ಇಶಾನ್​ ಕಿಶನ್​ ಟೀಕೆಗೆ ಸಿಎಸ್​ಕೆ ಫ್ಯಾನ್ಸ್ ಗರಂ 
ಕ್ರಿಕೆಟ್

ದಿಗ್ಗಜನ ಎದುರು ಇದೆಂಥಾ ವರ್ತನೆ! ಸಿಎಸ್​ಕೆ ಫ್ಯಾನ್ಸ್​ ಮನೆಗೆ ಹೋಗಿ ಎಂದ ಕಿಶನ್​ಗೆ ನೆಟ್ಟಿಗರ ಛೀಮಾರಿ​ | Ishan Kishan

ಪ್ರಮುಖ ಮುಖ್ಯಾಂಶಗಳು

  • ನಿರ್ಣಾಯಕ ಐಪಿಎಲ್​ ಪಂದ್ಯದಲ್ಲಿ ಸಿಎಸ್​ಕೆ ಎದುರು ಗೆದ್ದ ಸನ್​ರೈಸರ್ಸ್​ ಹೈದರಾಬಾದ್​
  • ಪ್ಲೇಆಫ್​ ಗೆದ್ದ ಬೆನ್ನಲ್ಲೇ ಸಿಎಸ್​ಕೆ ಅಭಿಮಾನಿಗಳನ್ನು ಟೀಕಿಸಿದ ಇಶಾನ್ ಕಿಶನ್​
  • ಕಿಶನ್​ ನಡೆಗೆ ಫ್ಯಾನ್ಸ್​, ನೆಟ್ಟಿಗರು ಛೀಮಾರಿ
ಚೆನ್ನೈ: ನಿನ್ನೆ (ಮೇ.18) ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ನಡೆದ ಸನ್​ರೈಸರ್ಸ್​ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ನಿರ್ಣಾಯಕ ಪಂದ್ಯದಲ್ಲಿ ರುತುರಾಜ್​ ಪಡೆ ಸೋತ ಕೂಡಲೇ ಮೈದಾನದಲ್ಲಿದ್ದ ಸಿಎಸ್​ಕೆ ಅಭಿಮಾನಿಗಳಿಗೆ ಮನೆಗೆ ಹೋಗುವಂತೆ ವಿಜಿಲ್​ ಊದಿದ ಇಶಾನ್​ ಕಿಶನ್​ಗೆ ಸದ್ಯ ನೆಟ್ಟಿಗರ ಛೀಮಾರಿ ಹಾಕಿದ್ದಾರೆ.
ತಂಡದ ಗೆಲುವಿಗೆ ಪ್ರಮುಖ ಕಾರಣರಾದ ಇಶಾನ್​ ಕಿಶನ್​, ಚೆನ್ನೈ ಸೂಪರ್​ ಕಿಂಗ್ಸ್​ಗಿದ್ದ ಪ್ಲೇಆಫ್​ ಅವಕಾಶವನ್ನು ತಮ್ಮ ಅಮೋಘ ಬ್ಯಾಟಿಂಗ್​ನಿಂದ ಕಸಿದುಕೊಂಡರು. ಮತ್ತೊಂದೆಡೆ, ಪಂದ್ಯ ಗೆದ್ದ ಬಳಿಕ ಎದುರಾಳಿ ತಂಡದ ಆಟಗಾರರಿಗೆ ಕೈಕುಲುಕಿ ಮೈದಾನಕ್ಕೆ ಹೋಗುತ್ತಿದ್ದ ಇಶಾನ್​, ಬೇಸರದಲ್ಲಿ ಕುಳಿತ್ತಿದ್ದ ಸಿಎಸ್​ಕೆ ಅಭಿಮಾನಿಗಳ ಮುಂದೆ ಜೋರಾಗಿ ಶಿಳ್ಳೆ ಹೊಡೆಯುವಂತೆ ಅಣುಕಿಸಿ, ನೀವೆಲ್ಲರೂ ಎದ್ದು ಮನೆಗೆ ಹೋಗಿ ಎಂದಿದ್ದು ನೆಟ್ಟಿಗರ ಪಿತ್ತವನ್ನು ನೆತ್ತಿಗೇರಿಸಿದೆ.
ಮಹೇಂದ್ರ ಸಿಂಗ್​ ಧೋನಿ ಅವರು ಮೈದಾನಕ್ಕಿಳಿದು ಕ್ರಿಕೆಟ್​ ಪ್ರೇಮಿಗಳು, ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದನ್ನು ಕಂಡು ಫ್ಯಾನ್ಸ್ ಭಾವುಕರಾದರೆ, ಅತ್ತ ಕಿಶನ್​ ನಡೆದುಕೊಂಡ ರೀತಿ ಹಲವರನ್ನು ಕೆರಳಿಸಿದೆ. ಒಬ್ಬ ದಿಗ್ಗಜ ಕ್ರಿಕೆಟಿಗನ ಉಪಸ್ಥಿತಿಯಲ್ಲಿ ಇದೆಂಥಾ ದುರ್ವತನೆ? ಏಕಿಂತ ಟೀಕೆಗಳು? ಇದ್ಯಾವುದು ಶೋಭೆಯಲ್ಲ ಎಂದು ಅನೇಕರು ಕಿಶನ್​ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಿಡಿದೆದ್ದಿದ್ದಾರೆ.
ಇಶಾನ್ ಕಿಶಾನ್​ ಅವರ ಅಮೋಘ ಬ್ಯಾಟಿಂಗ್​ ಪ್ರದರ್ಶನದಿಂದ ಗೆಲುವಿನ ದಡ ಸೇರಿದ ಎಸ್​ಆರ್​ಎಚ್​, ಪ್ಲೇಆಫ್ ಕನಸನ್ನು ಕಡೆಗೂ ಜೀವಂತವಾಗಿರಿಸಿಕೊಂಡಿತು. ಆದರೆ, ಪಂಜಾಬ್​ ಕಿಂಗ್ಸ್​ ಸೋಲಿನ ಮೂಲಕ ಪ್ಲೇಆಫ್​ಗೆ ಲಗ್ಗೆಯಿಡಲು ಸಿಕ್ಕ ಸುವರ್ಣಾವಕಾಶವನ್ನು ಮತ್ತೊಮ್ಮೆ ಕಳಪೆ ಪ್ರದರ್ಶನದಿಂದ ಚೆನ್ನೈ ಪಡೆ ಕೈಚೆಲ್ಲಿತು. ಇದು ಫ್ರಾಂಚೈಸಿಯ ಅಭಿಮಾನಿಗಳನ್ನು ಅಕ್ಷರಶಃ ನಿರಾಶೆಗೊಳಿಸಿತು.

ಪಂದ್ಯದ ವಿವರ

ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 180 ರನ್ ಗಳಿಸಿತು. ಈ ಸಾಧಾರಣ ರನ್‌ಗಳ ಗುರಿಯನ್ನು ಬೆನ್ನತ್ತಿದ ಪ್ಯಾಟ್​ ಕಮ್ಮಿನ್ಸ್ ಪಡೆ 1 ಓವರ್​ ಬಾಕಿ ಇರುವಂತೆಯೇ ಪಂದ್ಯವನ್ನು ಮುಗಿಸಿತು. ತಂಡದ ಪರ ಇಶಾನ್ ಕಿಶನ್ ಅದ್ಭುತ ಬ್ಯಾಟಿಂಗ್ ಮಾಡಿದರು. 47 ಎಸೆತಗಳಲ್ಲಿ 70 ರನ್ ಸಿಡಿಸಿ, ಸಿಎಸ್​ಕೆ ವಿರುದ್ಧ 5 ವಿಕೆಟ್​ಗಳ ಜಯ ತಂದುಕೊಟ್ಟರು.
ಈ ಗೆಲುವಿನೊಂದಿಗೆ, ಹೈದರಾಬಾದ್ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಮತ್ತೊಂದೆಡೆ, ಗುಜರಾತ್ ಟೈಟಾನ್ಸ್ ಕೂಡ ಪ್ಲೇಆಫ್‌ಗೆ ಲಗ್ಗೆಯಿಟ್ಟಿದೆ. ಇಲ್ಲಿಯವರೆಗೆ, ಮೂರು ತಂಡಗಳು ಈ ಹಂತಕ್ಕೆ ಪ್ರವೇಶ ಪಡೆದಿವೆ. ಆರ್​ಸಿಬಿ, ಜಿಟಿ ಮತ್ತು ಎಸ್​ಆರ್​ಎಚ್​ ಪ್ಲೇಆಫ್​ ತಲುಪಿದ್ದು, ಸಿಎಸ್​ಕೆಗೆ ಇನ್ನೂ ಅವಕಾಶವಿದೆ. ಆದರೆ, ರಾಜಸ್ಥಾನ ರಾಯಲ್ಸ್ ಎರಡು ಪಂದ್ಯ ಮತ್ತು ಪಂಜಾಬ್ ಕಿಂಗ್ಸ್ ಒಂದು ಪಂದ್ಯವನ್ನು ಸೋತರೆ ಮಾತ್ರ,(ಏಜೆನ್ಸೀಸ್).