IPL 2026  
ಕ್ರಿಕೆಟ್

IPL 2026; ವೈಭವ್ ಸೂರ್ಯವಂಶಿಗೆ ಕೊಹ್ಲಿ ಸ್ಪೆಷಲ್ ಗಿಫ್ಟ್: ಕ್ಯಾಪ್ ಮೇಲೆ ಮೆಸೇಜ್ ನೋಡಿ ಫ್ಯಾನ್ಸ್ ಫಿದಾ!

ಬೆಂಗಳೂರು: IPL 2026 ಟೂರ್ನಿಯಲ್ಲಿ ಮತ್ತೊಂದು ಹೃದಯಸ್ಪರ್ಶಿ ಕ್ಷಣ ಕ್ರಿಕೆಟ್ ಅಭಿಮಾನಿಗಳ ಮನಸೆಳೆಯುತ್ತಿದೆ. Rajasthan Royals ತಂಡದ ಕೇವಲ 15 ವರ್ಷದ ಯುವ ಪ್ರತಿಭೆ Vaibhav Sooryavanshi ಲೈವ್ ಟಿವಿಯಲ್ಲಿ Virat Kohli ಸಹಿ ಮಾಡಿದ ಕ್ಯಾಪ್ ಪ್ರದರ್ಶಿಸಿ ಇದೀಗ ವೈರಲ್ ಆಗಿದ್ದಾರೆ.
ಈ ಘಟನೆ Kolkata Knight Riders ವಿರುದ್ಧ ನಡೆದ ಪಂದ್ಯದಲ್ಲಿ ನಡೆದಿದೆ. ಪಂದ್ಯ ಸಮಯದಲ್ಲಿ ಕ್ಯಾಮೆರಾ ವೈಭವ್ ಮೇಲೆ ಫೋಕಸ್ ಆದಾಗ, ಅವರು ತಮ್ಮ ಬಳಿ ಇದ್ದ ಕ್ಯಾಪ್‌ನ್ನು ಹೆಮ್ಮೆಯಿಂದ ತೋರಿಸಿದರು. ಆ ಕ್ಯಾಪ್ ಮೇಲೆ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿಯ ಸಹಿ ಇದ್ದುದು ಅಭಿಮಾನಿಗಳ ಗಮನ ಸೆಳೆಯಿತು.

ಕೊಹ್ಲಿಯಿಂದ ವಿಶೇಷ ಗಿಫ್ಟ್

ಈ ಕ್ಯಾಪ್ ಕೇವಲ ಸಾಮಾನ್ಯವಲ್ಲ. IPL 2026ನಲ್ಲಿ Rajasthan Royals ಮತ್ತು Royal Challengers Bengaluru ನಡುವಿನ ಪಂದ್ಯ ಬಳಿಕ ವೈಭವ್ ಮತ್ತು ಕೊಹ್ಲಿ ನಡುವೆ ದೀರ್ಘ ಸಂಭಾಷಣೆ ನಡೆದಿತ್ತು. ಆ ವೇಳೆ ಕೊಹ್ಲಿ ಈ ಯುವ ಆಟಗಾರನಿಗೆ ಕ್ಯಾಪ್ ನೀಡಿದ್ದು, ಅದರಲ್ಲಿ ಸಹಿ ಹಾಕಿ ಒಂದು ಸ್ಪೆಷಲ್ ಮೆಸೇಜ್ ಕೂಡ ಬರೆದಿದ್ದರು.
“Dear Vaibhav, Well Done” ಎಂಬ ನಾಲ್ಕು ಪದಗಳ ಸಂದೇಶವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಲೈವ್ ಟಿವಿಯಲ್ಲಿ ‘ಫ್ಯಾನ್ ಬಾಯ್’ ಕ್ಷಣ

KKR ವಿರುದ್ಧದ ಪಂದ್ಯದಲ್ಲಿ ಸಬ್‌ಸ್ಟಿಟ್ಯೂಟ್ ಆಗಿ ಮೈದಾನದ ಹೊರಗಿದ್ದ ವೈಭವ್, ಕ್ಯಾಮೆರಾ ಕಡೆ ನೋಡುತ್ತಿದ್ದಂತೆ ತಮ್ಮ ಕ್ಯಾಪ್ ಅನ್ನು ತೋರಿಸಿದರು. ಈ ಕ್ಷಣವನ್ನು ಅಭಿಮಾನಿಗಳು “ಫ್ಯಾನ್ ಬಾಯ್ ಮೋಮೆಂಟ್” ಎಂದು ಕರೆಯುತ್ತಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ಹರಡಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಶೇಷವಾಗಿ ಯುವ ಆಟಗಾರನಿಗೆ ಹಿರಿಯ ಆಟಗಾರ ನೀಡಿದ ಪ್ರೋತ್ಸಾಹ ಎಲ್ಲರ ಮನಗೆದ್ದಿದೆ.

ಯುವ ಪ್ರತಿಭೆಗೆ ಮೆಚ್ಚುಗೆ

ಈ IPL ಸೀಸನ್‌ನಲ್ಲಿ ವೈಭವ್ ಸೂರ್ವ್ಯವಂಶಿ ಅತ್ಯಂತ ಚರ್ಚೆಯಲ್ಲಿರುವ ಯುವ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಕೇವಲ 15 ವರ್ಷ ವಯಸ್ಸಿನಲ್ಲೇ ಅವರು ತೋರಿಸುತ್ತಿರುವ ಆಟದ ಮಟ್ಟ ಹಿರಿಯ ಆಟಗಾರರನ್ನೇ ಆಶ್ಚರ್ಯಪಡಿಸಿದೆ.Punjab Kings ನಾಯಕ Shreyas Iyer ಕೂಡ ವೈಭವ್ ಬಗ್ಗೆ ಮಾತನಾಡಿ, “ಅವನ ಪ್ರತಿಭೆಗೆ ಪದಗಳೇ ಸಾಲುವುದಿಲ್ಲ” ಎಂದು ಪ್ರಶಂಸಿಸಿದ್ದಾರೆ.

ಕ್ರಿಕೆಟ್‌ನಲ್ಲಿ ಮಾನವೀಯ ಕ್ಷಣ

ಈ ಘಟನೆ ಕೇವಲ ಒಂದು ವೈರಲ್ ವಿಡಿಯೋ ಮಾತ್ರವಲ್ಲ. ಇದು ಕ್ರಿಕೆಟ್‌ನಲ್ಲಿ ಹಿರಿಯರಿಂದ ಕಿರಿಯರಿಗೆ ದೊರೆಯುವ ಬೆಂಬಲ ಮತ್ತು ಪ್ರೇರಣೆಯ ಪ್ರತೀಕವಾಗಿದೆ.
ಕೊಹ್ಲಿಯಂತಹ ವಿಶ್ವದ ಮಟ್ಟದ ಆಟಗಾರರಿಂದ ಬಂದ ಈ ಸಣ್ಣ ಗಿಫ್ಟ್, ಯುವ ಆಟಗಾರನಿಗೆ ದೊಡ್ಡ ಪ್ರೇರಣೆಯಾಗಿದೆ. ಇದೇ ಕಾರಣಕ್ಕೆ ಈ ಕ್ಷಣ ಅಭಿಮಾನಿಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ.IPL ಅಂತಹ ದೊಡ್ಡ ವೇದಿಕೆಯಲ್ಲಿ ಯುವ ಆಟಗಾರರು ತಮ್ಮ ಪ್ರತಿಭೆ ತೋರಿಸುವುದು ಸಾಮಾನ್ಯ. ಆದರೆ ವೈಭವ್ ಸೂರ್ವ್ಯವಂಶಿಯಂತಹ ಆಟಗಾರರು ತಮ್ಮ ಪ್ರತಿಭೆಯ ಜೊತೆಗೆ ತಮ್ಮ ವಿನಯ ಮತ್ತು ಕ್ರಿಕೆಟ್ ಮೇಲಿನ ಪ್ರೀತಿ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕೊಹ್ಲಿ ನೀಡಿದ ಈ ಸಂದೇಶವು, “ಟ್ಯಾಲೆಂಟ್ ಜೊತೆಗೆ ಪ್ರೋತ್ಸಾಹವೂ ಅಗತ್ಯ” ಎಂಬುದನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ವೈಭವ್ ಭಾರತೀಯ ಕ್ರಿಕೆಟ್‌ನ ಭವಿಷ್ಯದ ತಾರೆ ಆಗುವ ಸಾಧ್ಯತೆ ಇದೆ,(ಏಜೆನ್ಸೀಸ್​).