ಡೇವಿಡ್​ ಮಿಲ್ಲರ್​ ಜತೆಗಿನ ರೀಲ್ಸ್​ ಡಿಲೀಟ್​ ಮಾಡಿದ ಯುವತಿ! David Miller  
ಕ್ರಿಕೆಟ್

ರೇಪ್​ ಬೆದರಿಕೆ ಬಂದ ಬೆನ್ನಲ್ಲೇ ಡೇವಿಡ್​ ಮಿಲ್ಲರ್​ ಜತೆಗಿನ ರೀಲ್ಸ್​ ಡಿಲೀಟ್​ ಮಾಡಿದ ಯುವತಿ! David Miller

ಪ್ರಮುಖ ಮುಖ್ಯಾಂಶಗಳು

  • ಸೂಪರ್​ 8 ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಅನುಭವಿಸಿದ್ದು ಎಲ್ಲರಿಗೂ ಗೊತ್ತೇ ಇದೆ
  • ಡೇವಿಡ್ ಮಿಲ್ಲರ್ 35 ಎಸೆತಗಳಲ್ಲಿ 63 ರನ್ ಗಳಿಸಿ ದಕ್ಷಿಣ ಆಫ್ರಿಕಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು
  • ಮಿಲ್ಲರ್ ಜತೆಗಿನ ರೀಲ್ಸ್ ಡಿಲೀಟ್ ಮಾಡಿದ ಐಸಿಸಿ ಆಹ್ವಾನಿತ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ​
David Miller : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಭಾಗವಾಗಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸೂಪರ್-8 ಪಂದ್ಯದಲ್ಲಿ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಹೀನಾಯ ಸೋಲು ಅನುಭವಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ 35 ಎಸೆತಗಳಲ್ಲಿ 63 ರನ್ ಗಳಿಸಿ ದಕ್ಷಿಣ ಆಫ್ರಿಕಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೆ, ತಮ್ಮ ಅದ್ಭುತ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದರು.
ಪ್ರಶಸ್ತಿ ಪ್ರದಾನ ಸಮಾರಂಭದ ನಂತರ, ಐಸಿಸಿ ಆಹ್ವಾನಿತ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಪ್ರಿನ್ಸ್ ಪಾರಿಖ್, ಮಿಲ್ಲರ್ ಜೊತೆ ರೀಲ್ಸ್​ ಮಾಡಿದರು. ಮಿಲ್ಲರ್ ಸುತ್ತಲೂ ನಡೆಯುತ್ತಾ ವ್ಯಂಗ್ಯವಾಗಿ ಚಪ್ಪಾಳೆ ತಟ್ಟುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪಾರಿಖ್​ ಪೋಸ್ಟ್ ಮಾಡಿದರು. ಈ ರೀಲ್ಸ್​ ವೈರಲ್​ ಆಗಿ, ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. ಅನೇಕರಿಗೆ ಈ ವಿಡಿಯೋ ತಮಾಷೆಯೆನಿಸಿದರೆ, ಕೆಲವರಿಗೆ ಈ ವಿಡಿಯೋ ಕೊಂಚವೂ ಇಷ್ಟವಾಗಲಿಲ್ಲ. ಹೀಗಾಗಿ, ಪಾರಿಖ್ ಮೇಲೆ ಆನ್‌ಲೈನ್‌ನಲ್ಲಿ ವಾಗ್ದಾಳಿ ಮಾಡಲಾಯಿತು. ಅಲ್ಲದೇ. ರೇಪ್​ ಬೆದರಿಕೆ ಹಾಕಲಾಗಿದೆ ಮತ್ತು ಬಾಡಿ ಶೇಮಿಂಗ್​ ಮಾಡುವ ಕಾಮೆಂಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಮಾಡಲಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಪಾರಿಖ್, "ನಾನು ಡೇವಿಡ್ ಮಿಲ್ಲರ್ ಜೊತೆ ಮಾಡಿದ ವಿಡಿಯೋವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದೇನೆ. ನನಗೆ ಬಂದ ನೂರಾರು ಅಶ್ಲೀಲ ಕಾಮೆಂಟ್‌ಗಳು ಮತ್ತು ಅತ್ಯಾಚಾರ ಬೆದರಿಕೆಗಳನ್ನು ನನ್ನಿಂದ ಸಹಿಸಲಾಗಲಿಲ್ಲ. ನನಗೆ ಅಶ್ಲೀಲ ಕಾಮೆಂಟ್‌ಗಳು ಬಂದಂತಹ ಖಾತೆಗಳ ಬಳಕೆದಾರ ಹೆಸರುಗಳು ಮತ್ತು ಮೆಸೇಜ್​ಗಳನ್ನು ನಾನು ಬಹಿರಂಗಪಡಿಸುತ್ತೇನೆ. ಈ ಕುರಿತು ನಾನು ಪೊಲೀಸರಿಗೆ ದೂರು ನೀಡುತ್ತೇನೆ. ಭವಿಷ್ಯದಲ್ಲಿ ಯಾರಿಗೂ ಅಂತಹ ಬೆದರಿಕೆಗಳು ಬರುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪಾರಿಖ್​ ಅವರು ಸ್ಟೋರಿ ಪೋಸ್ಟ್​ ಮಾಡಿದ್ದಾರೆ.
ಅಂದಹಾಗೆ, ಪ್ರಿನ್ಸಿ ಪಾರಿಖ್ ಅವರು ಐಸಿಸಿ ಆಹ್ವಾನಿಸಿದ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ಗಳಲ್ಲಿ ಒಬ್ಬರು. ಇನ್‌ಸ್ಟಾಗ್ರಾಮ್‌ನಲ್ಲಿ 1.7 ಮಿಲಿಯನ್ ಮತ್ತು ಫೇಸ್‌ಬುಕ್‌ನಲ್ಲಿ 30,000 ಫಾಲೋವರ್‌ಗಳನ್ನು ಹೊಂದಿದ್ದಾರೆ. ಅವರು ಈ ಹಿಂದೆ ಹಾರ್ದಿಕ್ ಪಾಂಡ್ಯ, ಕೇನ್ ವಿಲಿಯಮ್ಸನ್ ಮತ್ತು ಸ್ಮೃತಿ ಮಂಧಾನ ಅವರೊಂದಿಗೆ ರೀಲ್‌ಗಳನ್ನು ಮಾಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಹೀನಾಯ ಸೋಲಿನ ನಂತರ ಭಾರತದ ಸೆಮಿಫೈನಲ್ ಅವಕಾಶಗಳು ಜಟಿಲವಾಗಿವೆ. ಈಗ ಉಳಿದಿರುವ ಎರಡೂ ಪಂದ್ಯಗಳನ್ನು ಭಾರತ ಭಾರಿ ಅಂತರದಲ್ಲಿ ಗೆಲ್ಲಬೇಕಾಗಿದೆ, (ಏಜೆನ್ಸೀಸ್​).