ಅಹಮದಾಬಾದ್​ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣ ( Cricket Stadium ) 
ಕ್ರಿಕೆಟ್

ಶಾಪಗ್ರಸ್ತವಾಯ್ತೇ ಭಾರತದ ಈ ಸ್ಟೇಡಿಯಂ: ಇಲ್ಲಿ ಗೆದ್ದವರು ಮತ್ತೆ ಮೆರೆದಂತಹ ಉದಾಹರಣೆಯೇ ಇಲ್ಲ! Cricket Stadium

ಪ್ರಮುಖ ಮುಖ್ಯಾಂಶಗಳು

  • ಭಾರತದ ಈ ಪ್ರತಿಷ್ಠಿತ ಮೈದಾನ ಕ್ರಿಕೆಟ್​ಗೆ ಮಾರಕವಾಗುತ್ತಿದೆಯಾ?
  • ಇಲ್ಲಿ ಯಶಸ್ಸು ಪಡೆದ ತಂಡವಾಗಲಿ, ಆಟಗಾರನಾಗಲಿ ಮತ್ತೆ ಯಶಸ್ಸು ಪಡೆದಿಲ್ಲ
  • ದಿನಕಳದಂತೆ ಕುಖ್ಯಾತಿ ಪಡೆಯುತ್ತಿರುವ ಭಾರತದ ಆ ಕ್ರೀಡಾಂಗಣ ಯಾವುದು?
Cricket Stadium : ಈ ಮೈದಾನ ಕ್ರಿಕೆಟ್​ಗೆ ಮಾರಕವಾಗ್ತಿದೆಯಾ? ಇಲ್ಲಿ ಯಶಸ್ಸು ಪಡೆದ ತಂಡವಾಗಲಿ ಹಾಗೂ ಆಟಗಾರನೇ ಆಗಿರಲಿ ಮುಂದಿನ ದಿನಗಳಲ್ಲಿ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಬೇಕಾಗ್ತಿದೆ. ನಾವು ಹೇಳೊಕೆ ಹೊರಟಿರುವ ಮೈದಾನ ಯಾವುದು ಅಂತೀರಾ ಹಾಗಿದ್ರೆ ಈ ಸ್ಟೋರಿ ಓದಿ.
ದಿನಕಳದಂತೆ ಕುಖ್ಯಾತಿ ಪಡೆಯುತ್ತಿರುವ ಪ್ರಪಂಚದ ಅತಿ ದೊಡ್ಡ ಕ್ರೀಡಾಂಗಣವೆಂದೇ ಗುರುತಿಸಿಕೊಂಡಿರುವ ಗುಜರಾತ್​ನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನ ಕಥೆ ಇದು.
ಈ ಕ್ರೀಡಾಂಗಣದಲ್ಲಿ ವೃತ್ತಿ ಜೀವನದ ಯಶಸ್ಸು ಕಂಡ ತಂಡ ಅಥವಾ ಆಟಗಾರರ ಪಾಲಿಗೆ ಮುಂದಿನ ದಿನಗಳಲ್ಲಿ ಯಶಸ್ಸು ಅನ್ನುವುದು ಮರಿಚಿಕೆಯಾಗಿದೆ ಎಂದೇ ಹೇಳಬಹುದು. ಯಶಸ್ಸಿನಿಂದ ಅಧಃಪತನ ಕಂಡಿರುವ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅದರಲ್ಲಿ ಕೆಲವೊಂದಿಷ್ಟು ಉದಾಹರಣೆಗಳು ಇಲ್ಲಿವೆ.

2022ರ ಐಪಿಎಲ್​ ಟ್ರೋಫಿ ಗೆದ್ದಿದ್ದ ಗುಜರಾತ್​ ಟೈಟಾನ್ಸ್​ ತಂಡ

ಹಾರ್ದಿಕ್​ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್​ ತಂಡವು ಐಪಿಎಲ್​ ಟೂರ್ನಿಯಲ್ಲಿ ಪಾಲ್ಗೊಂಡ ಮೊದಲ ಪ್ರಯತ್ನದಲ್ಲೇ ಫೈನಲ್​ ಪ್ರವೇಶಿಸಿ, ರಾಜಸ್ಥಾನ ರಾಯಲ್ಸ್​ ತಂಡವನ್ನು ಸೋಲಿಸುವುದರ ಮೂಲಕ, ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಅದಾದ ಬಳಿಕ ಮತ್ತೊಮ್ಮೆ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.

2023ರ ಐಪಿಎಲ್​ ಟ್ರೋಫಿ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ

ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ್ದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಫೈನಲ್​ ಪ್ರವೇಶಿಸಿ, ಹಾಲಿ ಚಾಂಪಿಯನ್ಸ್​ ಆದ ಗುಜರಾತ್​ ಟೈಟಾನ್ಸ್​ ತಂಡವನ್ನು ಸೋಲಿಸುವುದರ ಮೂಲಕ, ಇದೇ ಮೈದಾನದಲ್ಲಿ ಕಪ್​ ಗೆದ್ದು ಬೀಗಿತ್ತು. ಅದಾದ ಬಳಿಕ 2024 ಮತ್ತು 2025ರಲ್ಲಿ ತಂಡಕ್ಕೆ ಫ್ಲೇ ಆಫ್​ಗೂ ಕ್ವಾಲಿಫೈ ಆಗಲೂ ಸಾಧ್ಯವಾಗಲಿಲ್ಲ.

2023ರ ಏಕದಿನ ವಿಶ್ವಕಪ್​ ಗೆದ್ದಿದ್ದ ಕಾಂಗರೂ ಪಡೆ

ಭಾರತದ ಆತೀಥೆಯದಲ್ಲಿ ನಡೆದಿದ್ದ 2023ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ತಂಡವು ಟೂರ್ನಿ ಆಯೋಜಿಸಿದ್ದ ಭಾರತದ ವಿರುದ್ಧ ಇದೇ ಕ್ರೀಡಾಂಗಣದಲ್ಲಿ ಗೆಲುವು ಸಾಧಿಸಿ, ನಂತರದಲ್ಲಿ ಆಸ್ಟ್ರೇಲಿಯಾ ಆಟಗಾರ ವಿಶ್ವಕಪ್​ ಮೇಲೆ ಕಾಲಿಟ್ಟು ಸಂಭ್ರಮಿಸಿ ಹುಚ್ಚಾಟ ಮೆರೆದಿತ್ತು. 2026ರ ಟಿ20 ವಿಶ್ವಕಪ್​ನಲ್ಲಿ ಲೀಗ್​ ಹಂತದಲ್ಲೇ ಹೊರನಡೆದಿದ್ದು, ಅಲ್ಲಿಂದ ಇಲ್ಲಿಯವರೆಗೂ ಐಸಿಸಿಯ ಯಾವ ಟ್ರೋಫಿಯನ್ನು ಗೆಲ್ಲಲು ಆಸ್ಟ್ರೇಲಿಯಾಗೆ ಸಾಧ್ಯವಾಗಿಲ್ಲ.

2025ರಲ್ಲಿ ಹದಿನೇಳು ವರ್ಷಗಳ ಬಳಿಕ ಮೊದಲ ಕಪ್ ಮುಡಿಗೇರಿಸಿಕೊಂಡ ಆರ್​ಸಿಬಿ

ಐಪಿಎಲ್​ ಟೂರ್ನಿ ಆರಂಭವಾದಾಗಿನಿಂದ ಕಪ್​ ಗೆಲ್ಲಬೇಕೆಂಬ ಆರ್​ಸಿಬಿ ಅಭಿಮಾನಿಗಳ ಆಸೆ ಈಡೇರಿದ್ದು ಇದೇ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಮೈದಾನದಲ್ಲಿ ಅನ್ನೋದು ವಿಶೇಷ ಸಂಗತಿಯಾಗಿದೆ. ಟ್ರೋಫಿ ಗೆದ್ದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಂಭ್ರಮಾಚರಣೆಯ ಸಮಯದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಜನ ಸಾವನ್ನಪ್ಪಿ ಘನಘೋರ ದುರಂತವೇ ನಡೆದು ಹೊಯಿತು.
ಪ್ರಪಂಚದ ಅತಿ ದೊಡ್ಡ ಕ್ರೀಡಾಂಗಣವೆಂದು ಗುರುತಿಸಿಕೊಂಡಿರುವ ನರೇಂದ್ರ ಮೋದಿ ಕ್ರೀಡಾಂಗಣ ಹೀಗೆ ಕುಖ್ಯಾತಿಗೆ ಪಾತ್ರವಾಗಿರುವುದಂತೂ ಸುಳ್ಳಲ್ಲ.