ಆರ್​ಸಿಬಿ ಅಂತೂ ಅಲ್ಲವೇ ಅಲ್ಲ...ಕೆವಿನ್​ ಪೀಟರ್ಸನ್​ ಪ್ರಕಾರ ಈ 4 ತಂಡ ಪ್ಲೇಆಫ್​ಗೆ ಎಂಟ್ರಿ ಆಗ್ತಾವಂತೆ! IPL 2026  
ಕ್ರಿಕೆಟ್

ಆರ್​ಸಿಬಿ ಅಂತೂ ಅಲ್ಲವೇ ಅಲ್ಲ...ಕೆವಿನ್​ ಪೀಟರ್ಸನ್​ ಪ್ರಕಾರ ಈ 4 ತಂಡ ಪ್ಲೇಆಫ್​ಗೆ ಎಂಟ್ರಿ ಆಗ್ತಾವಂತೆ! IPL 2026

ಪ್ರಮುಖ ಮುಖ್ಯಾಂಶಗಳು

  • ಮಾರ್ಚ್​ 28 ರಿಂದ ಆರಂಭವಾಗಿರುವ 19ನೇ ಆವೃತ್ತಿಯ ಐಪಿಎಲ್​ ಟೂರ್ನಮೆಂಟ್​ ಇಂದಿಗೆ ಒಂದು ವಾರ ಪೂರೈಸಿದೆ
  • ಈ ಪಂದ್ಯಾವಳಿಯಲ್ಲಿ ಈವರೆಗೂ ಆರು ಪಂದ್ಯಗಳು ಮುಕ್ತಾಯಗೊಂಡಿದ್ದು ಭರ್ಜರಿ ಮನರಂಜನೆಯನ್ನು ನೀಡಿವೆ
  • ಇದೇ ವೇಳೆ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಪ್ಲೇಆಫ್‌ಗೆ ಅರ್ಹತೆ ಪಡೆಯುವ ತಂಡಗಳನ್ನು ಹೆಸರಿಸಿದ್ದಾರೆ
IPL 2026 : ಮಾರ್ಚ್​ 28 ರಿಂದ ಆರಂಭವಾಗಿರುವ 19ನೇ ಆವೃತ್ತಿಯ ಐಪಿಎಲ್​ ಟೂರ್ನಮೆಂಟ್​ ಇಂದಿಗೆ ಒಂದು ವಾರ ಪೂರೈಸಿದ್ದು, ಭರ್ಜರಿ ಮನರಂಜನೆಯೊಂದಿಗೆ ಮುನ್ನುಗ್ಗುತ್ತಿದೆ. ಈ ಪಂದ್ಯಾವಳಿಯಲ್ಲಿ ಈವರೆಗೂ ಆರು ಪಂದ್ಯಗಳು ಮುಕ್ತಾಯಗೊಂಡಿದ್ದು, ಒಂದೊಂದು ಪಂದ್ಯವೂ ತನ್ನ ರೋಚಕತೆಯೊಂದಿಗೆ ಪ್ರೇಕ್ಷಕರಿಗೆ ಭರಪೂರ ಮನರಂಜನೆಯನ್ನು ನೀಡಿದೆ. 
ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಒಂದೊಂದು ಪಂದ್ಯಗಳನ್ನು ಗೆದ್ದಿದರೆ, ಸನ್​ ರೈಸರ್ಸ್​ ಹೈದರಾಬಾದ್​ ಒಂದು ಸೋಲು ಮತ್ತು ಒಂದು ಗೆಲುವು ಸಾಧಿಸಿದೆ. ಮೂರು ಬಾರಿಯ ಚಾಂಪಿಯನ್ ಕೆಕೆಆರ್ ಸತತ ಎರಡು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಅದೇ ರೀತಿ, ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಖನೌ ಸೂಪರ್​ ಜೈಂಟ್ಸ್​ ತಂಡಗಳು ತಮ್ಮ ಮೊದಲ ಪಂದ್ಯಗಳಲ್ಲೇ ಸೋಲು ಅನುಭವಿಸಿವೆ. ಪ್ರಸ್ತುತ, ರಾಜಸ್ಥಾನ ರಾಯಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆರ್‌ಸಿಬಿ, ದೆಹಲಿ ಮತ್ತು ಮುಂಬೈ ನಂತರದ ಸ್ಥಾನಗಳಲ್ಲಿವೆ. ಮುಂಬರುವ ಪಂದ್ಯಗಳ ನಂತರ ಈ ಸ್ಥಾನಗಳು ಬದಲಾಗುವ ಸಾಧ್ಯತೆಯಿದೆ.
ಇದೇ ಸಂದರ್ಭದಲ್ಲಿ, ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಪ್ಲೇಆಫ್‌ಗೆ ಅರ್ಹತೆ ಪಡೆಯುವ ತಂಡಗಳನ್ನು ಭವಿಷ್ಯ ನುಡಿದಿದ್ದಾರೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್​ ಮತ್ತು ಪಂಜಾಬ್ ಕಿಂಗ್ಸ್​ ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತವೆ ಎಂದು ಪೀಟರ್ಸನ್ ಭವಿಷ್ಯ ನುಡಿದಿದ್ದಾರೆ.
ಆದಾಗ್ಯೂ, ಹಾಲಿ ಚಾಂಪಿಯನ್‌ಗಳಾಗಿ ಕಣಕ್ಕೆ ಇಳಿದಿರುವ ಆರ್‌ಸಿಬಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎಂಬುದು ಗಮನಾರ್ಹ. ಇದಲ್ಲದೆ, ಅವರು ಎಸ್‌ಆರ್‌ಎಚ್, ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳನ್ನು ಸಹ ಗಣನೆಗೆ ತೆಗೆದುಕೊಳ್ಳಲಿಲ್ಲ.
ಅಂದಹಾಗೆ, ಮೊದಲ ಸುತ್ತಿನ ಪಂದ್ಯಗಳ ಫಲಿತಾಂಶದ ಆಧಾರದ ಮೇಲೆ ಕೆವಿನ್ ಪೀಟರ್ಸನ್ ಮುಂಬೈ ಇಂಡಿಯನ್ಸ್, ದೆಹಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳನ್ನು ಆಯ್ಕೆ ಮಾಡಿದ್ದಾರ, (ಏಜೆನ್ಸೀಸ್​).