- ಇದೇ ಡಿ.16ರಂದು ದುಬೈನಲ್ಲಿ ಮಿನಿ ಹರಾಜು
- ಸ್ಟಾರ್ ಕ್ರಿಕೆಟಿಗರು ಅತ್ಯಂತ ದುಬಾರಿ ಮೊತ್ತಕ್ಕೆ ಖರೀದಿ
- ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ ನೋಡಿ
ನವದೆಹಲಿ: ಐಪಿಎಲ್ ಮಿನಿ ಹರಾಜಿಗೆ ಕ್ಷಣಗಣನೆ ಆರಂಭಗೊಂಡಿದ್ದು, ಇದೇ ಡಿ.16ರಂದು ದುಬೈನಲ್ಲಿ ಆಕ್ಷನ್ ಪ್ರಕ್ರಿಯೆ ನಡೆಯಲಿದೆ. ಹರಾಜಿನಲ್ಲಿ ಎಷ್ಟು ಭಾರತೀಯ ಮತ್ತು ವಿದೇಶಿ ಆಟಗಾರರು ಇರಲಿದ್ದಾರೆ ಎಂಬುದರ ಪಟ್ಟಿ ಈಗಾಗಲೇ ಹೊರಬಿದ್ದಿದೆ. ಫ್ರಾಂಚೈಸಿಗಳ ಜೇಬು ಸ್ವಲ್ಪ ಭಾರವಾಗಿದ್ದೇ ಆದರೂ ಅತ್ಯುತ್ತಮ ಮತ್ತು ಪ್ರತಿಭಾವಂತ ಆಟಗಾರರಿಗೆ ಮಣೆ ಹಾಕುವ ಪೈಪೋಟಿ ಖಂಡಿತ ಜೋರಾಗಿರಲಿದೆ.
2026ರ ಮಿನಿ ಹರಾಜಿನಲ್ಲಿ ಯಾವ ಆಟಗಾರರು ದುಬಾರಿ ಮೊತ್ತಕ್ಕೆ ಖರೀದಿ ಆಗಲಿದ್ದಾರೆ? ಎಷ್ಟು ಕೋಟಿ ರೂ. ಹಾಗೂ ಯಾವ ಫ್ರಾಂಚೈಸಿ ಪಾಲಾಗಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಕಾಡತೊಡಗಿದೆ. ಅಷ್ಟಕ್ಕೂ, ಕಳೆದ ವರ್ಷಗಳ ಮಿನಿ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರರು ಯಾರೆಲ್ಲ? ಎಂಬುದರ ಪಟ್ಟಿ ಇಲ್ಲಿದೆ ನೋಡಿ.
ಫ್ರಾಂಚೈಸಿಗಳ ಪರ್ಸ್ನಲ್ಲಿರುವ ಹಣವೆಷ್ಟು?
- ಚೆನ್ನೈ ಸೂಪರ್ ಕಿಂಗ್ಸ್: 43.40 ಕೋಟಿ ರೂ.
- ಮುಂಬೈ ಇಂಡಿಯನ್ಸ್: 2.70 ಕೋಟಿ ರೂ.
- ರಾಯಲ್ ಚಾಲೆಂಜರ್ಸ್ ಬೆಂಗಳೂರು: 16.40 ಕೋಟಿ ರೂ.
- ಕೋಲ್ಕತ ನೈಟ್ ರೈಡರ್ಸ್: 64.30 ಕೋಟಿ ರೂ.
- ಸನ್‌ರೈಸರ್ಸ್ ಹೈದರಾಬಾದ್: 25.50 ಕೋಟಿ ರೂ.
- ಗುಜರಾತ್ ಟೈಟನ್ಸ್: 12.90 ಕೋಟಿ ರೂ.
- ರಾಜಸ್ಥಾನ್ ರಾಯಲ್ಸ್: 16.05 ಕೋಟಿ ರೂ.
- ಡೆಲ್ಲಿ ಕ್ಯಾಪಿಟಲ್ಸ್: 21.80 ಕೋಟಿ ರೂ.
- ಲಖನೌ ಸೂಪರ್‌ಜೈಂಟ್ಸ್: 22.95 ಕೋಟಿ ರೂ.
- ಪಂಜಾಬ್ ಕಿಂಗ್ಸ್: 11.50 ಕೋಟಿ ರೂ.
ಕಳೆದ ವರ್ಷಗಳ ಮಿನಿ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಖರೀದಿಯಾದ ಆಟಗಾರರಿವರು...
- ಮಿಚೆಲ್ ಸ್ಟಾರ್ಕ್: 24.75 ಕೋಟಿ ರೂ. (2024, ಕೆಕೆಆರ್)
- ಪ್ಯಾಟ್ ಕಮ್ಮಿನ್ಸ್: 20.50 ಕೋಟಿ ರೂ. (2024, ಎಸ್ಆರ್ಎಚ್)
- ಸ್ಯಾಮ್ ಕರನ್: 18.50 ಕೋಟಿ ರೂ. (2023, ಪಂಜಾಬ್ ಕಿಂಗ್ಸ್)
- ಕ್ಯಾಮರೂನ್ ಗ್ರೀನ್: 17.50 ಕೋಟಿ ರೂ. (2023, ಮುಂಬೈ ಇಂಡಿಯನ್ಸ್)
- ರಿಷಭ್ ಪಂತ್: 27 ಕೋಟಿ ರೂ. (2025, ಲಖನೌ ಸೂಪರ್ ಜೈಂಟ್ಸ್)
- ಶ್ರೇಯಸ್ ಅಯ್ಯರ್: 26.75 ಕೋಟಿ ರೂ. (2025, ಪಂಜಾಬ್ ಕಿಂಗ್ಸ್)
- ಕ್ರಿಸ್ ಮಾರಿಸ್: 16.25 ಕೋಟಿ ರೂ. (2021, ರಾಜಸ್ಥಾನ ರಾಯಲ್ಸ್)
- ಬೆನ್ ಸ್ಟೋಕ್ಸ್: 16.25 ಕೋಟಿ ರೂ. (2023, ಚೆನ್ನೈ ಸೂಪರ್ ಕಿಂಗ್ಸ್)
- ಯುವರಾಜ್ ಸಿಂಗ್: 16 ಕೋಟಿ ರೂ. (2015, ಡೆಲ್ಲಿ ಕ್ಯಾಪಿಟಲ್ಸ್)
- ನಿಕೋಲಸ್ ಪೂರನ್: 16 ಕೋಟಿ ರೂ. (2023, ಎಲ್ಎಸ್ಜಿ)
- ಕೈಲ್ ಜೇಮಿಸನ್: 15 ಕೋಟಿ ರೂ. (2021, ಆರ್ಸಿಬಿ)