ಭಾರತದ ಸೆಮೀಸ್​ ಆಸೆಗೆ ಇದೊಂದೆ ಮಾರ್ಗ! Indian Team 
ಕ್ರಿಕೆಟ್

ಭಾರತದ ಸೆಮೀಸ್​ ಆಸೆಗೆ ಇದೊಂದೆ ಮಾರ್ಗ...ದೇವರೆ 1000 ತೆಂಗಿನಕಾಯಿ ಒಡಿತೀವಿ ಅಂದ್ರು ಫ್ಯಾನ್ಸ್​! Indian Team

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪುವ ಟೀಮ್ ಇಂಡಿಯಾದ ಹಾದಿ ತುಂಬಾ ಕಠಿಣವಾಗಿದೆ
  • ಸೂಪರ್​ 8ರ ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರಿ ರನ್​ ಅಂತರದಲ್ಲಿ ಸೋತಿದ್ದೇ ಇದಕ್ಕೆ ಕಾರಣ
  • ವೆಸ್ಟ್ ಇಂಡೀಸ್ ತಂಡ ಜಿಂಬಾಬ್ವೆ ವಿರುದ್ಧ ನೂರಕ್ಕೂ ಹೆಚ್ಚು ರನ್​ಗಳ ಅಂತರದಿಂದ ಗೆದ್ದಿರುವುದು ಭಾರತಕ್ಕೆ ಸಂಕಷ್ಟ
Indian Team : ಪ್ರಸ್ತುತ ನಡೆಯುತ್ತಿತುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪುವ ಟೀಮ್ ಇಂಡಿಯಾದ ಹಾದಿ ತುಂಬಾ ಕಠಿಣವಾಗಿದೆ. ಸೂಪರ್​ 8ರ ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರಿ ರನ್​ ಅಂತರದಲ್ಲಿ ಸೋಲುಂಡಿರುವ ಟೀಮ್ ಇಂಡಿಯಾ, ಸೆಮಿಫೈನಲ್ ತಲುಪುವುದು ಬಹುತೇಕ ಅಸಾಧ್ಯ ಎನ್ನುವ ಮಾತಿದೆ. ಇದಕ್ಕೆ ಕಾರಣ ಟೀಮ್ ಇಂಡಿಯಾದ ನೆಟ್​ ರನ್​ ರೇಟ್​ ಮೈನಸ್​ ಇದೆ. ಅಲ್ಲದೆ, ವೆಸ್ಟ್ ಇಂಡೀಸ್ ತಂಡ ಜಿಂಬಾಬ್ವೆ ವಿರುದ್ಧ ನೂರಕ್ಕೂ ಹೆಚ್ಚು ರನ್​ಗಳ ಅಂತರದಿಂದ ಗೆದ್ದಿರುವುದು ಭಾರತದ ಸಮಿಫೈನಲ್​ ಆಸೆಗೆ ಮತ್ತಷ್ಟು ತಣ್ಣೀರು ಎರಚಿದಂತಾಗಿದೆ. ಹೀಗಾಗಿ, ಟೀಮ್ ಇಂಡಿಯಾಗೆ ಹೊಸ ತಲೆನೋವು ಆರಂಭವಾಗಿದೆ.
ಟಿ20 ವಿಶ್ವಕಪ್ ಟೂರ್ನಿಯ ಹಿನ್ನೆಲೆಯಲ್ಲಿ ಸೂಪರ್ 8 ಪಂದ್ಯಗಳು ನಡೆಯುತ್ತಿವೆ. ಈ ಹಂತದಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ತಲುಪಲು ಕೆಲವು ಮಾರ್ಗಗಳಿವೆ. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಫೆಬ್ರವರಿ 26 ರಂದು ಮಧ್ಯಾಹ್ನ 3 ಗಂಟೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ದಕ್ಷಿಣ ಆಫ್ರಿಕಾ ಈ ಪಂದ್ಯವನ್ನು ಗೆದ್ದು ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಬೇಕು. ಅದೇ ಸಮಯದಲ್ಲಿ, ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯಗಳಲ್ಲಿ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಬೇಕು.
ಹೌದು, ಫೆಬ್ರವರಿ 26 ರಂದು ನಡೆಯಲಿರುವ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆದ್ದರೆ, ಟೀಮ್ ಇಂಡಿಯಾ ಸೆಮಿಫೈನಲ್ ತಲುಪುವುದು ತುಂಬಾ ಕಷ್ಟಕರವಾಗಿರುತ್ತದೆ. ಪವಾಡ ಸಂಭವಿಸದ ಹೊರತು, ಟೀಮ್ ಇಂಡಿಯಾ ಸೆಮಿಫೈನಲ್ ತಲುಪುವುದು ಅಸಾಧ್ಯ. ಟೀಮ್ ಇಂಡಿಯಾ ಸೆಮಿಫೈನಲ್ ತಲುಪಬೇಕಾದರೆ ಇನ್ನೂ ಒಂದು ದಾರಿ ಇದೆ. ಅದೇನೆಂದರೆ, ವರುಣ ಕೃಪೆ ತೋರಬೇಕು.
ಹೌದು, ಮಳೆಯಿಂದಾಗಿ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಪಂದ್ಯ ರದ್ದಾಗಬೇಕು. ಅದೇ ಸಮಯದಲ್ಲಿ, ಟೀಮ್ ಇಂಡಿಯಾ ತನ್ನ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಆಗ ಟೀಮ್ ಇಂಡಿಯಾ ಸುಲಭವಾಗಿ ಸೆಮಿಫೈನಲ್ ತಲುಪುವ ಅವಕಾಶವಿರುತ್ತದೆ. ಇದಲ್ಲದೆ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದರೆ, ದಕ್ಷಿಣ ಆಫ್ರಿಕಾವನ್ನು ಜಿಂಬಾಬ್ವೆ ಸೋಲಿಸಬೇಕು. ಆಗ ಟೀಮ್​ ಇಂಡಿಯಾಗೆ ಅವಕಾಶವಿರುತ್ತದೆ.
ಪ್ರಸ್ತುತ ಟೀಮ್ ಇಂಡಿಯಾ ಸೆಮಿಫೈನಲ್ ತಲುಪಲು ಸಾವಿರಕ್ಕೂ ಹೆಚ್ಚು ಅಡೆತಡೆಗಳಿವೆ. ಈ ಎಲ್ಲಾ ತೊಂದರೆಗಳಿಗಿಂತ ಹೆಚ್ಚಾಗಿ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯಕ್ಕೆ ಮಳೆಯಿಂದ ಅಡಚಣೆ ಉಂಟಾಗಿ ಟೀಮ್ ಇಂಡಿಯಾಗೆ ಇರುವ ಅಡೆತಡೆ ತೆರವುಗೊಳಿಸಬೇಕೆಂದು ಅಭಿಮಾನಿಗಳು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅಭಿಮಾನಿಗಳು 1000 ತೆಂಗಿನಕಾಯಿಗಳನ್ನು ಒಡೆಯುವುದಾಗಿಯೂ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸೂಪರ್ 8ರ ಭಾಗವಾಗಿ ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಫೆ.26ರಂದು ಎದುರಿಸಲಿದೆ. ಬಳಿಕ ಮಾರ್ಚ್ 1 ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ, (ಏಜೆನ್ಸೀಸ್​).