2014 ರಲ್ಲಿ ಪ್ರವೀಣ್ ತಾಂಬೆ ಮಾಡಿದ್ದ ವಿಶಿಷ್ಟ ಸಾಧನೆ
- ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಐಪಿಎಲ್
- 2014 ರಲ್ಲಿ ಪ್ರವೀಣ್ ತಾಂಬೆ ಮಾಡಿದ್ದ ವಿಶಿಷ್ಟ ಸಾಧನೆ
- ಕೇವಲ ಎರಡೇ ಬಾಲಿಗೆ ಹ್ಯಾಟ್ರಿಕ್ ಪಡೆದಿದ್ದ ಸ್ಪಿನ್ ಬೌಲರ್
IPL Hat Trick: ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಜ್ವರ ಭಾರತದಲ್ಲಿ ಪ್ರಾರಂಭವಾಗಲಿದೆ. ಮಾರ್ಚ್ 28 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಕಳೆದ ಸಿಸನ್ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.
ಈ ಐಪಿಎಲ್ ಎನ್ನುವ ಚುಟುಕು ಕ್ರಿಕೆಟ್ ಟೂರ್ನಾಮೆಂಟ್ ಕೇವಲ ಭಾರತದಷ್ಟೇ ಅಲ್ಲ ಜಗತ್ತಿನ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬೆರೆದಿಡಲೇ ಬೇಕಾದ ಟೂರ್ನಾಮೆಂಟ್ ಎಂದು ಹೇಳಿದರೂ ತಪ್ಪಾಗದು.
ಐಪಿಎಲ್ ಕೇವಲ ಹಣದ ಹೊಳೆಹರಿಸಲಷ್ಟೇ ಅಲ್ಲದೇ, ಅನೇಕ ವಿಶಿಷ್ಟ ರೆಕಾರ್ಡ್ಗಳನ್ನು ನಿರ್ಮಿಸಿ ಕೂಡ ತನ್ನ ಹೆಸರನ್ನ ಖಾಯಂಗೊಳಿಸಿದೆ. ಅದು ವಿಶ್ವದ ಅತೀ ಶ್ರೀಮಂತ ಟೂರ್ನಿಯಾವುದರ ಜೊತೆಗೆ ಟಿ-20 ಮಾದರಿಯ ಕ್ರಿಕೆಟ್ನಲ್ಲಿ ಒಂದು ಪಂದ್ಯದಲ್ಲಿ ಅತ್ಯಧಿಕ ರನ್ ಹೊಡೆದ ದಾಖಲೆ ಸಹ ಇದೇ ಐಪಿಎಲ್ನಲ್ಲಿ ಸಂಭವಿಸಿದೆ. ಹಾಗೆಯೇ ಬೌಲಿಂಗ್ ವಿಭಾಗದಲ್ಲಿ ಒಂದು ವಿಶಿಷ್ಟ ದಾಖಲೆ ಸಹ ಇದೇ ಐಪಿಎಲ್ನಲ್ಲಿ ಸಂಭವಿಸಿದೆ.
ಕ್ರಿಕೆಟ್ ಭಾಷೆಯಲ್ಲಿ ಹ್ಯಾಟ್ರಿಕ್ (IPL Hat Trick) ಎಂದರೆ ಒಬ್ಬ ಬೌಲರ್ ಸತತ ಮೂರು ಬಾಲ್ನಲ್ಲಿ ಮೂರು ವಿಕೆಟ್ ಪಡೆದರೆ ಅದನ್ನು ಹ್ಯಾಟ್ರಿಕ್ ಎಂದು ಕರೆಯುತ್ತಾರೆ. ಅಂದರೆ ಈ ಹ್ಯಾಟ್ರಿಕ್ ಪೂರ್ಣಗೊಳ್ಳಲು ಕನಿಷ್ಟ ಮೂರು ಬಾಲ್ಗಳ ಅಗತ್ಯವಿರುತ್ತದೆ. ಆದರೆ 2014 ರ ಐಪಿಎಲ್ನಲ್ಲಿ ಭಾರತದ ಬೌಲರ್ವೊಬ್ಬ ಕೇಲವ ಎರಡೇ ಬಾಲಿನಲ್ಲಿ ಹ್ಯಾಟ್ರಿಕ್ ಪಡೆದಿದ್ದ ಎಂದರೆ ನೀವು ನಂಬಲೇ ಬೇಕು.
ಎರಡು ಬಾಲಲ್ಲಿ ಹ್ಯಾಟ್ರಿಕ್; ತಾಂಬೆ ವಿಶಿಷ್ಟ ಸಾಧನೆ!
2014 ರ ಐಪಿಎಲ್ನ 25 ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಕಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ 170 ರನ್ಗಳ ಟಾರ್ಗೆಟನ್ನು ಕೆಕೆಆರ್ಗೆ ನೀಡಿತು.
ಆದರೆ 16 ನೇ ಓವರ್ಗೆ ಬೌಲ್ ಮಾಡಲು ಬಂದ ಪ್ರವೀಣ್ ತಾಂಬೆ, ಈ ವಿಶಿಷ್ಟ ಸಾಧನೆಯನ್ನು ಮಾಡಿದರು. ತಾಂಬೆ ಎಸೆದ ಮೊದಲ ಡೆಲವರಿಗೆ ಮುನ್ನುಗ್ಗಿ ಹೊಡೆಯಲು ಹೋದ ಮನೀಶ್ ಪಾಂಡೆ, ವೀಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರಿಂದ ಸ್ಟಂಪ್ ಔಟ್ ಆದರು. ಆದರೆ ಈ ಬಾಲ್ ವಡ್ ಆಗಿದ್ದ ಕಾರಣ ಬಾಲ್ನ್ನು ಲೆಕ್ಕಕ್ಕೆ ಹಿಡಿಯಲಿಲ್ಲ.
ಎರಡನೇ ಎಸೆತವನ್ನು ಎದುರಿಸಿದ ಯೂಸುಫ್ ಪಠಾಣ್ ಪ್ರವೀಣ್ ತಾಂಬೆ ಅವರಿಗೇ ಕ್ಯಾಚ್ ಕೊಟ್ಟು ತಮ್ಮ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಎಸೆತ (ಕಾನೂನುಬದ್ಧ ಎರಡನೇ ಎಸೆತ) ಎದುರಿಸಿದ ರಯಾನ್ ಟೆನ್ ಡೋಸ್ಚೇಟ್ ಎಲ್ಬಿಡಬ್ಲ್ಯೂಆಗುವ ಮೂಲಕ ಔಟ್ ಆದರು. ಈ ಮೂಲಕ ಪ್ರವೀಣ್ ತಾಂಬೆ ಕೇವಲ ಎರಡೇ ಎಸೆತಗಳಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಬೌಲರ್ ಆಗಿ ಹೊರಹೊಮ್ಮಿದರು,(ಏಜನ್ಸೀಸ್).