ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಇಶಾನ್ ಕಿಶನ್ (Ishan Kishan ಚಿತ್ರ X)
- ಐಪಿಎಲ್ ಸರಣಿಯ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ SRH ತಂಡದ ಕ್ಯಾಂಪ್‌ನಲ್ಲಿ ನಡೆಯಿತು ಸಂಚಲನ
- ಪಂದ್ಯದ ಎರಡನೇ ಇನ್ನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ಜೀಶನ್ ಅನ್ಸಾರಿ ವಿಕೆಟ್ ಕೀಪರ್ ಇಶಾನ್ ಕಿಶನ್ ಅನ್ನು ಔಟ್ ಮಾಡಿದರು
- ಅನ್ಸಾರಿ ಎಸೆದ ಮೊದಲ ನಾಲ್ಕು ಎಸೆತಗಳಲ್ಲಿ ಅಬ್ಬರಿಸಿದ ತಂಡದ ನಾಯಕ ಕಿಶನ್ ಕಿಶಾನ್
- ಪೆವಿಲಿಯನ್ ಕಡೆಗೆ ಬೆರಳು ತೋರಿಸಿ "ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೊರಡಿ" ಎಂಬಂತೆ ಸನ್ನೆ
ಹೈದರಾಬಾದ್: ಐಪಿಎಲ್ ಸರಣಿಯ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ, ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಕ್ಯಾಂಪ್‌ನಲ್ಲಿ ಸಂಚಲನವೊಂದು ಸೃಷ್ಟಿಯಾಗಿದೆ. ಶನಿವಾರ ನಡೆದ ಅಭ್ಯಾಸ ಪಂದ್ಯದಲ್ಲಿ ತಂಡದ ನಾಯಕ (Ishan Kishan) ಇಶಾನ್ ಕಿಶನ್ ಮತ್ತು ಯುವ ಲೆಗ್ ಸ್ಪಿನ್ನರ್ ಜೀಶನ್ ಅನ್ಸಾರಿ ನಡುವೆ ನಡೆದ ಹಾಸ್ಯಮಯ ಕ್ಷಣವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಂದ್ಯದ ಎರಡನೇ ಇನ್ನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ಜೀಶನ್ ಅನ್ಸಾರಿ ವಿಕೆಟ್ ಕೀಪರ್ ಇಶಾನ್ ಕಿಶನ್ ಅನ್ನು ಔಟ್ ಮಾಡಿದರು. ಅನ್ಸಾರಿ ಎಸೆದ ಮೊದಲ ನಾಲ್ಕು ಎಸೆತಗಳಲ್ಲಿ ಕಿಶನ್ ಅಕ್ಷರಶಃ ಅಬ್ಬರಿಸಿದರು. ಸತತವಾಗಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ಬೌಲರ್ ಮೇಲೆ ಸಂಪೂರ್ಣ ಒತ್ತಡ ಹೇರಿದರು
ಆದಾಗ್ಯೂ, ಮುಂದಿನ ಎಸೆತದಲ್ಲಿ ಜೀಶನ್ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಫೀಲ್ಡರ್‌ಗೆ ಸರಳ ಕ್ಯಾಚ್ ನೀಡಿದ್ದರಿಂದ ಕಿಶನ್ ಔಟ್ ಆದರು. ವಿಕೆಟ್ ಪಡೆದ ಅನ್ಸಾರಿ ಸಂಭ್ರಮ ಮುಗಿಲು ಮುಟ್ಟಿತ್ತು. ಆಗ ಅವರು ಕಿಶನ್ ಅವರತ್ತ ತಿರುಗಿ ಅನಿಮೇಟೆಡ್ ರೀತಿಯಲ್ಲಿ 'ವಿದಾಯ' (Farewell) ಹೇಳಿದರು. ಅಷ್ಟೇ ಅಲ್ಲದೆ, ಪೆವಿಲಿಯನ್ ಕಡೆಗೆ ಬೆರಳು ತೋರಿಸಿ "ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೊರಡಿ" ಎಂಬಂತೆ ಸನ್ನೆ ಮಾಡಿದರು. ಈ ವೇಳೆ ಕಿಶನ್ ಮುಗುಳ್ನಗುತ್ತಾ ನಿಂತಿರುವುದನ್ನು ವಿಡಿಯೋ ತೋರಿಸುತ್ತದೆ.
ಇದಕ್ಕೂ ಮೊದಲು, ನಾಯಕ ಪ್ಯಾಟ್ ಕಮ್ಮಿನ್ಸ್ ಗಾಯಗೊಂಡ ಹಿನ್ನಲೆ, ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ 2026 ರ ಆರಂಭದಲ್ಲಿ ಭಾರತದ ವಿಕೆಟ್ ಕೀಪರ್ ಇಶಾನ್ ಕಿಶನ್ ಅವರನ್ನು ಮಧ್ಯಂತರ ನಾಯಕರನ್ನಾಗಿ ನೇಮಿಸಿತು. ಅಭಿಷೇಕ್ ಶರ್ಮಾ ಅವರನ್ನು ಉಪನಾಯಕನನ್ನಾಗಿ ನೇಮಕ ಮಾಡಿದೆ.
ಸಧ್ಯ ಪ್ಯಾಟ್ ಕಮ್ಮಿನ್ಸ್ ಬೆನ್ನಿನ ಕೆಳಭಾಗದ ನೋವಿನಿಂದ ಬಳಲುತ್ತಿರುವುದರಿಂದ ಕಳೆದ ಆಶಸ್ ಸರಣಿಯ ಪ್ರಮುಖ ಭಾಗ ಹಾಗೂ ಟಿ20 ವಿಶ್ವಕಪ್‌ನಿಂದ ಅವರನ್ನು ದೂರವಿಟ್ಟಿತ್ತು.
ಈ ಬಾರಿಯೂ ಕೂಡಾ, ಪ್ಯಾಟ್ ಕಮ್ಮಿನ್ಸ್ ಗಾಯದಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಕೆಲವು ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಅವರು ಚೇತರಿಸಿಕೊಳ್ಳುವವರೆಗೂ ಇಶಾನ್ ಕಿಶನ್ ನಾಯಕರಾಗಿ ಮತ್ತು ಅಭಿಷೇಕ್ ಶರ್ಮಾ ಉಪನಾಯಕರಾಗಿರಲಿದ್ದಾರೆ ಎಂದು ಫ್ರಾಂಚೈಸಿ ಅಧೀಕೃತವಾಗಿ ಮಾಹಿತಿ ನೀಡಿದೆ (ಏಜೆನ್ಸೀಸ್).