ಟೀಮ್ ಇಂಡಿಯಾ ಬಗ್ಗೆ ಇಂಜಮಾಮ್​ ಆರೋಪ 
ಕ್ರಿಕೆಟ್

ಜಯ್ ಶಾ ಫೋನ್​ ಮಾಡಿ... ಇದಕ್ಕೆ ಹೆದರಿ ವಿಂಡೀಸ್​ ಭಾರತ ಮುಂದೆ ಸೋಲಿಗೆ ಶರಣಾಯ್ತು! ಇಂಜಮಾಮ್​ ಆರೋಪ

ಪ್ರಮುಖ ಮುಖ್ಯಾಂಶಗಳು

  • ರೋಮಾಂಚನಕಾರಿ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸಾಕ್ಷಿ
  • ವೆಸ್ಟ್ ಇಂಡೀಸ್​ ವಿರುದ್ಧ ಟೀಮ್ ಇಂಡಿಯಾ ರೋಚಕ ಗೆಲುವು
  • ವಿಂಡೀಸ್​ ಪಡೆಯನ್ನು ಬಗ್ಗುಬಡಿದ ಭಾರತ ಈಗ ಸೆಮಿಫೈನಲ್​ಗೆ ಲಗ್ಗೆ
Inzamam-ul-Haq: ನಿನ್ನೆ (ಮಾ.02) ರೋಮಾಂಚನಕಾರಿ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸಾಕ್ಷಿಯಾಯಿತು. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಕೊನೆಯ ಸೂಪರ್​-8 ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು ಸಾಧಿಸುವ ಮೂಲಕ ಸೆಮೀಸ್​ಗೆ ಅರ್ಹತೆ ಪಡೆಯಿತು. ಅಂತಿಮವಾಗಿ ಈ ಪಂದ್ಯದಲ್ಲಿ ವಿಂಡೀಸ್​ ಪಡೆಯನ್ನು ಬಗ್ಗುಬಡಿದ ಭಾರತಕ್ಕೆ ಕ್ರಿಕೆಟ್​ ಪ್ರಿಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಈ ಮಧ್ಯೆ, ಪಾಕ್ ಮಾಜಿ ಹಿರಿಯ ಆಟಗಾರ ಇಂಜಮಾಮ್​ ಉಲ್​-ಹಕ್ ಆಡಿರುವ ಮಾತುಗಳು ಸದ್ಯ ಹಲವರನ್ನು ಕೆರಳಿಸಿದೆ.  
ಒಂದೆಡೆ, ಪಾಕಿಸ್ತಾನ ಟಿ20 ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದರೆ, ವಿಂಡೀಸ್​ ವಿರುದ್ಧ ಗೆದ್ದ ಭಾರತ ನೇರವಾಗಿ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದೆ. ಇದನ್ನು ಸಹಿಸಲಾರದ ಪಾಕೀಗಳು, ಒಂದಲ್ಲ ಒಂದು ಆರೋಪವನ್ನು ಹೊರಿಸುತ್ತಿದ್ದಾರೆ. ಕೆಲವರು ಈ ಪಂದ್ಯದಲ್ಲಿ ಫಿಕ್ಸಿಂಗ್ ಆಗಿದೆ. ಭಾರತ ಎದುರು ವೆಸ್ಟ್ ಇಂಡೀಸ್​ ಗೆಲ್ಲದಂತೆ ಮಾಡಲಾಗಿದೆ ಎಂದೆಲ್ಲ ಆರೋಪಿಸಲಾಗಿದೆ. ಈ ಪೈಕಿ ಇಂಜಮಾಮ್​ ಆಡಿರುವ ಮಾತುಗಳು ಭಾರತೀಯ ಕ್ರಿಕೆಟ್​ ಪ್ರಿಯರ ಪಿತ್ತವನ್ನು ನೆತ್ತಿಗೇರಿಸಿದೆ. 

ಫೋನ್ ಮಾಡಿ ಬೆದರಿಕೆ

ಭಾರತ ಮತ್ತು ವೆಸ್ಟ್ ಇಂಡೀಸ್​ ಪಂದ್ಯ ಫೀಕ್ಸಿಂಗ್​ ಆಗಿದೆ. ಟೀಮ್ ಇಂಡಿಯಾ ಎರಡು ವಿಕೆಟ್ ಕಳೆದುಕೊಂಡ ತಕ್ಷಣ, ಐಸಿಸಿ ಅಧ್ಯಕ್ಷ ಜಯ್ ಶಾ ಮಧ್ಯಪ್ರವೇಶಿಸಿದ್ದಾರೆ. ಅವರು ವೆಸ್ಟ್ ಇಂಡೀಸ್ ಆಟಗಾರರಿಗೆ ಫೋನ್​ ಮಾಡಿ ಬೆದರಿಕೆ ಹಾಕಿದ್ದಾರೆ. ವಿಕೆಟ್​ಗಳು ಉರುಳಿತ್ತಿದ್ದಂತೆ ಖುದ್ದಾಗಿ ಅವರೇ ಮೈದಾನಕ್ಕಿಳಿದು, ಅಲ್ಲಿನ ಆಡಳಿತ ಮಂಡಿಳಿ ಜತೆ ಮಾತುಕತೆ ನಡೆಸಿದ್ದಾರೆ. ಹೀಗಾಗಿಯೇ, ಭಾರತ ತಂಡವು ಸುಲಭವಾಗಿ ಗೆಲುವು ಸಾಧಿಸಿದೆ ಎಂದು ಇಂಜಮಾಮ್-ಉಲ್-ಹಕ್ ಗಂಭೀರ ಆರೋಪ ಹೊರಿಸಿದ್ದಾರೆ. 

ಹಣ ಕೊಟ್ಟು ಖರೀದಿ

ಜಿಂಬಾಬ್ವೆ ಆಟಗಾರರಿಗೆ ಹೀಗೆ ಬೆದರಿಕೆ ಹಾಕಿದರು. ಮತ್ತು ಅವರನ್ನು ಹಣ ಕೊಟ್ಟು ಖರೀದಿಸಲಾಯಿತು. ಮ್ಯಾಚ್ ಫಿಕ್ಸಿಂಗ್‌ ಮಾಡಿಕೊಂಡಿದ್ದರಿಂದಲೇ ಟೀಮ್ ಇಂಡಿಯಾ ಗೆದ್ದಿದೆ. ಇಲ್ಲದಿದ್ದರೆ, 195 ರನ್‌ಗಳ ಗುರಿಯನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಐಸಿಸಿಯಿಂದ ವಿವರಣೆ ಪಡೆಯುತ್ತೇನೆ. ಐಸಿಸಿ ಬಿಸಿಸಿಐ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಹೀಗಾದರೆ, ಮುಂದಿನ ದಿನಗಳಲ್ಲಿ ಕ್ರಿಕೆಟ್ ಆಡುವುದು ಕಷ್ಟ ಎಂದು ಟೀಕಿಸಿದ್ದಾರೆ,(ಏಜೆನ್ಸೀಸ್).