್ಟು ವಿಷಯವನ್ನು ನನ್ನಿಂದ ತಿಳಿದುಕೊಂಡರು" ಎಂದರು.
"ನಾನು ಮೇಡನ್​ ಓವರ್​ ಮಾಡಿದ್ದ ವಿಡಿಯೋವನ್ನು ನೋಡಿದ ಬುಮ್ರಾ, ಹೇಗೆ ನೀವು ಆ ರೀತಿ ಬೌಲ್ ಮಾಡ್ತೀರಾ? ನನಗೂ ಹೇಳಿಕೊಡಿ ಎಂದರು. ನೆಟ್​ ಪ್ರಾಕ್ಟಿಸ್​ನಲ್ಲಿ ನಾನು ಬೌಲಿಂಗ್ ಮಾಡುತ್ತಿದ್ದೆ. ಅಂದಿನ ಮುಂಬೈ ಇಂಡಿಯನ್ಸ್​ನ ಬೌಲಿಂಗ್ ಕೋಚ್​ ಶೇನ್ ಬಾಂಡ್ ಆಗಿದ್ದರು. ನಾನು ಮಾಡಿದ ಸ್ಲೋವರ್​ ಬಾಲ್​ಗಳಿಗೆ ಅಲ್ಲಿನ ಬ್ಯಾಟರ್​ಗಳು ವಿಕೆಟ್​ ಕಳೆದುಕೊಂಡರು. ಇದನ್ನು ನೋಡಿದ ಕೋಚ್​, ನಿಮ್ಮಿಂದ ಕಲಿಯುವುದಿದೆ ಎಂದು ಮೆಚ್ಚಿದರು. ಈ ವೇಳೆ, ನನ್ನ ಹಿಡಿತ, ಬೌಲಿಂಗ್​ ಶೈಲಿಯ ವಿಧಾನವನ್ನು ಬುಮ್ರಾ ಹೇಳಿಸಿಕೊಂಡರು. ಈಗ ನಾನು ಒಬ್ಬ ಯುಎಇ ಆಟಗಾರ, ಅದೇ ಬುಮ್ರಾ ಒಬ್ಬ ವಿಶ್ವ ದರ್ಜೆಯ ವೇಗಿ" ಎಂದು ಹೇಳಿದರು,(ಏಜೆನ್ಸೀಸ್).