ಒಂದೇ ಒಂದು IPL ಸೀಸನ್​ನಲ್ಲಿ ಪಾಲ್ಗೊಂಡ್ರೆ ಅಂಪೈರ್​ಗಳಿಗೆ ಇಷ್ಟೊಂದು ಹಣ ಸಿಗುತ್ತಾ? ನಿಜಕ್ಕೂ ನಂಬಲಸಾಧ್ಯ​! IPL Umpires Salary 
ಕ್ರಿಕೆಟ್

ಒಂದೇ ಒಂದು IPL ಸೀಸನ್​ನಲ್ಲಿ ಪಾಲ್ಗೊಂಡ್ರೆ ಅಂಪೈರ್​ಗಳಿಗೆ ಇಷ್ಟೊಂದು ಹಣ ಸಿಗುತ್ತಾ? ನಿಜಕ್ಕೂ ನಂಬಲಸಾಧ್ಯ​! IPL Umpires Salary

ಪ್ರಮುಖ ಮುಖ್ಯಾಂಶಗಳು

  • ಬಿಸಿಸಿಐ ನಡೆಸುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತ್ಯಂತ ಶ್ರೀಮಂತ ಲೀಗ್​
  • ಒಮ್ಮೆ ಐಪಿಎಲ್​ಗೆ ಆಯ್ಕೆಯಾದರೆ ಸಾಕು ಆ ಆಟಗಾರನ ಜೀವನವೇ ಬದಲಾಗಿಬಿಡುತ್ತದೆ
  • ಪಂದ್ಯವನ್ನು ಸರಿಯಾದ ರೀತಿಯಲ್ಲಿ ನಡೆಸುವಲ್ಲಿ ಅಂಪೈರ್‌ಗಳ ಪಾತ್ರವೂ ನಿರ್ಣಾಯಕವಾಗಿದೆ
  • ಇಡೀ ಪಂದ್ಯವನ್ನು ನಡೆಸಿಕೊಡುವ ಅಂಪೈರ್​ಗಳಿಗೆ ಎಷ್ಟು ಸಂಬಳ ಸಿಗಬಹುದು?
IPL Umpires Salary : ಬಿಸಿಸಿಐ ನಡೆಸುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತ್ಯಂತ ಶ್ರೀಮಂತ ಮತ್ತು ಹೆಚ್ಚು ವೀಕ್ಷಿಸಲ್ಪಡುವ ಟಿ20 ಲೀಗ್ ಎಂದು ಗುರುತಿಸಲ್ಪಟ್ಟಿದೆ. ಇಲ್ಲಿ, ಆಟಗಾರರಿಗೆ ಕೋಟ್ಯಂತರ ರೂಪಾಯಿಗಳ ಸುರಿಮಳೆಯಾಗುತ್ತದೆ. ಒಮ್ಮೆ ಐಪಿಎಲ್​ಗೆ ಆಯ್ಕೆಯಾದರೆ ಸಾಕು ಆ ಆಟಗಾರನ ಜೀವನವೇ ಬದಲಾಗಿಬಿಡುತ್ತದೆ. ಆದಾಗ್ಯೂ, ಒಂದು ಪಂದ್ಯ ನಡೆಯುವಾಗ ಯಾವುದೇ ತಪ್ಪುಗಳು ಸಂಭವಿಸದಂತೆ ಮತ್ತು ಪಂದ್ಯವನ್ನು ಸರಿಯಾದ ರೀತಿಯಲ್ಲಿ ನಡೆಸುವಲ್ಲಿ ಅಂಪೈರ್‌ಗಳ ಪಾತ್ರವೂ ನಿರ್ಣಾಯಕವಾಗಿದೆ. ಪಂದ್ಯದ ಫಲಿತಾಂಶಗಳು ಅಂಪೈರ್​ ನಿರ್ಧಾರಗಳ ಆಧಾರದ ಮೇಲೆ ಬದಲಾಗುತ್ತವೆ.
ವಿಶ್ವದ ಶ್ರೀಮಂತ ಲೀಗ್​ ಎಂದೇ ಖ್ಯಾತಿ ಪಡೆದಿರುವ ಐಪಿಎಲ್​ನಲ್ಲಿ ಆಟಗಾರರಿಗೆ ಕೋಟ್ಯಂತರ ರೂಪಾಯಿ ಸಂಭಾವನೆ ಸಿಗುವಾಗ ಇಡೀ ಪಂದ್ಯವನ್ನು ಒಂದೇ ಸ್ಥಳದಲ್ಲಿ ನಿಂತು ನಡೆಸಿಕೊಡುವ ಅಂಪೈರ್​ಗಳಿಗೆ ವಾಸ್ತವವಾಗಿ ಎಷ್ಟು ಸಂಬಳ ಸಿಗಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಆ ಕುತೂಹಲ ತಣಿಸುವ ವರದಿ ಇಲ್ಲಿದೆ.
ಅಂದಹಾಗೆ, ಅನೇಕ ಮಾಧ್ಯಮ ವರದಿಗಳ ಪ್ರಕಾರ, ಐಪಿಎಲ್‌ನಲ್ಲಿ ಅಂಪೈರ್‌ಗಳಿಗೆ ಪ್ರತಿ ಪಂದ್ಯಕ್ಕೆ ಸರಿಸುಮಾರು 3 ಲಕ್ಷ ರೂ. ಪಾವತಿಸಲಾಗುತ್ತದೆ. ಅದೇ ರೀತಿ ಮೂರನೇ ಮತ್ತು ನಾಲ್ಕನೇ ಅಂಪೈರ್‌ಗಳಿಗೆ ಪ್ರತಿ ಪಂದ್ಯಕ್ಕೆ 2 ಲಕ್ಷ ರೂ. ಸಿಗುತ್ತದೆ. ಇನ್ನು ಗಣ್ಯ (ಐಸಿಸಿ ಪ್ಯಾನಲ್) ಅಂಪೈರ್‌ಗಳಿಗೆ 3.7 ಲಕ್ಷ ರೂ. ವರೆಗೆ ಹಣ ಸಿಗುತ್ತದೆ.
ಇದಲ್ಲದೆ, ಪ್ಲೇಆಫ್ ಮತ್ತು ಫೈನಲ್‌ಗಳಲ್ಲಿ ಅಂಪೈರ್‌ಗಳು ಹೆಚ್ಚಿನ ಆದಾಯವನ್ನು ಪಡೆಯುತ್ತಾರೆ. ಪ್ಲೇಆಫ್ ಮತ್ತು ಫೈನಲ್‌ಗಳಂತಹ ಪ್ರಮುಖ ಪಂದ್ಯಗಳಿಗೆ ಅಂಪೈರ್‌ಗಳು ಹೆಚ್ಚುವರಿ ಬೋನಸ್‌ಗಳನ್ನು ಪಡೆಯುತ್ತಾರೆ. ಪ್ಲೇಆಫ್‌ಗಳಲ್ಲಿ ಎಲೈಟ್ ಅಂಪೈರ್‌ಗಳು 5 ರಿಂದ 8 ಲಕ್ಷ ರೂ. ಬೋನಸ್ ಪಡೆಯುತ್ತಾರೆ. ಫೈನಲ್​ ಪಂದ್ಯದಲ್ಲಿ ಇನ್ನೂ ಹೆಚ್ಚಿನ ಸಂಭಾವನೆ ಪಡೆಯುವ ಸಾಧ್ಯತೆಯಿದೆ.
ಒಂದೇ ಒಂದು ಸೀಸನ್​ನಲ್ಲಿ ಸರಾಸರಿ 12 ರಿಂದ 15 ಪಂದ್ಯಗಳಲ್ಲಿ ಅಂಪೈರಿಂಗ್​ ಮಾಡುವ ಅಂಪೈರ್‌ನ ಒಟ್ಟು ಆದಾಯ 25 ರಿಂದ 40 ಲಕ್ಷ ರೂ.ಗಳಾಗಿರಬಹುದು. ಇದರ ಜೊತೆಗೆ, 7.33 ಲಕ್ಷ ರೂ.ಗಳಷ್ಟು ಸೀಸನ್ ರೀಟೈನರ್ ಅನ್ನು ಸಹ ಒದಗಿಸಲಾಗುತ್ತದೆ. ಪ್ರಯಾಣ, ಹೋಟೆಲ್ ಮತ್ತು ಇತರ ಭತ್ಯೆಗಳು ಪ್ರತ್ಯೇಕವಾಗಿ ಲಭ್ಯವಿದೆ.
ಅಂದಹಾಗೆ, ಐಪಿಎಲ್‌ನಲ್ಲಿ ಅಂಪೈರ್‌ಗಳಿಗೆ ಪಾವತಿಸುವ ಶುಲ್ಕವು ಟಿ20 ಅಂತಾರಾಷ್ಟ್ರೀಯ (ಟಿ20ಐ) ಪಂದ್ಯಗಳಿಗಿಂತ ಹೆಚ್ಚಾಗಿದೆ. ಟಿ20ಯಲ್ಲಿ, ಒಂದು ಪಂದ್ಯಕ್ಕೆ ಕೇವಲ 1.13 ರಿಂದ 1.25 ಲಕ್ಷ ರೂ.ಗಳನ್ನು ಪಾವತಿಸಲಾಗುತ್ತದೆ. ಇದಕ್ಕೆ ಹೋಲಿಕೆ ಮಾಡಿದರೆ, ಐಪಿಎಲ್‌ನಲ್ಲಿ 2.5 ಪಟ್ಟು ಹೆಚ್ಚು ಹಣ ಸಿಗುತ್ತದೆ. ಆದ್ದರಿಂದ, ಆಟಗಾರರ ಜೊತೆಗೆ, ಅಂಪೈರ್‌ಗಳು ಐಪಿಎಲ್‌ನಲ್ಲಿ ಭಾರಿ ಸಂಬಳವನ್ನು ಪಡೆಯುತ್ತಾರೆ, (ಏಜೆನ್ಸೀಸ್​).