ರವೀಂದ್ರ ಜಡೇಜಾ ಮತ್ತು ಪತ್ನಿ ರಿವಾಬಾ ಜಡೇಜಾ  
ಕ್ರಿಕೆಟ್

ವಿದೇಶ ಪ್ರವಾಸದಲ್ಲಿ ಬೇಡದ್ದನ್ನೆಲ್ಲ ಮಾಡ್ತಾರೆ... ಭಾರತೀಯ ಕ್ರಿಕೆಟಿಗರ ಬಗ್ಗೆ ಸ್ಪೋಟಕ ಸಂಗತಿ ಬಿಚ್ಚಿಟ್ಟ ಜಡೇಜಾ ಪತ್ನಿ!

ಪ್ರಮುಖ ಮುಖ್ಯಾಂಶಗಳು

  • ರಾಜಕೀಯ ಭಾಷಣದ ವೇಳೆ ಸ್ಫೋಟಕ ಹೇಳಿಕೆ
  • ಟೀಮ್ ಇಂಡಿಯಾದ ಕೆಲ ಕ್ರಿಕೆಟಿಗರನ್ನು ಉದ್ದೇಶಿಸಿ ಹೇಳಿಕೆ
  • ಪತಿಯನ್ನು ಹೊಗಳುವ ಭರದಲ್ಲಿ ಮಾಡಿಕೊಂಡ್ರಾ ರಿವಾಬಾ ಎಡವಟ್ಟು?
ಮುಂಬೈ: ಈ ವರ್ಷದ ಅಕ್ಟೋಬರ್​ 17ರಂದು ಗುಜರಾತ್​ನ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ, ಭಗವದ್ಗೀತೆಯನ್ನು ಹಿಡಿದು ಪ್ರಮಾಣವಚನ ಸ್ವೀಕರಿಸಿದರು. ಕ್ರಿಕೆಟಿಗನ ಪತ್ನಿ ರಾಜಕೀಯ ಅಖಾಡದಲ್ಲಿ ಮತ್ತೊಂದು ಹಂತಕ್ಕೆ ಹೋಗಿದ್ದು, ಹಲವರ ಹುಬ್ಬೇರಿಸಿತು. ಈ ಮಧ್ಯೆ, ಭಾಷಣದ ಸಂದರ್ಭದಲ್ಲಿ ಪತಿಯನ್ನು ಹೊಗಳುವ ಭರದಲ್ಲಿ ಭಾರತ ತಂಡದ ಇತರೆ ಕ್ರಿಕೆಟಿಗರ ಕುರಿತು ಸ್ಫೋಟಕ ಸಂಗತಿ ಬಿಚ್ಚಿಟ್ಟಿರುವುದು ಸದ್ಯ ಭಾರೀ ವಿವಾದಕ್ಕೆ ಕಾರಣವಾಗಿದೆ.
ಪ್ರಸ್ತುತ, ಗುಜರಾತ್​ ಶಿಕ್ಷಣ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿರುವ ರಿವಾಬಾ, "ನನ್ನ ಪತಿ ಕ್ರಿಕೆಟ್​ ಸಲುವಾಗಿ ಆಗಾಗ್ಗೆ ಲಂಡನ್​, ದುಬೈ, ಆಸ್ಟ್ರೇಲಿಯಾ ಸೇರಿ ಹಲವೆಡೆ ಪ್ರಯಾಣಿಸುತ್ತಿರುತ್ತಾರೆ. ಆ ಸಮಯದಲ್ಲಿ ಅವರು ಬೇಡದ ಚಟುವಟಿಕೆ ಅಥವಾ ಕೆಟ್ಟ ಪ್ರಪಂಚದತ್ತ ಸುಳಿಯುವ ಆಸಕ್ತಿ ತೋರುವುದಿಲ್ಲ. ಅಸಲಿಗೆ, ಅಂತಹ ಕೆಟ್ಟ ಚಟ ಅವರಿಗಿಲ್ಲ. ಆದರೆ, ಟೀಮ್ ಇಂಡಿಯಾದ ಕೆಲ ಕ್ರಿಕೆಟಿಗರು ಅಂಥಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ" ಎಂದಿದ್ದಾರೆ.
"ಕೆಟ್ಟ ಚಟಗಳು, ಬೇಡದ ಅಭ್ಯಾಸಗಳಲ್ಲಿ ಕ್ರಿಕೆಟಿಗರು ತೊಡಗಿಸಿಕೊಳ್ಳುತ್ತಿದ್ದಾರೆ. ಇದು ವಿದೇಶಿ ಪ್ರವಾಸಕ್ಕೆಂದು ಬಂದಾಗಲೇ ಹೀಗೆ" ಎಂಬುದನ್ನು ಒತ್ತಿ ಹೇಳಿದ್ದಾರೆ. "ನನ್ನ ಪತಿ ಕೂಡ ಅವರಂತೆಯೇ ಮಾಡಬಹುದಿತ್ತು. ಆದರೆ, ಅದರತ್ತ ಸುಳಿಯುವ ಆಸಕ್ತಿ ಅಥವಾ ಚಟ ಅವರಿಗಿಲ್ಲ. ಬದಲಿಗೆ, ಅವರಿಗೆ ತಮ್ಮ ಜವಾಬ್ದಾರಿಗಳೇನು ಎಂಬುದರ ಅರಿವು ಬಹಳ ಸ್ಪಷ್ಟವಾಗಿದೆ" ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಇದೊಂದು ವಿಚಾರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ, ವಿವಾದಕ್ಕೆ ಗುರಿಯಾಗಿದೆ. ಅಷ್ಟಕ್ಕೂ, ಇಲ್ಲಿ ಯಾವ ಕ್ರಿಕೆಟಿಗನ ಹೆಸರನ್ನೂ ಉಲ್ಲೇಖಿಸದೆ ಹೇಳಿರುವುದು ಗಮನಾರ್ಹ,(ಏಜೆನ್ಸೀಸ್).