ರಿಂಕು ಸಿಂಗ್ IPL 2026 (ಚಿತ್ರ X)
- ಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಕೋಲ್ಕತ್ತಾ ನೈಟ್ ರೈಡರ್ಸ್
- ಈ ಬಾರಿ ತನ್ನ ನಾಯಕತ್ವದ ಜವಾಬ್ದಾರಿಯಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದೆ
- ದೇಶೀಯ ಕ್ರಿಕೆಟ್‌ನಲ್ಲಿ ಉತ್ತರ ಪ್ರದೇಶ ತಂಡವನ್ನು ಮುನ್ನಡೆಸುವ ಮೂಲಕ ರಿಂಕು ಸಿಂಗ್ ಹೆಸರು ಪಡೆದಿದ್ದಾರೆ
- ಭವಿಷ್ಯದ ದೃಷ್ಟಿಯಿಂದ ನಾಯಕನನ್ನು ರೂಪಿಸಲು ಆಲೋಚಿಸುತ್ತಿರುವುದರಿಂದ ಈ ರೇಸ್ನಲ್ಲಿ ರಿಂಕು ಸಿಂಗ್ ಬಲವಾದ ಅಭ್ಯರ್ಥಿ
IPL 2026: ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಈ ಬಾರಿ ತನ್ನ ನಾಯಕತ್ವದ ಜವಾಬ್ದಾರಿಯಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದ್ದು, ಕ್ರಿಕೆಟ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಆದಾಗ್ಯೂ, ಕೆಕೆಆರ್ ತಂಡದ ಬ್ಯಾಟರ್ ರಿಂಕು ಸಿಂಗ್ ಹೊಸ ನಾಯಕನಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರಿಂಕು ಸಿಂಗ್ ಅವರು ಈಗಾಗಲೇ ದೇಶೀಯ ಕ್ರಿಕೆಟ್‌ನಲ್ಲಿ ಉತ್ತರ ಪ್ರದೇಶ ತಂಡವನ್ನು ಮುನ್ನಡೆಸುವ ಮೂಲಕ ಭದ್ರವಾದ ನಾಯಕತ್ವದ ಅನುಭವವನ್ನು ಹೊಂದಿದ್ದಾರೆ. ಈ ಅನುಭವವು ಅವರಿಗೆ ಒತ್ತಡ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಮತ್ತು ತಂಡವನ್ನು ಮುನ್ನಡೆಸಲು ಸಹಾಯ ಮಾಡಲಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಅಜಿಂಕ್ಯ ರಹಾನೆ ಅವರನ್ನು ನಾಯಕ ಪಟ್ಟದಿಂದ ಕೆಳಗಿಳಿಸುವ ಸಾಧ್ಯತೆ ಇದೆ. ಆದಾಗ್ಯೂ, ಕೆಕೆಆರ್ ತಂಡವು ಭವಿಷ್ಯದ ದೃಷ್ಟಿಯಿಂದ ನಾಯಕನನ್ನು ರೂಪಿಸಲು ಆಲೋಚಿಸುತ್ತಿರುವುದರಿಂದ ಈ ರೇಸ್ನಲ್ಲಿ ರಿಂಕು ಸಿಂಗ್ ಬಲವಾದ ಅಭ್ಯರ್ಥಿಯಾಗಿದ್ದಾರೆ. ಅವರು ಹಲವು ವರ್ಷಗಳಿಂದ ತಂಡದ ಪರವಾಗಿ ಆಟವಾಡುತ್ತಿದ್ದು, ಉತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ.
ಶಾರುಖ್ ಖಾನ್ ನಿರ್ಧಾರವೇ ಅಂತಿಮ?
ವರದಿಗಳ ಪ್ರಕಾರ, ಕೆಕೆಆರ್ ಮಾಲೀಕ ಶಾರುಖ್ ಖಾನ್ ಅವರು ಈ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ. ಶಾರುಖ್ ಖಾನ್ ಮತ್ತು ರಿಂಕು ಸಿಂಗ್ ನಡುವೆ ಬಹಳ ಆತ್ಮೀಯ ಸಂಬಂಧವಿರುವುದರಿಂದ ರಿಂಕು ಅವರ ಪರಿಶ್ರಮ ಮತ್ತು ಬದ್ಧತೆಗೆ ಇದು ದೊಡ್ಡ ಬಹುಮಾನವಾಗಿದೆ (ಏಜೆನ್ಸೀಸ್).